''ನಾನಿನ್ನು ಕಣ್ಣು ಬಿಡುತ್ತಿರುವ ಕಲಾವಿದ'' : ದರ್ಶನ್ ಬಗ್ಗೆ ನಿಖಿಲ್ ಓಪನ್ ಟಾಕ್
Recommended Video
''ನಾನು ಈಗ ತಾನೇ ಕಣ್ಣು ಬಿಡುತ್ತಿರುವ ಕಲಾವಿದ, ದರ್ಶನ್ ಅವರ ಕೊಡುಗೆ ಬಹಳ ದೊಡ್ಡದಿದೆ. ಅವರ ಬಗ್ಗೆ ಗೌರವ ಇದೆ. ಇಂಡಸ್ಟ್ರಿಗೆ ಬಹಳಷ್ಟು ದೊಡ್ಡ ದೊಡ್ಡ ಸಿನಿಮಾಗಳನ್ನು ಕೊಟ್ಟಿದ್ದಾರೆ.'' ಈ ರೀತಿ ದರ್ಶನ್ ಬಗ್ಗೆ ಹೇಳಿರುವುದು ನಟ ನಿಖಿಲ್ ಕುಮಾರ್.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಪುತ್ರ ನಿಖಿಲ್ ಕುಮಾರ್ ಮಂಡ್ಯ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ನಟಿ ಸುಮಲತಾ ಅವರ ಪ್ರತಿಸ್ಪರ್ಧಿ ಆಗಿದ್ದರು. ಸುಮಲತಾ ಬೆನ್ನ ಹಿಂದೆ ನಿಂತ ದರ್ಶನ್ ಮತ್ತು ಯಶ್ ಅವರಿಗೆ ದೊಡ್ಡ ಪೈಪೋಟಿ ನೀಡಿದ್ದರು. ನಿಖಿಲ್ ಸೋಲಿನಲ್ಲಿ ಇದು ಒಂದು ಪ್ರಮುಖ ಕಾರಣ ಆಗಿತ್ತು.
ಹೀಗಾಗಿ, ಚುನಾವಣೆಯಲ್ಲಿ ಇದ್ದ ಕೋಪ, ಮನಸ್ತಾಪ ಈಗಲೂ ದರ್ಶನ್ ಹಾಗೂ ನಿಖಿಲ್ ಮಧ್ಯೆ ಇದೆ ಎನ್ನುವ ಮಾತಿದೆ. ಅಲ್ಲದೆ, 'ಕುರುಕ್ಷೇತ್ರ' ಚಿತ್ರದ ಕಾರ್ಯಕ್ರಮಗಳಲ್ಲಿ ದರ್ಶನ್ ಜೊತೆಗೆ ನಿಖಿಲ್ ಕಂಡಿರಲಿಲ್ಲ. ಇದು ಇಂತಹ ಮಾತುಗಳಿಗೆ ಪುಷ್ಟಿ ನೀಡಿತ್ತು.
ಅದೆನೇ ಇರಲಿ, ಚುನಾವಣೆಯ ಬಳಿಕ, ಇದೀಗ ದರ್ಶನ್ ಬಗ್ಗೆ ನಿಖಿಲ್ ಕುಮಾರ್ ಮಾತನಾಡಿದ್ದಾರೆ. 'ಕುರುಕ್ಷೇತ್ರ'ದ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಲು ಬಂದಿದ್ದ ಅವರು ಅನೇಕ ಮುಖ್ಯ ವಿಷಯಗಳನ್ನು ಮಾಧ್ಯಮದ ಜೊತೆಗೆ ಹಂಚಿಕೊಂಡಿದ್ದಾರೆ....

ದರ್ಶನ್ ಅವರ ಕೊಡುಗೆ ಬಹಳ ದೊಡ್ಡದಿದೆ
''ನಾನು ಈಗ ಕಣ್ಣು ಬಿಡುತ್ತಿರುವ ಕಲಾವಿದ, ದರ್ಶನ್ ಅವರ ಬಗ್ಗೆ ಗೌರವ ಇದೆ. ದರ್ಶನ್ ಅವರ ಕೊಡುಗೆ ಬಹಳ ದೊಡ್ಡದಿದೆ. ಇಂಡಸ್ಟ್ರಿಗೆ ಬಹಳಷ್ಟು ದೊಡ್ಡ ದೊಡ್ಡ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ.'' ಎಂದು ದರ್ಶನ್ ಬಗ್ಗೆ ನಟ ನಿಖಿಲ್ ಕುಮಾರ್ ಮಾತನಾಡಿದ್ದಾರೆ. ಮಂಡ್ಯ ಚುನಾವಣೆಯ ಬಳಿಕ ಮೊದಲ ಬಾರಿಗೆ ದರ್ಶನ್ ಬಗ್ಗೆ ಹೇಳಿಕೆ ನೀಡಿದ್ದಾರೆ.

ಎಲ್ಲರಿಗೂ 'ಕುರುಕ್ಷೇತ್ರ' ವಿಶೇಷ ಸಿನಿಮಾ
''ಕುರುಕ್ಷೇತ್ರ' ದರ್ಶನ್ ಅವರ 50ನೇ ಸಿನಿಮಾ ಆಗಿರುವ ಕಾರಣ ಬಹಳ ವಿಶೇಷವಾದದ್ದು. ಅವರಿಗೆ ಮಾತ್ರವಲ್ಲದೆ, ಎಲ್ಲರಿಗೂ ಇದು ಸ್ಪೆಷಲ್ ಸಿನಿಮಾ. ಅಭಿಮಾನಿಗಳು ಆಗಸ್ಟ್ 9 ರಂದು ಸಿನಿಮಾ ನೋಡಲು ಕಾಯುತ್ತಿರುತ್ತಾರೆ.'' ಎಂದು ನಿಖಿಲ್ ಹೇಳಿದ್ದಾರೆ. 'ಕುರುಕ್ಷೇತ್ರ' ಚಿತ್ರದಲ್ಲಿ ನಿಖಿಲ್ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದರ್ಶನ್ ಬಗ್ಗೆ ಗೌರವ ಇದೆ
''ಕೆಲವು ಸಂದರ್ಭಗಳಲ್ಲಿ ಹಾಗೆ ಆಗುತ್ತದೆ. ಮಂಡ್ಯ ಚುನಾವಣೆ ಸಮಯದಲ್ಲಿ ನನ್ನ ಮತ್ತು ದರ್ಶನ್ ನಡುವೆ ವೈಯಕ್ತಿಕವಾಗಿ ಮನಸ್ತಾಪ ಇದೆಯೇ ಎನ್ನುವ ಪ್ರಶ್ನೆ ಉದ್ಭವ ಆಗುತ್ತದೆ. ಆದರೆ, ಚುನಾವಣೆಯನ್ನು ಅದರ ರೀತಿಯೇ ನಡೆಸಬೇಕಾಗುತ್ತದೆ. ಅದೇ ರೀತಿ ಇರಬೇಕಾಗುತ್ತದೆ. ನನಗೆ ಅವರ ಮೇಲೆ ಗೌರವ ಇದೆ. ಅವರಿಗೂ ನನ್ನ ಮೇಲೆ ಗೌರವ ಇದೆ.'' ಎಂದಿದ್ದಾರೆ ನಿಖಿಲ್.

ಮಾತನಾಡಲು ಅವಕಾಶ ಸಿಕ್ಕಿಲ್ಲ ಅಷ್ಟೇ
ದರ್ಶನ್ ಜೊತೆಗೆ ಯಾವುದೇ ಮುನಿಸು ಇಲ್ಲ ಎಂದು ನಿಖಿಲ್ ಸ್ಪಷ್ಟವಾಗಿ ಹೇಳಿದ್ದಾರೆ. ಆಗಿದ್ದ ಮೇಲೆ ಚುನಾವಣೆಯ ಬಳಿಕ ನೀವು ದರ್ಶನ್ ಜೊತೆಗೆ ಮಾತಾನಾಡಿದ್ದೀರಾ ಎಂದರೆ, 'ಇಲ್ಲ' ಎಂದು ನಿಖಿಲ್ ಉತ್ತರ ನೀಡಿದ್ದಾರೆ. ''ದರ್ಶನ್ ರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿಲ್ಲ. ಮುಂದೆ ಸಿಕ್ಕರೆ ನಾವು ಭೇಟಿ ಮಾಡಿ ಮಾತನಾಡುತ್ತೇವೆ.'' ಎಂದು ನಿಖಿಲ್ ಪ್ರತಿಕ್ರಿಯೆ ನೀಡಿದ್ದಾರೆ.

ದ್ವೇಷ ಮಾಡಿ ಬೆಳೆಯುತ್ತೇವೆ ಎನ್ನುವುದು ಸುಳ್ಳು
''ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಾನು ಬರಬೇಕಾಗಿತ್ತು. ರಾಜಕೀಯ ಕಾರಣಗಳು ಏನೇ ಇದ್ದರೂ, ಮುನಿರತ್ನ ಅವರೇ ಸ್ವತಃ ಕಾರ್ಯಕ್ರಮಕ್ಕೆ ಬಂದಿದ್ದರು. ಆಡಿಯೋ ರಿಲೀಸ್ ದಿನ ಕಲಾಪ ಇತ್ತು. ಅಂದು ನನ್ನ ಕಾರ್ಯಕರ್ತರಿಗೆ ನಾನು ಉತ್ತರ ನೀಡಬೇಕಾಗಿತ್ತು. ನಾನೊಬ್ಬ ಬರೀ ಒಬ್ಬ ಕಲಾವಿದ ಆಗಿದ್ದರೆ ಬೇರೆ ಮಾತು. ಈ ರೀತಿ ಅನಿವಾರ್ಯ ಕಾರಣದಿಂದ ಬಂದಿಲ್ಲ ಅಷ್ಟೇ.''


Click it and Unblock the Notifications











