ರೈಡರ್‌ ಚಿತ್ರದ ಕೂಲೆಸ್ಟ್ ಸಾಂಗ್‌ ರಿಲೀಸ್!

ನಟ ನಿಖಿಲ್‌ ಕುಮಾರ್‌ ಅಭಿನಯದ ರೈಡರ್‌ ಚಿತ್ರದ ಟೀಸರ್‌ ಈಗಾಗಲೇ ರಿಲೀಸ್‌ ಆಗಿ ಚಿತ್ರದ ಬಗ್ಗೆ ಒಂದಷ್ಟು ಸುಳಿವು ಬಿಟ್ಟು ಕೊಟ್ಟಿತ್ತು. ಇನ್ನು ರಿಲೀಸ್‌ ಆದ ಟೀಸರ್ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಎಂಬುದನ್ನು ಹೇಳಿತ್ತು. ಈಗ ರಿಲೀಸ್‌ ಆಗಿರುವ ಮೆಲೋಡಿ ಹಾಡು ಬೇರೆಯ ಕಥೆಯನ್ನೇ ಹೇಳುತ್ತಿದೆ.

ಮೆಲ್ಲನೆ ಬೆರಳು ಹಿಡಿದು ನಡೆಯಲು ಸಜ್ಜಾದ ನಟ ನಿಖಿಲ್ ಕುಮಾರ್!

ರೈಡರ್ ಚಿತ್ರದ ಎರಡನೇ ಹಾಡು ರಿಲೀಸ್‌ ಆಗಿದೆ. ಮೊದಲ ಹಾಡಿನಲ್ಲಿ ಡವ್ವಾ, ಡವ್ವಾ ಅಂತ ಹುಡುಗಿಯ ಹಿಂದೆ ಹೆಜ್ಜೆ ಹಾಕಿದ್ದ ನಟ ನಿಖಿಲ್ ಕುಮಾರ್, ಈಗ "ಮೆಲ್ಲನೆ ಬೆರಳು ಬೆಸೆದು ನಡೆಯುವ ಚೂರು ದೂರ' ಅಂತ ಹೀರೋಯಿನ್‌ ಜೊತೆಗೆ ಡ್ಯುಯೆಟ್‌ ಹಾಡುತ್ತಿದ್ದಾರೆ. ಹಾಡಿನ ವಿಚಾರ ಬಂದಾಗ ಸಂಗೀತ, ಸಾಹಿತ್ಯ ಮೊದಲು ಮುಖ್ಯ ಆಗುತ್ತದೆ. ನಂತರ ಬರುವುದು ಹಾಡಿನ ನಿರ್ದೇಶನ ಮತ್ತು ಛಾಯಾಗ್ರಹಣ. ಈ ಹಾಡಿನಲ್ಲಿ ಇದೆಲ್ಲವೂ ಪರ್ಫೆಕ್ಟ್ ಅಂತ ಹೇಳಬಹುದು. ಒಮ್ಮೆ ಹಾಡು ಶುರುವಾದರೆ ರೈಡರ್‌ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಈ ಮೆಲೋಡಿ ಹಾಡಿನಲ್ಲಿ ಸಾಹಿತ್ಯ ಮತ್ತು ಸಂಗೀತ ಅಚ್ಚುಕಟ್ಟಾಗಿ ಹೊಂದಿಕೊಂಡಿದೆ. ಕವಿರಾಜ್‌ ಬರೆದಿರುವ ಸಾಹಿತ್ಯಕ್ಕೆ ಸಂಜಿತ್ ಹೆಗ್ಡೆ ಧ್ವನಿ ನೀಡಿದ್ದಾರೆ.

ಲೇ ಲಡಾಕ್‌ನಲ್ಲಿ ಸಂಪೂರ್ಣ ಹಾಡಿನ ಚಿತ್ರೀಕರಣ!

ಈ ಹಾಡಿಗಾಗಿ ಚಿತ್ರ ತಂಡ ಆಯ್ಕೆ ಮಾಡಿಕೊಂಡಿರುವ ಲೊಕೇಶನ್ ಹೆಚ್ಚು ಮಗನ ಸೆಳೆಯುತ್ತದೆ. ಲೇ ಲಡಾಕ್‌ನಲ್ಲಿ ಸಂಪೂರ್ಣ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಸುಂದರ ತಾಣಗಳಿಗೆ ಅನುಸಾರವಾಗಿ ಛಾಯಾಗ್ರಾಹಕ ಶ್ರೀಶ ಕುದುವಳ್ಳಿ ಜಾದು ಮಾಡಿದ್ದಾರೆ ಎಂದೇ ಹೇಳಬಹುದು. ಹಾಡಿನ ಪ್ರತೀ ಫ್ರೇಮ್‌ ಕೂಡ ಪೇಂಟಿಂಗ್‌ನಂತೆ ಕಂಗೊಳಿತ್ತಿವೆ. ಭೂಷಣ್ ಮಾಸ್ಟರ್ ಕೊರಿಯೋಗ್ರಫಿ ಕೂಡ ಅದ್ಭುತ ಎನಿಸುತ್ತದೆ. ಲೇ ಲಡಾಕ್‌ನ ಪರ್ವತ, ನೀರು, ಹಿಮದ ನಡುವೆ ಕಲರ್‌ ಫುಲ್‌ ಕಾಸ್ಟ್ಯೂಂಗಳಲ್ಲಿ ಬಣ್ಣದ ಚಿಟ್ಟೆಗಳಂತೆ ಕಾಣಿಸುತ್ತಾರೆ ನಟ ನಿಖಿಲ್‌ ಕುಮಾರ್‌ ಮತ್ತು ನಾಯಕಿ ಕಾಶ್ಮಿರ ಪರದೇಸಿ. ಇನ್ನೂ ಒಟ್ಟಾರೆ ಹಾಡು ಬಾಲಿವುಡ್‌ನ ದಿಲ್‌ವಾಲೆ ಚಿತ್ರದ "ಗೇರುವ' ಹಾಡನ್ನು ನೆನಪಿಸುವಂತಿದೆ.

Nikhil Kumar Starrer Rider Movie Song Release

ನಟ ನಿಖಿಲ್ ಕುಮಾರ್ ಸದ್ಯ ರೈಡಲ್‌ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಚಿತ್ರ ತಂಡ ನಿರತವಾಗಿದೆ. ಇನ್ನು ಕೆಲವೇ ದಿನದಲ್ಲಿ ಸಿನಿಮಾದ ರಿಲೀಸ್‌ ದಿನಾಂಕವನ್ನು ಚಿತ್ರ ತಂಡ ಪ್ರಕಟ ಮಾಡಲಿದೆ. ಸೀತಾರಾಮ ಕಲ್ಯಾಣ ಚಿತ್ರದ ನಂತರ ರೈಡರ್‌ ಆಗಿ ನಿಖಿಲ್ ಕುಮಾರ್‌ ಬೆಳ್ಳಿ ಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಸೀತಾರಾಮ ಕಲ್ಯಾಣ 2019ರಲ್ಲಿ ತೆರೆಕಂಡಿತ್ತು. ಆ ಬಳಿಕ ನಿಖಿಲ್ ಅಭಿನಯದ ಯಾವ ಚಿತ್ರವೂ ಬಂದಿರಲಿಲ್ಲ. ರೈಡರ್ ಈಗಾಗಲೇ ರಿಲೀಸ್‌ ಆಗಬೇಕಿತ್ತು. ಆದರೆ ಕೊರೊನಾ ಮತ್ತು ಲಾಕ್‌ ಡೌನ್‌ನಿಂದಾಗಿ ಚಿತ್ರದ ಕೆಲಸಗಳು ತಡವಾಗುತ್ತಿವೆ. ಎರಡು ಬಾರಿಯ ಲಾಕ್‌ಡೌನ್ ಚಿತ್ರದ ಶೂಟಿಂಗ್‌ಗೆ ಅಡಚಣೆ ಉಂಟು ಮಾಡಿತ್ತು. ಹಾಗಾಗಿ ಸಿನಿಮಾ ಸಾಕಷ್ಟು ಮುಂದೆ ಹೋಗಿದೆ. ಇಲ್ಲವಾಗಿದ್ದರೆ ಚಿತ್ರ ತಂಡದ ಯೋಜನೆಯಂತೆ ಇದೇ ವರ್ಷ ಸಿನಿಮಾ ತೆರೆಗೆ ಬರಬೇಕಿತ್ತು.

Nikhil Kumar Starrer Rider Movie Song Release

ತೆಲುಗು ನಿರ್ದೇಶಕ ವಿಜಯ್‌ಕುಮಾರ್‌ ಕೊಂಡ ರೈಡರ್‌ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಶಿವರಾಜ್‌ ಕೆ.ಆರ್‌ ಪೇಟೆ, ಚಿಕ್ಕಣ್ಣ, ಅಚ್ಯುತ್‌ ಕುಮಾರ್, ರಾಜೇಶ್ ನಟರಂಗ, ರಾಮಚಂದ್ರ ರಾಜು, ದತ್ತಣ್ಣ ಅಭಿನಯಿಸಿದ್ದಾರೆ.

More from Filmibeat

English summary
Nikhil kumar Starrer Rider Movie Melody Song Release,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X