For Quick Alerts
  ALLOW NOTIFICATIONS  
  For Daily Alerts

  'ಸೀತಾರಾಮ ಕಲ್ಯಾಣ'ಕ್ಕೆ ಸಾಕ್ಷಿ ಆಗಬೇಕು ಅಂದ್ರೆ ಈಗಲೇ ಟಿಕೆಟ್ ಬುಕ್ ಮಾಡಿ.!

  |

  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ.. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಎರಡನೇ ಸಿನಿಮಾ 'ಸೀತಾರಾಮ ಕಲ್ಯಾಣ' ಇದೇ ಶುಕ್ರವಾರ.. ಅಂದ್ರೆ ಜನವರಿ 25 ರಂದು ಬಿಡುಗಡೆ ಆಗಲಿದೆ.

  ಟ್ರೈಲರ್ ಮತ್ತು ಸಾಂಗ್ಸ್ ಮಾತ್ರದಿಂದಲೇ ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸಿರುವ 'ಸೀತಾರಾಮ ಕಲ್ಯಾಣ' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದೆ. ಬುಕ್ ಮೈ ಶೋ ವೆಬ್ ತಾಣದಲ್ಲಿ 'ಸೀತಾರಾಮ ಕಲ್ಯಾಣ' ಚಿತ್ರದ ಟಿಕೆಟ್ ಬುಕಿಂಗ್ ತೆರೆಯಲಾಗಿದೆ.

  'ಜಾಗ್ವಾರ್' ಮೂಲಕ ಗಾಂಧಿನಗರದಲ್ಲಿ ಭರವಸೆ ಮೂಡಿಸಿದ್ದ ನಿಖಿಲ್ ಕುಮಾರ್ ಇದೀಗ ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆಗೆ ಡ್ಯುಯೆಟ್ ಹಾಡಿದ್ದಾರೆ. ಇಬ್ಬರ 'ಸೀತಾರಾಮ ಕಲ್ಯಾಣ'ಕ್ಕೆ ನೀವು ಸಾಕ್ಷಿ ಆಗಬೇಕು ಅಂದ್ರೆ, ಈಗಲೇ ಟಿಕೆಟ್ ಬುಕ್ ಮಾಡಿ...

  ಖ್ಯಾತ ನಿರ್ಮಾಣ ಸಂಸ್ಥೆ, ಚನ್ನಾಂಬಿಕ ಫಿಲಂಸ್ ಲಾಂಛನದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅರ್ಪಿಸುವ, ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಿಸಿರುವ ಚಿತ್ರ ಸೀತಾರಾಮ ಕಲ್ಯಾಣ'.

  ಅಬ್ಬಬ್ಬಾ 5 ಮಿಲಿಯನ್ ಗಡಿ ದಾಡಿದ 'ಸೀತಾರಾಮ ಕಲ್ಯಾಣ' ಟ್ರೇಲರ್

  ಬೆಂಗಳೂರು, ಮೈಸೂರು, ಊಟಿ, ಬಳ್ಳಾರಿ ಸೇರಿದಂತೆ ಹಲವೆಡೆ 'ಸೀತಾರಾಮ ಕಲ್ಯಾಣ' ಚಿತ್ರದ ಚಿತ್ರೀಕರಣ ನಡೆದಿದೆ.

  ಎ.ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ' ಚಿತ್ರಕ್ಕೆ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದಾರೆ. ಸ್ವಾಮಿ ಛಾಯಾಗ್ರಹಣ, ಗಣೇಶ್ ಮಲ್ಲಯ್ಯ ಸಂಕಲನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಹಾಗೂ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.

  'ಪೈಲ್ವಾನ್' ಹಿಂದೆ ಹಾಕಿ 'ಯಜಮಾನ'ನ ಬಳಿ ಮುನ್ನುಗಿದ ಯುವರಾಜ

  ಯುವರಾಜ ನಿಖಿಲ್ ಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ರಚಿತಾರಾಮ್. ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ, ಆದಿತ್ಯ ಮೆನನ್, ಜ್ಯೋತಿ ರೈ, ನಯನ, ಶಿವರಾಜ್ ಕೆ.ಆರ್ ಪೇಟೆ, ಜೀವನ್, ರವಿ ಭಟ್, ಸವಿತಾ, ಗಿರೀಶ್ ಜತ್ತಿ, ಹರೀಶ್, ಸಂಜು ಬಸಯ್ಯ ಮುಂತಾದ ಕಲಾವಿದರು ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

  English summary
  Nikhil Kumar starrer 'Seetharama Kalyana' ticket booking open.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X