ಗದ್ದೆಗಿಳಿದು ಕುಸ್ತಿ ಮಾಡಿದ ಗೌಡ್ರು ಮೊಮ್ಮಗ ನಿಖಿಲ್

By Pavithra

'ಜಾಗ್ವಾರ್' ಸಿನಿಮಾದ ನಂತರ ನಿಖಿಲ್ ಕುಮಾರ್ ನಾಯಕನಾಗಿರುವ ಎರಡನೇ ಚಿತ್ರ 'ಸೀತಾರಾಮ ಕಲ್ಯಾಣ' ಬಹುತೇಕ ಮಾತಿನ ಭಾಗದ ಚಿತ್ರೀಕರಣ ಮುಗಿಸಿರುವ ಈ ಚಿತ್ರತಂಡ ಸದ್ಯ ನಾಯಕನ ಇಂಟ್ರೋಡಕ್ಷನ್ ದೃಶ್ಯದ ಚಿತ್ರೀಕರಣವನ್ನು ಮೈಸೂರಿನಲ್ಲಿ ಮಾಡುತ್ತಿದೆ.

ನಾಯಕನ ಎಂಟ್ರಿ ಸೀನ್ ಅದ್ದೂರಿಯಾಗಿ ಹಾಗೂ ನೆಟೆವಿಟಿಗೆ ತಕ್ಕಂತೆ ಇರಲಿ ಎನ್ನುವ ಕಾರಣದಿಂದ ಗದ್ದೆಯ ಮಧ್ಯೆ ಸಾಹಸ ದೃಶ್ಯವನ್ನು ಚಿತ್ರೀಕರಿಸುತ್ತಿದೆ. ಗದ್ದೆಯಲ್ಲಿ ನಡೆಯುತ್ತಿರುವ ಆಕ್ಷನ್ ಸನ್ನಿವೇಶವನ್ನು ಥೌಸೆಂಡ್ ಫ್ರೇಮ್ ಹೈಸ್ಪೀಡ್ ಸ್ಲೋ ಮೋಷನ್ ಫ್ಯಾಂಟಮ್ ಕ್ಯಾಮೆರಾವನ್ನು ಬಳಸಲಾಗಿದೆ. ಸುಮಾರು ಐವತ್ತಕ್ಕೂ ಹೆಚ್ಚು ಜನ ಫೈಟರ್ ಗಳನ್ನ ಬಳಸಿಕೊಂಡು ಸಾಹಸ ದೃಶ್ಯದ ಚಿತ್ರೀಕರಣವನ್ನು ನಡೆಸಲಾಗುತ್ತಿದೆ. ಈ ಸಾಹಸ ದೃಶ್ಯವನ್ನು ರಾಮ್ ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದಾರೆ.

Nikhil Kumar starring seetha rama kalyana shooting is taking place in Mysore

ಹತ್ತು ದಿನಗಳಿಂದ ನಡೆಯುತ್ತಿರುವ ಈ ಸಾಹಸ ದೃಶ್ಯವನ್ನು ಚಿತ್ರೀಕರಣದಲ್ಲಿ ಮೂವರು ಕ್ಯಾಮೆರಾ ಮ್ಯಾನ್ ಗಳು ಕೆಲಸ ಮಾಡುತ್ತಿದ್ದಾರೆ. ಸ್ವಾಮಿ ಜೆ, ಗಿರೀಶ್ ಗೌಡ ಹಾಗೂ ರಾಮ್ ರೆಡ್ಡಿ, ನಿಖಿಲ್ ಅವರ ಸಾಹಸ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದಾರೆ. ನಾಯಕನ ಒಪನಿಂಗ್ ಫೈಟ್ ಆಗಿರುವುದರಿಂದ ಹಳ್ಳಿ ಸೊಗಡಿನಲ್ಲಿ ಚಿತ್ರೀಕರಿಸಲಾಗುತ್ತಿದೆ. ಶೂಟಿಂಗ್ ನಲ್ಲಿ ಶರತ್ ಕುಮಾರ್, ರವಿಶಂಕರ್, ಆದಿತ್ಯ ಮೆನನ್, ಮಧುಬಾಲ, ಜ್ಯೋತಿ ರೈ, ಗಿರಿಜಾ ಲೋಕೇಶ್, ಚಿಕ್ಕಣ್ಣ, ಸಾಧು ಕೋಕಿಲ, ಕುರಿ ಪ್ರತಾಪ್, ಶಿವರಾಜ್ ಕೆ ಆರ್ ಪೇಟೆ, ಶಾಲಿನಿ ಮುಂತಾದವರು ಭಾಗಿಯಾಗಿದ್ದಾರೆ.

Nikhil Kumar starring seetha rama kalyana shooting is taking place in Mysore

ಚೆನ್ನಾಂಬಿಕ ಫಿಲಂಸ್ ಲಾಂಛನದಲ್ಲಿ ಅನಿತಾ ಕುಮಾರಸ್ವಾಮಿ ಪ್ರೆಸೆನ್ಸ್ ನಲ್ಲಿ ನಿರ್ಮಾಣವಾಗುತ್ತಿರುವ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಿಖಿಲ್ ಜೋಡಿಯಾಗಿ ಇದೇ ಮೊದಲ ಬಾರಿಗೆ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಹರ್ಷ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

More from Filmibeat

English summary
The shooting of Seetha Rama Kalyana, a Kannada film starring Nikhil Kumar, is taking place in Mysore. fighting scene is shooting using over 50 people fighters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X