ಆಸ್ತಿ ಗಳಿಕೆಯಲ್ಲಿ ಪ್ರಕಾಶ್ ರೈ, ಸುಮಲತಾರನ್ನ ಹಿಂದಿಕ್ಕಿದ ಸಿಎಂ ಪುತ್ರ.!
Recommended Video

ನಟ ಪ್ರಕಾಶ್ ರೈ, ಸುಮಲತಾ ಅಂಬರೀಶ್, ನಿಖಿಲ್ ಕುಮಾರ್ ಅವರ ನಿಖರವಾದ ಆಸ್ತಿ ಎಷ್ಟು ಎಂಬುದು ಇಲ್ಲಿಯವರೆಗೂ ಗೊತ್ತಿರಲಿಲ್ಲ. ಆದ್ರೀಗ ಲೋಕಸಭೆ ಚುನಾವಣೆಯಲ್ಲಿ ಈ ಮೂವರು ಸ್ಪರ್ಧಿಸಿರುವುದರಿಂದ ಇವರ ಒಟ್ಟು ಆಸ್ತಿ ಮೌಲ್ಯ ಬಹಿರಂಗವಾಗಿದೆ.
ಸ್ವತಃ ಅಭ್ಯರ್ಥಿಗಳೇ ತಮ್ಮ ಹೆಸರಿನಲ್ಲಿ ಹೊಂದಿರುವ ಆಸ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇಲ್ಲಿ ಆಶ್ಚರ್ಯದ ಸಂಗತಿ ಅಂದ್ರೆ, ಸುಮಾರು ವರ್ಷಗಳಿಂದ ಬಹುಭಾಷೆಯಲ್ಲೂ ಸಿನಿಮಾ ಮಾಡುತ್ತಿರುವ ನಟ ಪ್ರಕಾಶ್ ರೈ ಮತ್ತು ಸುಮಲತಾ ಅವರಿಗಿಂತ ಸಿಎಂ ಪುತ್ರ ನಿಖಿಲ್ ಹೆಸರಿನಲ್ಲೇ ಹೆಚ್ಚು ಆಸ್ತಿ ಇದೆ.
'ಜಾಗ್ವಾರ್' ಮತ್ತು 'ಸೀತಾರಾಮ ಕಲ್ಯಾಣ' ಸಿನಿಮಾ ಮಾಡಿದ್ದಾರೆ. ಅದನ್ನ ಬಿಟ್ಟರೇ ನಿಖಿಲ್ ಅವರ ಆದಾಯ ಎಲ್ಲಿಂದ ಎಂಬ ಕುತೂಹಲಕ್ಕೆ ಅವರೇ ಉತ್ತರಿಸಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ನೀಡಿರುವ ಆಸ್ತಿ ವಿವರದಲ್ಲಿ ಈ ಅಂಕಿಅಂಶಗಳು ಘೋಷಣೆಯಾಗಿದೆ. ಹಾಗಿದ್ರೆ, ನಿಖಿಲ್ ಆಸ್ತಿ ಎಷ್ಟಿದೆ? ಪ್ರಕಾಶ್ ರೈ ಆಸ್ತಿ ಎಷ್ಟಿದೆ ಅಂತ ನೋಡೋಣ ಬನ್ನಿ.....

ಸುಮಲತಾ ಒಟ್ಟು ಆಸ್ತಿ
ಅಂಬರೀಶ್ ಅವರ ಪತ್ನಿ ಸುಮಲತಾ ಅವರ ಹೆಸರಿನಲ್ಲಿ ಒಟ್ಟು 23.4 ಕೋಟಿ ಆಸ್ತಿ ಇದೆ. ಅದರಲ್ಲಿ 17.7 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. 41,00,000 ರೂ ಮೌಲ್ಯದ ಕೃಷಿ ಭೂಮಿ ಇದೆ. ಬೆಂಗಳೂರಿನ ಜೆಪಿ ನಗರದಲ್ಲಿ ಮನೆ, ಕಟ್ಟಡಗಳ ಮೌಲ್ಯ 17,72,91,150 ರೂ. 2017-18ರ ಅರ್ಥಿಕ ವರ್ಷದ ಐಟಿ ರಿಟರ್ನ್ಸ್ ನಲ್ಲಿ 1,33,15,757 ರೂ ಆದಾಯ ತೋರಿಸಿದ್ದಾರೆ. ಇನ್ನು 5.6 ಕೋಟಿ ಚರಾಸ್ತಿ ಹೊಂದಿದ್ದಾರೆ.

ಸುಮಲತಾ ಅವರಿಗಿಂತ ಹೆಚ್ಚು ನಿಖಿಲ್ ಆಸ್ತಿ
ಹಾಗ್ನೋಡಿದ್ರೆ, ಸುಮಲತಾ ಅವರ ಆಸ್ತಿಗಿಂತ ಹೆಚ್ಚಿದೆ ನಿಖಿಲ್ ಕುಮಾರ್ ಆಸ್ತಿ. ಸ್ವತಃ ನಿಖಿಲ್ ಪ್ರಕಟ ಮಾಡಿಕೊಂಡಿರುವ ಪ್ರಕಾರ, ಒಟ್ಟು 56.47 ಕೋಟಿ ಆಸ್ತಿ ಹೊಂದಿದ್ದಾರೆ. ತಮ್ಮ ಬಳಿ 17.53 ಕೋಟಿ ಮೌಲ್ಯದ ಚರಾಸ್ತಿ ಮತ್ತು 22.53 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರಂತೆ.

ಐಷಾರಾಮಿ ಕಾರುಗಳಿಗೆ ಒಡೆಯ
ನಿಖಿಲ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ನಿಖಿಲ್ ಕುಮಾರಸ್ವಾಮಿ ಅವರ ಬಳಿ 3.34 ಕೋಟಿ ಮೌಲ್ಯದ ರೇಂಜ್ ರೋವರ್ ಕಾರಿದೆ. ಜೊತೆಗೆ ಒಂದು 23.03 ಲಕ್ಷ ಮೌಲ್ಯದ ವ್ಯಾನಿಟಿ ವ್ಯಾನ್ ಇದೆ. ಈಗ ಲಂಬೋರ್ಗಿನಿ ಕಾರಿಗೆ ಮುಂಗಡ ನೀಡಿದ್ದಾರೆ. ನಿಖಿಲ್ ಅವರ ಬಳಿ 4.55 ಲಕ್ಷ ಮೌಲ್ಯದ ಚಿನ್ನದ ಆಭರಣಗಳಿವೆ ಎಂದು ತೋರಿಸಿದ್ದಾರೆ.
ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು?

ಪ್ರಕಾಶ್ ರೈ ಆಸ್ತಿ ಎಷ್ಟಿದೆ ಗೊತ್ತಾ?
ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಹಲವು ವರ್ಷಗಳಿಂದ ನಟಿಸುತ್ತಾ ಬಂದಿರುವ ಪ್ರಕಾಶ್ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ. ಚುನಾವಣೆ ಹಿನ್ನೆಲೆ ಪ್ರಕಾಶ್ ಘೋಷಿಸಿಕೊಂಡಿರುವ ಆಸ್ತಿ ಮೌಲ್ಯ ಒಟ್ಟು 31.17 ಕೋಟಿ. ತೆಲಂಗಾಣ, ಆಂಧ್ರಪ್ರದೇಶ, ಮುಂಬೈ, ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದಾರಂತೆ.


Click it and Unblock the Notifications











