'ಕುರುಕ್ಷೇತ್ರ' ಬಳಿಕ ನಿಖಿಲ್ ಗೆ ಮತ್ತೊಂದು ಮೆಗಾ ಆಫರ್ ನೀಡಿದ ಮುನಿರತ್ನ

Recommended Video

ನಿಖಿಲ್ ಕೈಯಲ್ಲಿರುವ ಸಿನಿಮಾಗಳೆಷ್ಟು ಗೊತ್ತಾ..? | Nikhil Kumarswamy | Posters | Filmibeat Kannada

ನಟ ನಿಖಿಲ್ ಕುಮಾರ್ ಇಂದು (ಜನವರಿ 22) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಈ ವಿಶೇಷವಾಗಿ ಅವರ ಮುಂದಿನ ಸಿನಿಮಾಗಳ ಪೋಸ್ಟರ್ ಗಳು ಬಿಡುಗಡೆಯಾಗಿದೆ.

ಈ ವರ್ಷ ನಿಖಿಲ್ ನಾಲ್ಕು ಹೊಸ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪೈಕಿ ಮುನಿರತ್ನ ನಿರ್ಮಾಣದ ಸಿನಿಮಾ ಕೂಡ ಒಂದಾಗಿದೆ. ಈ ಹಿಂದೆ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಸಿನಿಮಾದಲ್ಲಿ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರ ಮಾಡಿದ್ದರು.

'ಸೀತಾರಾಮ ಕಲ್ಯಾಣ' ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು. ಇದು ಅವರ ಮೂರನೇ ಸಿನಿಮಾವಾಗಿತ್ತು. ಈ ಚಿತ್ರಗಳ ನಂತರ ನಾಲ್ಕು ಹೊಸ ಸಿನಿಮಾಗಳಲ್ಲಿ ನಿಖಿಲ್ ಬ್ಯುಸಿಯಾಗಿದ್ದಾರೆ. ಆ ಸಿನಿಮಾಗಳ ಪೋಸ್ಟರ್ ಗಳು ಇಂದು ಹೊರಬಂದಿವೆ.

'ಧನುಷ್ IPS'

'ಧನುಷ್ IPS'

ನಿರ್ಮಾಪಕ ಮುನಿರತ್ನ ಹೊಸ ಸಿನಿಮಾದ ತಯಾರಿಯಲ್ಲಿ ಇದ್ದಾರೆ. ಈ ಸಿನಿಮಾಗೆ ನಿಖಿಲ್ ಕುಮಾರ್ ನಾಯಕನಾಗಿದ್ದಾರೆ. ಇಲ್ಲಿ ನಿಖಿಲ್ IPS ಅಧಿಕಾರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದ ಟೈಟಲ್ ಕೂಡ ಹೊರ ಬಂದಿದ್ದು, 'ಧನುಷ್ IPS' ಎಂಬುದು ಶೀರ್ಷಿಕೆಯಾಗಿದೆ. ಈ ಸಿನಿಮಾದ ನಿರ್ದೇಶಕರ ಹೆಸರನ್ನು ಚಿತ್ರತಂಡ ಇನ್ನು ಬಹಿರಂಗ ಪಡಿಸಿಲ್ಲ.

ಎಪಿ ಅರ್ಜುನ್ ನಿರ್ದೇಶನದ ಚಿತ್ರ

ಎಪಿ ಅರ್ಜುನ್ ನಿರ್ದೇಶನದ ಚಿತ್ರ

ನಿರ್ದೇಶಕ ಎಪಿ ಅರ್ಜುನ್ ಸಹ ನಿಖಿಲ್ ಕುಮಾರ್ ರೊಂದಿಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. NK ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಲ್ಲಿ ಚಿತ್ರದ ನಿರ್ಮಾಣ ಆಗುತ್ತಿದೆ. ಮೊದಲ ಬಾರಿಗೆ ನಿಖಿಲ್ ಕುಮಾರ್ ಗೆ ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. 'ಕಿಸ್' ಚಿತ್ರದ ನಂತರ ಈ ಸಿನಿಮಾವನ್ನು ಅರ್ಜುನ್ ಕೈಗೆತ್ತಿಕೊಂಡಿದ್ದಾರೆ. ಜೂನ್ ನಿಂದ ಚಿತ್ರೀಕರಣ ಶುರು ಆಗಲಿದೆ.

ಬ್ಯಾಸ್ಕೆಟ್ ಬಾಲ್ ಆಟಗಾರನ ಪಾತ್ರ

ಬ್ಯಾಸ್ಕೆಟ್ ಬಾಲ್ ಆಟಗಾರನ ಪಾತ್ರ

ನಿಖಿಲ್ ಕುಮಾರ್ ಮತ್ತೊಂದು ಸಿನಿಮಾ ಕೂಡ ಇಂದು ಘೋಷಣೆಯಾಗಿದೆ. ಸದ್ಯಕ್ಕೆ ಪ್ರೊಡಕ್ಷನ್ ನಂಬರ್ 1 ಎಂಬ ಹೆಸರಿನಲ್ಲಿ ಚಿತ್ರ ಶುರುವಾಗಿದೆ. ವಿಶೇಷ ಅಂದರೆ, ಚಿತ್ರದಲ್ಲಿ ನಿಖಿಲ್ ಬ್ಯಾಸ್ಕೆಟ್ ಬಾಲ್ ಆಟಗಾರನ ಪಾತ್ರ ಮಾಡುತ್ತಿದ್ದಾರೆ.

ತೆಲುಗಿನ ವಿಜಯ್ ಕುಮಾರ್ ಕೊಂಡ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

ಪ್ರೊಡಕ್ಷನ್ ನಂಬರ್ 20

ಪ್ರೊಡಕ್ಷನ್ ನಂಬರ್ 20

ಈ ಹಿಂದೆಯೇ ನಿಖಿಲ್ ಕುಮಾರ್ ಸಿನಿಮಾಗೆ '2.O' ಚಿತ್ರದ ನಿರ್ಮಾಣ ಸಂಸ್ಥೆ ಬಂಡವಾಳ ಹಾಕುವ ಸುದ್ದಿ ಬಂದಿತ್ತು. ಇಂದು ಆ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಸದ್ಯಕ್ಕೆ ಸಿನಿಮಾದ ಶೀರ್ಷಿಕೆ ನಿಗದಿಯಾಗಿಲ್ಲ. LYCA production ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

More from Filmibeat

English summary
Nikhil Kumar upcoming movies posters released on the occasion of his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X