ನಿಖಿಲ್-ಅಭಿ ಇಬ್ಬರಲ್ಲಿ ಯಾರು ಇಷ್ಟ ಎಂದು ಕೇಳಿದ್ದಕ್ಕೆ ರಚಿತಾ ಆಯ್ಕೆ ಏನಾಗಿತ್ತು?

Recommended Video

ರಚಿತಾ ಕೊಟ್ರು ಶಾಕಿಂಗ್ ಹೇಳಿಕೆ..? | FILMIBEAT KANNADA

ದರ್ಶನ್-ಸುದೀಪ್ ಇಬ್ಬರಲ್ಲಿ ಯಾರು ಇಷ್ಟ ಎಂದು ರಚಿತಾ ರಾಮ್ ಗೆ ಹಲವು ಬಾರಿ ಪ್ರಶ್ನೆ ಎದುರಾಗಿದೆ. ಇಂಡಸ್ಟ್ರಿಗೆ ಪರಿಚಯ ಮಾಡಿದ್ದು ಒಬ್ಬರು, ಇಂಡಸ್ಟ್ರಿಯಲ್ಲಿ ಹೇಗಿರಬೇಕು ಎಂದು ಹೇಳಿಕೊಟ್ಟಿದ್ದು ಮತ್ತೊಬ್ಬರು ಹಾಗಾಗಿ ಇಬ್ಬರು ನನಗೆ ಮುಖ್ಯ ಎಂದು ರಚಿತಾ ಹಲವು ಸಲ ಹೇಳಿಕೊಂಡಿದ್ದಾರೆ.

ಈಗ ಪ್ರಶ್ನೆ ಬದಲಾಗಿದೆ. ದರ್ಶನ್ ಮತ್ತು ಸುದೀಪ್ ಇಬ್ಬರನ್ನ ಬಿಟ್ಟು ನಿಖಿಲ್ ಕುಮಾರ್ ಮತ್ತು ಅಭಿಷೇಕ್ ಅಂಬರೀಶ್ ಇಬ್ಬರಲ್ಲಿ ನಿಮಗೆ ಯಾರು ಇಷ್ಟ ಎಂಬ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆ ಕೇಳಿದ್ದು ನಿರೂಪಕಿ ಅನುಶ್ರೀ.

ತಮ್ಮದೇ ಹೊಸ ಕಾರ್ಯಕ್ರಮ ಮಾಡುತ್ತಿರುವ ಅನುಶ್ರೀ, ರಚಿತಾ ರಾಮ್ ಜೊತೆ ಚಿಟ್ ಚಾಟ್ ಮಾಡಿದ್ರು. Rapid ಫೈರ್ ರೌಂಡ್ ನಲ್ಲಿ ಉತ್ತರಿಸಲೇಬೇಕಾದ ಪರಿಸ್ಥಿತಿಗೆ ಸಿಲುಕಿ ರಚಿತಾ ಅವರ ಆಯ್ಕೆ ಮತ್ತು ಸಮರ್ಥನೆ ಏನಾಗಿತ್ತು ಗೊತ್ತಾ? ಮುಂದೆ ಓದಿ....

ಮ್ಯಾಚ್ ಟೈ ಆಯ್ತು

ಮ್ಯಾಚ್ ಟೈ ಆಯ್ತು

ನಿಖಿಲ್ ಮತ್ತು ಅಭಿಷೇಕ್ ಅಂಬರೀಶ್ ಇಬ್ಬರಲ್ಲಿ ಯಾರು ನಿಮಗೆ ಇಷ್ಟ ಎಂದು ಕೇಳಿದ್ದಕ್ಕೆ, ''ನನಗೆ ಇಬ್ಬರು ಇಷ್ಟ, ಇಬ್ಬರ ಹೆಸರು ತೆಗೆದುಕೊಳ್ಳುತ್ತೇನೆ'' ಎಂದು ಜಾಣ್ಮೆಯಿಂದ ಉತ್ತರಿಸಿದರು.

ನಿಖಿಲ್ ಜೊತೆ ಸಿನಿಮಾ ಮಾಡಿದ್ದ ನಟಿ

ನಿಖಿಲ್ ಜೊತೆ ಸಿನಿಮಾ ಮಾಡಿದ್ದ ನಟಿ

ಹಾಗ್ನೋಡಿದ್ರೆ, ಅಭಿಷೇಕ್ ಅವರಿಗಿಂತ ನಿಖಿಲ್ ಕುಮಾರ್ ಜೊತೆ ಹೆಚ್ಚು ಪರಿಚಯ ಹೊಂದಿರುವ ರಚಿತಾ ರಾಮ್, ಸಿಎಂ ಪುತ್ರನ ಜೊತೆ 'ಸೀತಾರಾಮಕಲ್ಯಾಣ' ಸಿನಿಮಾ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಪರ ಮತ ಕೂಡ ಕೇಳಿದ್ದರು.

ಅಮರ್ ಚಿತ್ರದಲ್ಲೂ ನಟನೆ

ಅಮರ್ ಚಿತ್ರದಲ್ಲೂ ನಟನೆ

ಅಭಿಷೇಕ್ ಅಂಬರೀಶ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಹಾಡಿನಲ್ಲಿ ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ. ನಟ ದರ್ಶನ್ ಈ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದು, ರಚಿತಾ ಕೂಡ ಹಾಡೊಂದರಲ್ಲಿ ಕುಣಿದಿದ್ದಾರಂತೆ.

ರಕ್ಷಿತಾ ಮತ್ತು ರಮ್ಯಾ?

ರಕ್ಷಿತಾ ಮತ್ತು ರಮ್ಯಾ?

ದರ್ಶನ್ ಮತ್ತು ಸುದೀಪ್ ಇಬ್ಬರನ್ನ ಆಯ್ಕೆ ಮಾಡಿಕೊಂಡ ರಚಿತಾ ಅವರು, ರಮ್ಯಾ ಮತ್ತು ರಕ್ಷಿತಾ ಇಬ್ಬರಲ್ಲಿ ಯಾರೂ ಎಂದು ಹೇಳಿದ್ದಕ್ಕೆ ''ಇಬ್ಬರು ಇಷ್ಟ, ಆದ್ರೆ ರಮ್ಯಾ ಇಂಡಸ್ಟ್ರಿಗೆ ವಾಪಸ್ ಬಂದ್ರೆ ಅಭಿಮಾನಿಗಳು ಈಗಲೂ ಆಕೆಯನ್ನ ನಂಬರ್ ವನ್ ನಟಿ ಎಂದೇ ನೋಡ್ತಾರೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

More from Filmibeat

English summary
Seetharama kalyana co star Nikhil kumar vs rebel star ambarish son abhishek. who is the first choice to rachita ram's in these both actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X