ಅಂಬಿ-ಕುಮಾರಣ್ಣನ ನಂತರ ನಿಖಿಲ್-ಅಭಿಷೇಕ್ ಜುಗಲ್ ಬಂದಿ

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಮಂಡ್ಯದ ಗಂಡು ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್ ರಾಜಕಾರಣದಲ್ಲಿ ಬೇರೆ ಬೇರೆ ಪಕ್ಷವಾಗಿರಬಹುದು. ಆದ್ರೆ, ಪಕ್ಷದ ಹೊರಗೆ ಇಬ್ಬರು ಒಳ್ಳೆಯ ಸ್ನೇಹಿತರು.

ರಾಜಕೀಯದಲ್ಲೂ ಅನೇಕ ಬಾರಿ ಅನೇಕ ವಿಷ್ಯಗಳ ಬಗ್ಗೆ ಒಟ್ಟಿಗೆ ಕೂತು ಚರ್ಚೆ ಮಾಡಿರುವ ಉದಾಹರಣೆಗಳು ಉಂಟು. ಈಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಅಂಬರೀಶ್ ಅವರು ಕೂಡ ಬೆಂಬಲ ನೀಡಿದ್ದರು ಎನ್ನುವುದು ವಾಸ್ತವ.

ಇವರಿಬ್ಬರ ಜುಗಲ್ ಬಂದಿಯಂತೆ ಈಗ ಅವರ ಮಕ್ಕಳ ದರ್ಬಾರ್ ಕೂಡ ನಡೆಯುವ ಸೂಚನೆ ಸಿಗುತ್ತಿದೆ. ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಮುಂದಿನ ಜನರೇಷನ್ ಗೆ ಸಾರಥಿಯಾದ್ರು ಅಚ್ಚರಿಯಿಲ್ಲ. ಅದು ರಾಜಕೀಯ ಮತ್ತು ಸಿನಿಮಾ ಎರಡು ಕಡೆ ಇರಬಹುದು. ಸದ್ಯಕ್ಕೆ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಬಹಳ ಚರ್ಚೆಯಾಗುತ್ತಿದೆ. ಯಾವುದು ಆ ಫೋಟೋಗಳು.? ಮುಂದೆ ಓದಿ.....

'ಅಂಬಿ' ಸಿನಿಮಾ ನೋಡಿದ ನಿಖಿಲ್

'ಅಂಬಿ' ಸಿನಿಮಾ ನೋಡಿದ ನಿಖಿಲ್

ಅಂಬರೀಶ್ ಮತ್ತು ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ನಿನ್ನೆ ನಟ ನಿಖಿಲ್ ಕುಮಾರ್ ಅವರು ನೋಡಿದ್ದಾರೆ. ಅಂಬರೀಶ್ ಅವರ ಪುತ್ರ ಅಭಿಷೇಕ್ ಜೊತೆ ಸೇರಿ ಸಿನಿಮಾವನ್ನ ವೀಕ್ಷಿಸಿದ್ದಾರೆ.

ನಿಖಿಲ್ ಗೆ ಸಾಥ್ ನೀಡಿದ ರಾಹುಲ್

ನಿಖಿಲ್ ಗೆ ಸಾಥ್ ನೀಡಿದ ರಾಹುಲ್

ನಿಖಿಲ್ ಕುಮಾರ್ ಗೆ ಭಾರತ ಕ್ರಿಕೆಟ್ ತಂಡದ ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ಹಾಸ್ಯ ನಟ ಚಿಕ್ಕಣ್ಣ ಇಬ್ಬರು ಸಾಥ್ ನೀಡಿದ್ದಾರೆ.' ಅಂಬಿ' ಚಿತ್ರವನ್ನ ಈ ಯೂತ್ ಸ್ಟಾರ್ ಒಟ್ಟಿಗೆ ನೋಡಿ ಎಂಜಾಯ್ ಮಾಡಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ಸೀತಾರಾಮ ಕಲ್ಯಾಣ'ದಲ್ಲಿ ನಿಖಿಲ್

'ಸೀತಾರಾಮ ಕಲ್ಯಾಣ'ದಲ್ಲಿ ನಿಖಿಲ್

'ಜಾಗ್ವಾರ್' ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟಿದ್ದ ನಿಖಿಲ್ ಕುಮಾರ್ ಈಗ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ತಯಾರಾಗುತ್ತಿದೆ. ಹರ್ಷ ನಿರ್ದೇಶನದ ಈ ಚಿತ್ರದಲ್ಲಿ ನಿಖಿಲ್ ಗೆ ರಚಿತಾ ರಾಮ್ ಜೋಡಿಯಾಗಿದ್ದಾರೆ.

'ಅಮರ್' ಚಿತ್ರದಲ್ಲಿ ಅಂಬಿ ಪುತ್ರ

'ಅಮರ್' ಚಿತ್ರದಲ್ಲಿ ಅಂಬಿ ಪುತ್ರ

ಇನ್ನು 'ಅಮರ್' ಸಿನಿಮಾದ ಮೂಲಕ ಅಂಬರೀಶ್ ಮಗ ಸಿನಿಮಾ ಜಗತ್ತಿಗೆ ಎಂಟ್ರಿ ಕೊಡ್ತಿದ್ದಾರೆ. ನಾಗಶೇಖರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಅಂಬಿ ಪುತ್ರನ ಗ್ರ್ಯಾಂಡ್ ಎಂಟ್ರಿಗೆ ವೇದಿಕೆ ಸಿದ್ಧವಾಗುತ್ತಿದೆ. ಸದ್ಯ, ಬಿರುಸಿನ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಮುಂದಿನ ವರ್ಷದ ಬಿಡುಗಡೆ ಮಾಡಲಿದೆ.

ನಿಖಿಲ್-ಅಭಿ ಒಳ್ಳೆಯ ಸ್ನೇಹಿತರು

ನಿಖಿಲ್-ಅಭಿ ಒಳ್ಳೆಯ ಸ್ನೇಹಿತರು

ಈ ಹಿಂದೆ ಕೂಡ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ 'ಸೀತಾ ರಾಮ ಕಲ್ಯಾಣ' ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟು ನಿಖಿಲ್ ಜೊತೆ ಸಮಯ ಕಳೆದಿದ್ದರು. ಅಂದ್ಹಾಗೆ, ಇವರಿಬ್ಬರು ಬಹಳ ಹಿಂದಿನಿಂದಲೂ ಒಳ್ಳೆಯ ಸ್ನೇಹಿತರು. ಬಹುಶಃ ವಿಷ್ಣು-ಅಂಬಿ, ಸುದೀಪ್ ಮತ್ತು ದರ್ಶನ್ ಅವರಂತೆ ಅಭಿ-ನಿಖಿಲ್ ಕೂಡ ಚಿತ್ರರಂಗದಲ್ಲಿ ಬೆಳೆಯಬಹುದು.

More from Filmibeat

English summary
Junior Rebel star Abhishek along with hd kumaraswamy son Nikhil Kumar watched Ambi Ning Vayassaytho movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X