ಮುನಿರತ್ನ ಜೊತೆ ಕುರುಕ್ಷೇತ್ರ ನೋಡಿದ ನಿಖಿಲ್ ಕುಮಾರ್
ಕುರುಕ್ಷೇತ್ರ ಚಿತ್ರ ಆಗಸ್ಟ 9 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ರಿಲೀಸ್ ಆಗುವುದಕ್ಕೆ ಒಂದು ಮೊದಲೇ ಯುಎಸ್ ನಲ್ಲಿ ಪ್ರೀಮಿಯರ್ ಕಾಣ್ತಿದೆ. ಆ ಪ್ರೀಮಿಯರ್ ಗು ಮೊದಲೇ ಕುರುಕ್ಷೇತ್ರವನ್ನ ಕೆಲವರು ಕಣ್ತುಂಬಿಕೊಂಡಿದ್ದಾರೆ.
ಹೌದು, ಡಿ-ಬಾಸ್ ದರ್ಶನ್ ತನ್ನ ಕುಟುಂಬದ ಜೊತೆ ಕುರುಕ್ಷೇತ್ರ ಸಿನಿಮಾ ನೋಡಿದ್ದಾರೆ. ಬರಿ ದರ್ಶನ್ ಮಾತ್ರವಲ್ಲ, ಅಭಿಮನ್ಯು ಪಾತ್ರ ನಿರ್ವಹಿಸಿರುವ ನಿಖಿಲ್ ಕುಮಾರ್ ಕೂಡ ಕುರುಕ್ಷೇತ್ರ ವೀಕ್ಷಿಸಿದ್ದಾರೆ.
ಕಳೆದ ರಾತ್ರಿ ಕುರುಕ್ಷೇತ್ರ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ದರ್ಶನ್ ಮತ್ತು ನಿಖಿಲ್ ಒಟ್ಟಿಗೆ ಸಿನಿಮಾ ನೋಡಿದ್ರಾ ಅಥವಾ ದರ್ಶನ್ ಪ್ರತ್ಯೇಕವಾಗಿ ನಿಖಿಲ್ ಪ್ರತ್ಯೇಕವಾಗಿ ಸಿನಿಮಾ ನೋಡಿದ್ರಾ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಆದರೆ, ಈ ಇಬ್ಬರು ಕಳೆದ ರಾತ್ರಿ ಕುರುಕ್ಷೇತ್ರ ನೋಡಿರುವುದಂತೂ ನಿಜ. ಸಿನಿಮಾ ವೀಕ್ಷಣೆ ಬಳಿಕ ಮುನಿರತ್ನ ಮತ್ತು ನಿಖಿಲ್ ಕುಮಾರ್ ಇಬ್ಬರು ಮಾಧ್ಯಮದವರು ಜೊತೆ ಮಾತನಾಡಿದ್ದಾರೆ. ತೆರೆಮೇಲೆ ಸಿನಿಮಾ ನೋಡಿದ ಬಳಿಕ ಕಲಾವಿದರ ಅಭಿನಯ, ಹಾಗೂ ಮೇಕಿಂಗ್ ಬಗ್ಗೆ ಬಹಳ ಖುಷಿ ವ್ಯಕ್ತಪಡಿಸಿದ್ದಾರೆ.
ನಾಗಣ್ಣ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ದರ್ಶನ್-ದುರ್ಯೋಧನ, ಅರ್ಜುನ್ ಸರ್ಜಾ-ಕಣ್ಣ, ರವಿಚಂದ್ರನ್-ಕೃಷ್ಣ, ಅಂಬರೀಶ್-ಭೀಷ್ಮ, ಸೋನು ಸೂದ್-ಅರ್ಜುನ, ಡ್ಯಾನಿಶ್-ಭೀಮ, ನಿಖಿಲ್ ಕುಮಾರ್-ಅಭಿಮನ್ಯು, ಸ್ನೇಹಾ-ದ್ರೌಪದಿ, ರವಿಶಂಕರ್-ಶಕುನಿ ಪಾತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











