ಅಂಬಿ ಹುಟ್ಟುಹಬ್ಬ ದಿನ ಮನದ ಮಾತು ಹಂಚಿಕೊಂಡ ನಿಖಿಲ್

Recommended Video

ಹುಟ್ಟುಹಬ್ಬದ ದಿನ ಅಂಬರೀಶ್‍ರನ್ನು ನೆನೆದ ನಿಖಿಲ್ ಕುಮಾರಸ್ವಾಮಿ

ನಟ ಅಂಬರೀಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ನಿಖಿಲ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಾಲ್ಕು ಸಾಲು ಬರೆದುಕೊಂಡಿದ್ದಾರೆ. ಈ ಮೂಲಕ ಅಂಬಿರನ್ನು ನೆನಪು ಮಾಡಿಕೊಂಡಿದ್ದಾರೆ.

ನಿನ್ನೆ (29 ಮೇ) ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ. ಅಂಬಿ ನಮ್ಮೊಂದಿಗೆ ಇಲ್ಲ ಎನ್ನುವ ನೋವಿನಲ್ಲಿಯೇ ಅವರ ಸ್ನೇಹಿತರು, ಅಭಿಮಾನಿಗಳು ಆ ದಿನ ಕಳೆದರು. ನಟ ನಿಖಿಲ್ ಕುಮಾರ್ ಸಹ ಅಂಬಿ ಇಲ್ಲದ ನೋವನ್ನು ಹಂಚಿಕೊಂಡಿದ್ದಾರೆ.

ಮಂಡ್ಯ ಚುನಾವಣೆ ಅಖಾಡದಲ್ಲಿ ನಿಖಿಲ್ ಹಾಗೂ ಸುಮಲತಾ ಅಂಬರೀಶ್ ನಡುವೆ ಫೈಟ್ ನಡೆದಿತ್ತು. ಈ ಚುನಾವಣೆ ದೊಡ್ಡ ಅಸಮಾಧಾನಕ್ಕೆ ಕಾರಣ ಆಗಿತ್ತು. ಕೊನೆಗೆ ಚುನಾವಣಾ ಪಲಿತಾಂಶದಲ್ಲಿ ಸುಮಲತಾ ಗೆದ್ದರು.

nikhil kumar wishes for ambarish birthday

ಆದರೆ, ಈ ಎಲ್ಲದರ ನಂತರ ನಿಖಿಲ್ ಅಂಬರೀಶ್ ಬಗ್ಗೆ ಬರೆದುಕೊಂಡಿದ್ದಾರೆ. ''ಹ್ಯಾಪಿ ಬರ್ತ್ ಡೇ ಅಂಬರೀಶ್ ಅಣ್ಣ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಜೊತೆಗೆ ಕಳೆದ ಅದ್ಬುತ ನೆನಪು ನಮ್ಮ ಜೊತೆ ಇವೆ. ನಿಮ್ಮ ಬಗ್ಗೆ ಹೇಳಲು ತುಂಬ ಇದೆ. ಆದರೆ, ಅದಕ್ಕೆ ನನ್ನ ಬಳಿ ಪದಗಳೇ ಇಲ್ಲ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಇಷ್ಟು ಮಾತ್ರ ಹೇಳಲು ಸಾಧ್ಯ.'' ಎಂದಿದ್ದಾರೆ.

ಅಂಬರೀಶ್ ಹುಟ್ಟುಹಬ್ಬದ ದಿನ ತಡವಾದರೂ ರಾತ್ರಿ 9 ಗಂಟೆಗೆ ಶುಭಾಶಯ ಹಂಚಿಕೊಂಡಿದ್ದಾರೆ. ಅಂಬರೀಶ್ ಜೊತೆಗಿನ ಫೋಟೋ ಹಾಕಿ ತಮ್ಮ ಮನದ ಮಾತನ್ನು ಹೇಳಿಕೊಂಡಿದ್ದಾರೆ.

More from Filmibeat

English summary
Kannada actor Nikhil Kumar wishes for Rebel Star Ambarish on the on the occasion of his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X