'ನಿನ್ನ ತ್ಯಾಗ ಅಪಾರ': ತಾಯಿಯ ಬಗ್ಗೆ ನಿಖಿಲ್ ಕುಮಾರ್ ಮಾತು

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಇಂದು (ಫೆಬ್ರವರಿ 24) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಹುಟ್ಟುಹಬ್ಬದ ದಿನ ತಾಯಿಗೆ ಪ್ರೀತಿಯ ಮಗನ ಕಡೆಯಿಂದ ಶುಭಾಶಯ ತಲುಪಿದೆ.

Recommended Video

Nikhil Kumar wishes for his mother birthday | Nikhil | Anitha Kumarswamy | Filmibeat Kannada

ನಟ ನಿಖಿಲ್ ಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಾಯಿಗೆ ವಿಶ್ ಮಾಡಿದ್ದಾರೆ. ''ಹುಟ್ಟುಹಬ್ಬದ ಶುಭಾಶಯಗಳು ಅಮ್ಮ. ನೀನು ನನಗೆ ಜನ್ಮ ನೀಡಿದ ದಿನದಿಂದ ನೀನು ಮಾಡಿದ ತ್ಯಾಗ ಅಪಾರ. ನಾನು ಜೀವನ ಪೂರ್ತಿ ನಿನಗೆ ಋಣಿಯಾಗಿ ಇರುತ್ತೇನೆ. ನೀನು ಖುಷಿಯಾಗಿ ಇರುವುದನ್ನು ನೋಡಿದರೆ ನನ್ನ ಮುಖದಲ್ಲಿ ನಗು ಮೂಡುತ್ತದೆ.'' ಎಂದು ತಾಯಿಯ ಬಗ್ಗೆ ಬರೆದುಕೊಂಡಿದ್ದಾರೆ.

ಫೋಟೋದಲ್ಲಿ ಅನಿತಾ ಕುಮಾರಸ್ವಾಮಿ ನಗುತ್ತಿದ್ದು, ''ಫೋಟೋದ ರೀತಿಯೇ ನಿನ್ನ ಮುಖದ ಮೇಲೆ ನಗು ಯಾವಾಗಲೂ ಇರಲಿ. ನೀನು ನಕ್ಕಾಗ ತುಂಬ ಸುಂದರವಾಗಿ ಕಾಣುತ್ತೀಯಾ'' ಎಂದು ತಾಯಿಗೆ ಪ್ರೀತಿಯ ಶುಭಾಶಯವನ್ನು ನಿಖಿಲ್ ಕುಮಾರ್ ತಿಳಿಸಿದ್ದಾರೆ.

Nikhil Kumar Wishes For Anitha kumaraswamy Birthday

ಬಾವಿ ಸೊಸೆ ರೇವತಿ ಹಾಗೂ ಮಗ ನಿಖಿಲ್ ಜೊತೆಗೆ ಅನಿತಾ ಕುಮಾರಸ್ವಾಮಿ ತೆಗೆಸಿಕೊಂಡ ಮುದ್ದಾದ ಫೋಟೋ ಇದಾಗಿದೆ.

ಅಂದಹಾಗೆ, ಇತ್ತೀಚಿಗಷ್ಟೆ ನಿಖಿಲ್ ಕುಮಾರ್ ನಿಶ್ಚಿತಾರ್ಥ ನಡೆದಿದ್ದು, ಏಪ್ರಿಲ್ ನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ.

More from Filmibeat

English summary
Nanitha Kumar wishes for his mother Anitha Kumaraswamy birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X