For Quick Alerts
  ALLOW NOTIFICATIONS  
  For Daily Alerts

  ತೀವ್ರ ಜ್ವರ, ಆಸ್ಪತ್ರೆಗೆ ದಾಖಲಾದ ಕೊರೊನಾ ಸೋಂಕಿತ ನಿಖಿಲ್ ಕುಮಾರಸ್ವಾಮಿ

  |

  ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವ ವಿಷಯ ಏಪ್ರಿಲ್ 17 ರಂದು ಖಾತ್ರಿಯಾಗಿತ್ತು. ನಿಖಿಲ್ ಅವರಿಗೆ ಜ್ವರ ಮತ್ತು ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಇಂದು (ಏಪ್ರಿಲ್ 19) ನಗರದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

  ನಿಖಿಲ್ ಕುಮಾರಸ್ವಾಮಿ ಅವರ ತಂದೆ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರನ್ನೂ ಅದೇ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಮೊದಲಿಗೆ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಕೊರೊನಾ ಇರುವುದು ಧೃಡವಾಗಿತ್ತು. ಅದಾದ ನಂತರ ಪರೀಕ್ಷೆಗೆ ಒಳಗಾದ ನಿಖಿಲ್ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂತು. ನಿಖಿಲ್-ರೇವತಿ ಅವರ ಮೊದಲ ವಿವಾಹ ವಾರ್ಷಿಕೋತ್ಸವದ ದಿನದಂದೇ ಕೊರೊನಾಕ್ಕೆ ತುತ್ತಾದರು ನಿಖಿಲ್.

  ನಿಖಿಲ್ ಅವರಿಗೆ ನಿನ್ನೆ ಸಂಜೆ ವೇಳೆಗೆ ಜ್ವರ ಕಾಣಿಸಿಕೊಂಡಿತ್ತು ಅಲ್ಲದೆ ತಲೆ ನೋವು ಸಹ ತೀವ್ರವಾದ ಕಾರಣ ಇಂದು ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

  ನಿಖಿಲ್ ಅವರ ಸಂಬಂಧಿಯೂ ಆಗಿರುವ ಹಿರಿಯ ಹೃದಯ ತಜ್ಞ, ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಅವರ ಸಲಹೆಯಂತೆ ನಿಖಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

  ಅದೇ ಆಸ್ಪತ್ರೆಯಲ್ಲಿ ದಾಖಲಾಗಿರುವ ಕುಮಾರಸ್ವಾಮಿ ಅವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಸಿಎಂ ಯಡಿಯೂರಪ್ಪ ಅವರೂ ಸಹ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರಿಗೂ ಸಹ ಯಾವುದೇ ರೋಗ ಲಕ್ಷಣಗಳು ಇಲ್ಲ.

  ನಿಖಿಲ್ ಗೆ ಮದುವೆ ವಾರ್ಷಿಕೋತ್ಸವದ ದಿನವೇ ಕೊರೊನಾ ಶಾಕ್ | Filmibeat Kannada

  ಕೊರೊನಾ ಪ್ರಕರಣಗಳು ರಾಜ್ಯದಾದ್ಯಂತ ತೀವ್ರವಾಗಿ ಹೆಚ್ಚಳವಾಗುತ್ತಿದೆ. ಹಲವು ಸೆಲೆಬ್ರಿಟಿಗಳಿಗೆ ಕೊರೊನಾ ಪಾಸಿಟಿವ್ ಆಗಿದೆ.

  English summary
  Actor Nikhil Kumaraswamy tested positive for Coronavirus on April 17. he developed some symptoms so he admitted to Apollo hospital where CM Yediyurappa and HD Kumarawamy admitted.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X