Don't Miss!
- Education
Chamarajanagar WCD Recruitment 2021: 223 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ - Sports
ಐಪಿಎಲ್ 2021: ಕೊಲ್ಕತ್ತಾ ಮತ್ತು ಪಂಜಾಬ್ ಮುಖಾಮುಖಿಯ ಅಂಕಿಅಂಶ - Automobiles
ಕೇವಲ 2.7 ಸೆಕೆಂಡ್ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ, ಹೊಸ ಫೆರಾರಿ ಕಾರು ಅನಾವರಣ - News
ಪಂಡಿತ್ ರಾಜನ್ ಮಿಶ್ರಾ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ - Lifestyle
ಈ ನೈಸರ್ಗಿಕ ವಿಷಯಗಳಿಂದ ನಿಮ್ಮ ಬ್ಲಾಕ್ ಹೆಡ್ಸ ನ್ನು ತೆಗೆದುಹಾಕಬಹುದು - Finance
ಚಿನ್ನದ ಬೆಲೆ ಇಳಿಕೆ: 3 ದಿನಗಳಲ್ಲಿ 1,000 ರೂಪಾಯಿ ಕುಸಿತ - Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ! - Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೀವ್ರ ಜ್ವರ, ಆಸ್ಪತ್ರೆಗೆ ದಾಖಲಾದ ಕೊರೊನಾ ಸೋಂಕಿತ ನಿಖಿಲ್ ಕುಮಾರಸ್ವಾಮಿ
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವ ವಿಷಯ ಏಪ್ರಿಲ್ 17 ರಂದು ಖಾತ್ರಿಯಾಗಿತ್ತು. ನಿಖಿಲ್ ಅವರಿಗೆ ಜ್ವರ ಮತ್ತು ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಇಂದು (ಏಪ್ರಿಲ್ 19) ನಗರದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಖಿಲ್ ಕುಮಾರಸ್ವಾಮಿ ಅವರ ತಂದೆ, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರನ್ನೂ ಅದೇ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊದಲಿಗೆ ಎಚ್ಡಿ ಕುಮಾರಸ್ವಾಮಿ ಅವರಿಗೆ ಕೊರೊನಾ ಇರುವುದು ಧೃಡವಾಗಿತ್ತು. ಅದಾದ ನಂತರ ಪರೀಕ್ಷೆಗೆ ಒಳಗಾದ ನಿಖಿಲ್ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂತು. ನಿಖಿಲ್-ರೇವತಿ ಅವರ ಮೊದಲ ವಿವಾಹ ವಾರ್ಷಿಕೋತ್ಸವದ ದಿನದಂದೇ ಕೊರೊನಾಕ್ಕೆ ತುತ್ತಾದರು ನಿಖಿಲ್.
ನಿಖಿಲ್ ಅವರಿಗೆ ನಿನ್ನೆ ಸಂಜೆ ವೇಳೆಗೆ ಜ್ವರ ಕಾಣಿಸಿಕೊಂಡಿತ್ತು ಅಲ್ಲದೆ ತಲೆ ನೋವು ಸಹ ತೀವ್ರವಾದ ಕಾರಣ ಇಂದು ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಖಿಲ್ ಅವರ ಸಂಬಂಧಿಯೂ ಆಗಿರುವ ಹಿರಿಯ ಹೃದಯ ತಜ್ಞ, ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಅವರ ಸಲಹೆಯಂತೆ ನಿಖಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಅದೇ ಆಸ್ಪತ್ರೆಯಲ್ಲಿ ದಾಖಲಾಗಿರುವ ಕುಮಾರಸ್ವಾಮಿ ಅವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಸಿಎಂ ಯಡಿಯೂರಪ್ಪ ಅವರೂ ಸಹ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರಿಗೂ ಸಹ ಯಾವುದೇ ರೋಗ ಲಕ್ಷಣಗಳು ಇಲ್ಲ.
ಕೊರೊನಾ ಪ್ರಕರಣಗಳು ರಾಜ್ಯದಾದ್ಯಂತ ತೀವ್ರವಾಗಿ ಹೆಚ್ಚಳವಾಗುತ್ತಿದೆ. ಹಲವು ಸೆಲೆಬ್ರಿಟಿಗಳಿಗೆ ಕೊರೊನಾ ಪಾಸಿಟಿವ್ ಆಗಿದೆ.


Click it and Unblock the Notifications






























