Don't Miss!
- Automobiles
ಕೋವಿಡ್ ಸಂಕಷ್ಟ: ಕಾರು ಉತ್ಪಾದನೆ ಸ್ಥಗಿತಗೊಳಿಸಿ ಆಕ್ಸಿಜನ್ ಉತ್ಪಾದನೆ ಆರಂಭಿಸಿದ ಮಾರುತಿ ಸುಜುಕಿ - Sports
T20I Rankings: ಟಾಪ್ 10ನಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ - Education
Bangalore University: ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವರ್ಕ್ ಫ್ರಂ ಹೋಂ ನೀಡಲು ಬೆಂಗಳೂರು ವಿವಿ ನಿರ್ಧಾರ - Finance
ಕೋವಿಶೀಲ್ಡ್ ಲಸಿಕೆ ಬೆಲೆ 100 ರೂ. ಇಳಿಕೆ: ಪ್ರತಿ ಡೋಸ್ 300 ರೂಪಾಯಿ - News
ಹೃದಯ ವಿದ್ರಾವಕ: ಸೈಕಲ್ನಲ್ಲಿ ಪತ್ನಿ ಮೃತದೇಹ ಹೊತ್ತು ಸಾಗಿದ ಅಸಹಾಯಕ! - Lifestyle
ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಯರ ತೂಕ ಹೆಚ್ಚಾಗಲು ಕಾರಣವೇನು ಗೊತ್ತಾ? - Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ! - Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂತಸಪಡುವ ದಿನದಂದೇ ಬೇಸರದ ಸುದ್ದಿ, ನಿಖಿಲ್ ಕುಮಾರಸ್ವಾಮಿಗೆ ಆತಂಕ
ನಟ ನಿಖಿಲ್ ಕುಮಾರಸ್ವಾಮಿ ಮದುವೆಯಾಗಿ ಇಂದಿಗೆ (ಏಪ್ರಿಲ್ 17) ಒಂದು ವರ್ಷವಾಯಿತು. ಸಂತೋಷದಿಂದ ಕಳೆಯಬೇಕಿದ್ದ ಈ ದಿನವೇ ನಿಖಿಲ್ ಕುಮಾರಸ್ವಾಮಿ ಆತಂಕ ಪಡಬೇಕಾದ ಸ್ಥಿತಿ ಎದುರಾಗಿದೆ.
ನಿಖಿಲ್ ಕುಮಾರಸ್ವಾಮಿಗೆ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ನಿಖಿಲ್ ಮಾತ್ರವೇ ಅಲ್ಲದೆ, ಅವರ ತಂದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಕೊರೊನಾ ಪಾಸಿಟಿವ್ ಆಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಿಖಿಲ್ ಕುಮಾರಸ್ವಾಮಿ, 'ತಂದೆಯವರಿಗೆ ಕೊರೊನಾ ಪಾಸಿಟಿವ್ ಆದ ಕಾರಣ ನಾನೂ ಸಹ ಪರೀಕ್ಷೆಗೆ ಒಳಪಟ್ಟೆ. ನನಗೂ ಕೊರೊನಾ ಪಾಸಿಟಿವ್ ಇರುವುದಾಗಿ ವರದಿ ಬಂದಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲ ದಿನಗಳಲ್ಲಿ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆಗೆ ಒಳಗಾಗಿ' ಎಂದಿದ್ದಾರೆ ನಿಖಿಲ್.
ಇನ್ನು ತಂದೆ ಕುಮಾರಸ್ವಾಮಿ ಆರೋಗ್ಯದ ಬಗ್ಗೆಯೂ ಮಾಹಿತಿ ಹಂಚಿಕೊಂಡಿರುವ ನಿಖಿಲ್, 'ಮಾಜಿ ಮುಖ್ಯಮಂತ್ರಿಗಳು ಹಾಗೂ ನನ್ನ ತಂದೆ ಕುಮಾರಸ್ವಾಮಿ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಮತ್ತು ದೇವರ ದಯೆಯಿಂದ ಆದಷ್ಟು ಬೇಗ ಗುಣಮುಖರಾಗಲಿದ್ದಾರೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಯಾವುದೇ ಆತಂಕ ಬೇಡ ಎಂದು ಮನವಿ ಮಾಡಿಕೊಳ್ಳುತ್ತೇನೆ' ಎಂದಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಹಾಗೂ ರೋಹಿಣಿ ವಿವಾಹವಾಗಿ ಇಂದಿಗೆ ಒಂದು ವರ್ಷವಾಯ್ತು. ಏಪ್ರಿಲ್ 17, 2020 ರಂದು ಬಿಡದಿ ಬಳಿಯ ಕೇತಿಗಾನಹಳ್ಳಿ ಫಾರಂ ಹೌಸ್‌ನಲ್ಲಿ ಕುಟುಂಬ ಸದಸ್ಯರ ಮುಂದೆ ವಿವಾಹ ಬಂಧನಕ್ಕೆ ಒಳಗಾದರು. ಕೋವಿಡ್ ನಿಯಮಗಳು ಅತ್ಯಂತ ಕಠಿಣವಾಗಿದ್ದ ಸಮಯದಲ್ಲಿ ನಿಖಿಲ್-ರೋಹಿಣಿ ವಿವಾಹ ನಡೆದಿತ್ತು. ವಿವಾಹಕ್ಕೆ ಅನುಮತಿ ನೀಡಿದ ಬಗ್ಗೆ ಕೆಲವು ಅಪಸ್ವರಗಳು ಸಹ ಕೇಳಿಬಂದಿತ್ತು.


Click it and Unblock the Notifications






























