For Quick Alerts
  ALLOW NOTIFICATIONS  
  For Daily Alerts

  'ರೈಡರ್' ಡಬ್ಬಿಂಗ್ ಆರಂಭಿಸಿದ ನಿಖಿಲ್ ಕುಮಾರ್

  |

  'ಸೀತಾರಾಮ ಕಲ್ಯಾಣ' ಚಿತ್ರದ ನಂತರ ನಿಖಿಲ್ ಕುಮಾರ್ ನಟನೆಯ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ಮಾಡಿರುವ 'ರೈಡರ್' ಸಿನಿಮಾ ಚಿತ್ರೀಕರಣ ಮುಗಿಸಿದ ತೆರೆಗೆ ಬರಲು ಸಜ್ಜಾಗಿದೆ. ಆದರೆ, ಕೋವಿಡ್ ಕಾರಣದಿಂದ ಪೋಸ್ಟ್ ಪ್ರೊಡಕ್ಷನ್‌ಗೆ ಬ್ರೇಕ್ ಹಾಕಲಾಗಿತ್ತು.

  ಇದೀಗ, ರೈಡರ್ ಚಿತ್ರದ ಡಬ್ಬಿಂಗ್‌ಗೆ ನಟ ನಿಖಿಲ್ ಕುಮಾರ್ ಚಾಲನೆ ಕೊಟ್ಟಿದ್ದಾರೆ. ಈ ವೇಳೆ ವಿಶೇಷ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಲಾಗಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರೊಂದಿಗೆ ರೈಡರ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

  ಅಂದ್ಹಾಗೆ, ರೈಡರ್ ಸಿನಿಮಾ ಆಕ್ಷನ್ ಎಂಟರ್‌ಟೈನ್‌ಮೆಂಟ್ ಆಗಿದ್ದು, ಇದರಲ್ಲಿ ನಿಖಿಲ್ ಕುಮಾರ್ ಕ್ರೀಡಾಪಟು ಆಗಿ ನಟಿಸಿದ್ದಾರೆ. ಇದಕ್ಕೂ ಮುಂಚೆ 'ಒಕಾ ಲೈಲಾ ಕೋಸಮ್', 'ಗುಂಡೆ ಜಾರಿ ಗಲ್ಲಂತಯ್ಯಂದಿ' ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕುಮಾರ್ ಕೊಂಡ ಈಗ ರೈಡರ್ ಮೂಲಕ ಕನ್ನಡಕ್ಕೆ ಬಂದಿದ್ದಾರೆ.

  ನಿಜ ಜೀವನದ ಘಟನೆಗಳನ್ನು ಆಧರಿಸಿ ಕಮರ್ಷಿಯಲ್ ಆಗಿ ಕಥೆ ಮಾಡಲಾಗಿದ್ದು, ಕಾಶ್ಮೀರ ಪರದೇಶಿ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಇವರಿಗೆ ಮೊದಲ ಕನ್ನಡ ಸಿನಿಮಾ. ಸಂಪದ ಎರಡನೇ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ದತ್ತಣ್ಣ, ಚಿಕ್ಕಣ್ಣ, ಶಿವರಾಕ್ ಕೆ ಆರ್ ಪೇಟೆ, ರಾಜೇಶ್ ನಟರಂಗ, ಶೋಭರಾಜ್, ನಿಹಾರಿಕ ಮತ್ತು ಅನುಶಾ ಪಾತ್ರವರ್ಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಶ್ರೀರು ಕುದುವಳ್ಳಿ ಛಾಯಾಗ್ರಾಹಣವಿದೆ.

  ರೈಡರ್ ತೆರೆಗೆ ಬರುವುದಕ್ಕೆ ಮುಂಚೆಯೇ ಮಂಜು ಅಥರ್ವ ಜೊತೆ ಹೊಸ ಚಿತ್ರಕ್ಕೆ ನಿಖಿಲ್ ಕುಮಾರ್ ಚಾಲನೆ ನೀಡಿದ್ದಾರೆ. ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದ್ದು, ಟೈಟಲ್ ಅಂತಿಮವಾಗಿಲ್ಲ. ಅಜನೀಶ್ ಲೋಕನಾಥ್ ಸಂಗೀತವಿದೆ.

  ವಿಶೇಷ ಅಂದ್ರೆ ನಿಖಿಲ್ ಕುಮಾರ್ ಪತ್ನಿ ರೇವತಿ ಗರ್ಭಿಣಿಯಾಗಿದ್ದು, ಶೀಘ್ರದಲ್ಲಿಯೇ ಚೊಚ್ಚಲ ಮಗುವನ್ನು ಸ್ವಾಗತಿಸಲಿದ್ದಾರೆ.

  English summary
  Kannada actor Nikhil Kumaraswamy begins dubbing for his upcoming movie Rider. directed by vijay Kumar konda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X