For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್ ‘ಯುವರಾಜ’ ನಿಖಿಲ್ ಬರ್ತ್‌ಡೇಗೆ ಐದನೇ ಸಿನಿಮಾದ ಟೈಟಲ್ ರಿಲೀಸ್

  |

  ಸ್ಯಾಂಡಲ್‌ವುಡ್ 'ಯುವರಾಜ' ನಿಖಿಲ್ ಕುಮಾರಸ್ವಾಮಿ ನಾಲ್ಕನೇ ಸಿನಿಮಾ 'ರೈಡರ್' ಇತ್ತೀಚೆಗೆ ರಿಲೀಸ್ ಆಗಿತ್ತು. ಇದೇ ಮೊದಲ ಬಾರಿಗೆ ನಿಖಿಲ್ ಬಾಸ್ಕೆಟ್ ಬಾಲ್ ಆಟಗಾರರಾಗಿ ಕಾಣಿಸಿಕೊಂಡಿದ್ದರು. 'ರೈಡರ್' ಸಿನಿಮಾ ನೋಡಿದ ನಿಖಿಲ್ ಅಭಿಮಾನಿಗಳು ಮನಸಾರೆ ಹಾಡಿ ಹೊಗಳಿದ್ದರು. ಆದರೆ, ಅದ್ಯಾಕೋ 'ರೈಡರ್' ಥಿಯೇಟರ್‌ನಲ್ಲಿ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ.

  Recommended Video

  ಸದ್ದಿಲ್ಲದೇ ಸ್ಟಾರ್ಟ್ ಆಯ್ತು ನಿಖಿಲ್ ಹೊಸ ಸಿನಿಮಾ

  ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಆದರೂ, 'ರೈಡರ್' ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಿಲಿಲ್ಲ. ಈ ಮಧ್ಯೆ ಪೈರಸಿ ಕಾಟ ಚಿತ್ರಕ್ಕೆ ದೊಡ್ಡ ತಲೆನೋವಾಗಿತ್ತು. ಈ ಹೊಸ ಆಶಯದೊಂದಿಗೆ 5ನೇ ಸಿನಿಮಾ ಸೆಟ್ಟೇರಿದೆ. ಚಿತ್ರ ಶೂಟಿಂಗ್ ಕೂಡ ಆರಂಭ ಆಗಿದೆ. ಆದರೆ, ಇಲ್ಲಿವರೆಗೂ ಟೈಟಲ್ ಹಾಗೂ ಫಸ್ಟ್ ಲಕ್ ರಿವೀಲ್ ಮಾಡಿರಲಿಲ್ಲ. ಈಗ ನಿಖಿಲ್ ಬರ್ತ್‌ಡೇ ಸಿನಿಮಾ ಟೈಟಲ್ ಅನೌನ್ಸ್ ಮಾಡಿ, ಫಸ್ಟ್ ಲುಕ್ ರಿವೀಲ್ ಮಾಡಲಿದ್ದಾರೆ.

  ನಿಖಿಲ್ ಬರ್ತ್‌ಡೇಗೆ ಟೈಟಲ್ ರಿಲೀಸ್

  ನಿಖಿಲ್ ಬರ್ತ್‌ಡೇಗೆ ಟೈಟಲ್ ರಿಲೀಸ್

  ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಜನವರಿ 22 ರಂದು ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನದಂದು ನಿಖಿಲ್ ಹೊಚ್ಚ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಯವರಾಜನ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಲು ಸಜ್ಜಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಟೈಟಲ್ ಬಗ್ಗೆ ಈಗಾಗಲೇ ಚರ್ಚೆ ಆರಂಭ ಆಗಿದೆ. 'ಯದುವೀರ್' ಇಲ್ಲವೇ 'ಯುವರಾಜ' ಎರಡರಲ್ಲಿ ಒಂದು ಟೈಟಲ್ ಫಿಕ್ಸ್ ಎನ್ನುವ ಸುದ್ದು ಓಡಾಡುತ್ತಿದೆ. ಆದರೆ, ಈ ಟೈಟಲ್ ಬಗ್ಗೆ ಎಲ್ಲೂ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ. ಅಂದ ಹಾಗೇ ಈ ಹೊಸ ಸಿನಿಮಾಗೆ ಮಂಜು ಅಥರ್ವ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಯಾರೀ ನಿರ್ದೇಶಕ ಮಂಜು ಅಥರ್ವ?

  ಯಾರೀ ನಿರ್ದೇಶಕ ಮಂಜು ಅಥರ್ವ?

  ನಿಖಿಲ್ 5ನೇ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಮಂಜು ಅಥರ್ವಗೆ ನಿರ್ದೇಶನದಲ್ಲಿ ಸಾಕಷ್ಟು ಅನುಭವವಿದೆ. ಏಳು ವರ್ಷಗಳಿಂದ ನಿರ್ದೇಶಕನಾಗಿ ಬೇರೆ ಬೇರೆ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಕದಿರನ್ ಜೊತೆ ಕೆಲಸ ಮಾಡಿದ್ದಾರೆ. 'ಮಾಸ್ಟರ್ ಪೀಸ್', 'ಮಫ್ತಿ' ಅಂತಹ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ದುಡಿದಿರುವ ಅನುಭವವಿದೆ. ಇತ್ತೀಚೆಗೆ ತೆರೆಕಂಡ 'ಪ್ರೇಮಂ ಪೂಜ್ಯಂ' ಸಿನಿಮಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

  ನಿಖಿಲ್ ಚಿತ್ರದ ಶೂಟಿಂಗ್ ಆರಂಭ

  ನಿಖಿಲ್ ಚಿತ್ರದ ಶೂಟಿಂಗ್ ಆರಂಭ

  ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ನಿಖಿಲ್ ಕುಮಾರಸ್ವಾಮಿ 5ನೇ ಸಿನಿಮಾ ಟೇಕ್ ಆಫ್ ಆಗಿದೆ. ಈಗಾಗಲೇ ಶೂಟಿಂಗ್ ಆರಂಭ ಆಗಿ ಕೆಲವು ದಿನಗಳ ಚಿತ್ರೀಕರಣ ಕೂಡ ನಡೆಯುತ್ತಿದೆ. ನಿಖಿಲ್ ಭಾಗ ದೃಶ್ಯಗಳನ್ನು ಸಿನಿಮಾ ತಂಡ ಶೂಟ್ ಮಾಡುತ್ತಿದೆ. ಸಿನಿಮಾ ಚಿತ್ರೀಕರಣದ ವೇಳೆನೂ ಚಿತ್ರದ ಟೈಟಲ್ ಅನ್ನು ಬಿಟ್ಟು ಕೊಟ್ಟಿರಲಿಲ್ಲ. ಹೀಗಾಗಿ ಜನವರಿ 22ರಂದು ನಿಖಿಲ್ ಹುಟ್ಟುಹಬ್ಬಕ್ಕೆ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಲಿದೆ.

  ನಿಖಿಲ್ ಸಿನಿಮಾ ಅಜನೀಶ್ ಮ್ಯೂಸಿಕ್

  ನಿಖಿಲ್ ಸಿನಿಮಾ ಅಜನೀಶ್ ಮ್ಯೂಸಿಕ್

  ನಿಖಿಲ್ ಹೊಸ ಸಿನಿಮಾ ತಾಂತ್ರಿಕ ವರ್ಗ ಕೆಲಸ ಆರಂಭಿಸಿದೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. 'ಮದಗಜ' ಚಿತ್ರದ ಕೊರಿಯೋಗ್ರಾಫರ್ ನವೀನ್ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ನಿಖಿಲ್ ಕುಮಾರ್ ಜೊತೆ ಯಾರೆಲ್ಲಾ ಕಲಾವಿದರು ನಟಿಸುತ್ತಿದ್ದಾರೆ? ನಿಖಿಲ್‌ ಕುಮಾರಸ್ವಾಮಿಗೆ ನಾಯಕಿ ಯಾರು ಎಂಬುದನ್ನು ಚಿತ್ರತಂಡ ಇನ್ನೂ ಫೈನಲ್ ಮಾಡಿಲ್ಲ. ಇನ್ನು ಕೆಲವು ದಿನಗಳಲ್ಲಿ ಕಲಾವಿದರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.

  English summary
  Nikhil Kumaraswamy Fifth movie Title and first look revealed on his birthday. Alreday Nikhil Kumaraswamy has started shooting for his 5th movie.
  Tuesday, January 18, 2022, 14:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X