twitter
    For Quick Alerts
    ALLOW NOTIFICATIONS  
    For Daily Alerts

    ಕೋವಿಡ್ ವಾರಿಯರ್ ನೆರವಿಗೆ ಧಾವಿಸಿದ ನಿಖಿಲ್ ಕುಮಾರಸ್ವಾಮಿ

    |

    ಕೊರೊನಾ ವೈರಸ್ ಬಿಕ್ಕಟ್ಟಿನಲ್ಲಿ ಜನಸಾಮಾನ್ಯರ ಆರೋಗ್ಯ ಸುಧಾರಣೆಗಾಗಿ ರಾತ್ರಿ-ಹಗಲು ದುಡಿಯುತ್ತಿರುವ ಕೋವಿಡ್ ವಾರಿಯರ್ಸ್‌ಗೆ ನಟ-ರಾಜಕಾರಣಿ ನಿಖಿಕ್ ಕುಮಾರ್ ನೆರವು ನೀಡಿದ್ದಾರೆ.

    ಕೊರೊನಾ ವಿರುದ್ಧ ಹಗಲು ರಾತ್ರಿ ಶ್ರಮಪಟ್ಟ 430 ಆಶಾ ಕಾರ್ಯಕರ್ತೆಯರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗೌರವ ಧನ ನೀಡಿ ಸಹಾಯ ಹಸ್ತ ಚಾಚಿದರು.

    ರಾಗಿ ಬೆಳೆದ ನಿಖಿಲ್ ಕುಮಾರಸ್ವಾಮಿ, ಭೇಷ್ ಎಂದ ದೇವೇಗೌಡರಾಗಿ ಬೆಳೆದ ನಿಖಿಲ್ ಕುಮಾರಸ್ವಾಮಿ, ಭೇಷ್ ಎಂದ ದೇವೇಗೌಡ

    ರಾಮನಗರದ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿ ಅವರಣದಲ್ಲಿ ಹಮ್ಮಿಕೊಂಡಿರುವ ಸರಳ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರು, ಸ್ಟಾಫ್ ನರ್ಸ್‌ಗಳಿಗೆ ಗೌರವಧನ ಮತ್ತು ನೆಬ್ಲೆಝ್ಯೆಷನ್ ಮಿಷಿನ್ ವಿತರಣೆ ಮಾಡಲಾಯಿತು.

    Nikhil Kumaraswamy helps to Asha Workers, Anganwadi Karyakarta and Staff Nurse

    ಸಿನಿಮಾ ಹಾಗೂ ರಾಜಕಾರಣದಲ್ಲಿ ಸಕ್ರಿಯರಾಗಿರುವ ನಿಖಿಲ್ ಕುಮಾರ್, ಲಾಕ್‌ಡೌನ್ ವೇಳೆ ರಾಮನಗರದಲ್ಲಿರುವ ಕೇತಗಾನಹಳ್ಳಿಯಲ್ಲಿ ಜಮೀನಿನಲ್ಲಿ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದರು. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಜಮೀನಿಗೆ ಭೇಟಿ ನೀಡಿದಾಗ ನಿಖಿಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    Recommended Video

    Yash ಮಾಡಿದ ಒಳ್ಳೆ ಕೆಲಸಕ್ಕೆ Upendra ಫಿದಾ | Filmibeat Kannada

    ಇನ್ನು ನಿಖಿಲ್ ಕುಮಾರಸ್ವಾಮಿ ಅಭಿನಯದ 'ರೈಡರ್' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಈ ನಡುವೆ ಶಿವರಾಜ್ ಕುಮಾರ್ ಜೊತೆಗೆ ಹೊಸ ಸಿನಿಮಾದಲ್ಲಿ ನಿಖಿಲ್ ನಟಿಸಲಿದ್ದಾರೆ ಎನ್ನಲಾಗಿದೆ. ಅದಾದ ಬಳಿಕ ನಿರ್ದೇಶಕ ಕೃಷ್ಣ ಜೊತೆಗೆ ಪ್ರಾಜೆಕ್ಟ್ ಘೋಷಿಸುವ ಸಾಧ್ಯತೆ ಇದೆ.

    English summary
    JDS State youth president nikhil kumaraswamy helps to asha workers, anganwadi karyakarta and staff nurse.
    Thursday, June 3, 2021, 14:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X