Don't Miss!
- Sports
IPL 2022: ಮುಕ್ತಾಯವಾದ ನಂತರ ತಂಡಗಳು ಮತ್ತು ಆಟಗಾರರಿಗೆ ಸಿಗಲಿರುವ ಪ್ರಶಸ್ತಿ ಮತ್ತು ಹಣವೆಷ್ಟು?
- News
ಪಠ್ಯ ಪುಸ್ತಕಗಳಲ್ಲಿ ರಾಜಕೀಯ ಸೇರಿಸಬೇಡಿ: ಸಲೀಂ ಅಹ್ಮದ್
- Finance
Masked ಆಧಾರ್ ಕಾರ್ಡ್ ಎಂದರೇನು? Download ಮಾಡುವುದು ಹೇಗೆ?
- Automobiles
ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು
- Technology
ಪ್ರಸ್ತುತ ನೀವು ಖರೀದಿಸಬಹುದಾದ ಮಧ್ಯಮ ಶ್ರೇಣಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
- Lifestyle
ಮೇ 29 ರಿಂದ ಜೂನ್ 4ರ ವಾರ ಭವಿಷ್ಯ: ಮಿಥುನ, ಸಿಂಹ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಿ
- Education
BCWD Dolu And Nadaswara Music Training : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹುಟ್ಟುಹಬ್ಬ ಆಚರಣೆ ಬೇಡವೆಂದ ನಿಖಿಲ್: ಮಾಡಿದರು ಅಭಿಮಾನಿಗಳಲ್ಲಿ ವಿಶೇಷ ಮನವಿ
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬ ನಾಳೆ (ಜನವರಿ 22). ಆದರೆ ಕಳೆದ ಬಾರಿಯಂತೆ ಈ ಬಾರಿಯೂ ತಮ್ಮ ಹುಟ್ಟುಹಬ್ಬ ಆಚರಣೆ ಬೇಡವೆಂದು ಅಭಿಮಾನಿಗಳಲ್ಲಿ ನಿಖಿಲ್ ಮನವಿ ಮಾಡಿದ್ದಾರೆ.
ತಮ್ಮ ಹುಟ್ಟುಹಬ್ಬ ಆಚರಣೆ ಮಾಡುವ ಬದಲಿಗೆ ಸಾಮಾಜಿಕ ಕಾರ್ಯ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿರುವ ನಿಖಿಲ್, ''ಕೋವಿಡ್ ಸಂಕಷ್ಟದ ಸಮಯದಲ್ಲಿ ಅದ್ಧೂರಿ ಹುಟ್ಟುಹಬ್ಬದ ಆಚರಣೆಗೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ ಈ ವರ್ಷ ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಅಭಿಮಾನಿಗಳು, ಕಾರ್ಯಕರ್ತರು ಕೋವಿಡ್ ಸಂಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ತಾವಿದ್ದಲ್ಲಿಂದಲೇ ನನಗೆ ಹರಸಿ. ಒಂದು ಅರ್ಥಪೂರ್ಣ ಆಚರಣೆಗೆ ಕೈಜೋಡಿಸಿ'' ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ನಿಖಿಲ್ ಕುಮಾರಸ್ವಾಮಿಗೆ ಈ ಬಾರಿಯ ಹುಟ್ಟುಹಬ್ಬ ವಿಶೇಷವಾಗಿರಲಿದೆ. ನಿಖಿಲ್ ಇತ್ತೀಚೆಗಷ್ಟೆ ತಂದೆಯಾಗಿದ್ದು, ಅಪ್ಪನಾಗಿ ಅವರಿಗೆ ಇದು ಮೊದಲ ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬಕ್ಕೆ ಮಗನೂ ಜೊತೆಗಿರಲಿದ್ದಾನೆ.
ನಟ, ರಾಜಕಾರಣಿ ಎರಡೂ ಆಗಿರುವ ನಿಖಿಲ್ ಪ್ರಸ್ತುತ ಎರಡೂ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಕಳೆದ ಎಂಎಲ್ಸಿ ಚುನಾವಣೆ ವೇಳೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ನಿಖಿಲ್ ಚುನಾವಣೆ ಬಳಿಕ ತಮ್ಮ ಹೊಸ ಸಿನಿಮಾ 'ರೈಡರ್' ಪ್ರಚಾರ ನಡೆಸಿದರು.
ನಿಖಿಲ್ ನಟನೆಯ 'ರೈಡರ್' ಸಿನಿಮಾ ಡಿಸೆಂಬರ್ 24 ರಂದು ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು. ಸಿನಿಮಾದ ಪ್ರಚಾರಾರ್ಥ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಇನ್ನೂ ಮುಂತಾದ ಜಿಲ್ಲೆಗಳಿಗೆ ಓಡಾಡಿ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು ನಿಖಿಲ್. 'ರೈಡರ್' ಸಿನಿಮಾದ ಪೈರಸಿ ಕಾಪಿ ಬಿಡುಗಡೆ ಆಗಿ ಸಿನಿಮಾಕ್ಕೆ ತುಸು ಹಿನ್ನೆಡೆಯೂ ಆಗಿತ್ತು.
ಈಗಾಗಲೇ ನಿಖಿಲ್ರ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಮಂಜು ಅಥರ್ವ ನಿರ್ದೇಶನದ ಸಿನಿಮಾದಲ್ಲಿ ನಿಖಿಲ್ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಈ ಸಿನಿಮಾವನ್ನು ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಬಳಿಕ ನಂದ ಕಿಶೋರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಿಖಿಲ್ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.
ನಟ ದುನಿಯಾ ವಿಜಯ್ ಹುಟ್ಟುಹಬ್ಬ ಜನವರಿ 20 ರಂದು ಇತ್ತು. ಆದರೆ ಅವರೂ ಸಹ ತಮ್ಮ ಹುಟ್ಟುಹಬ್ಬ ಆಚರಣೆಯಿಂದ ದೂರ ಉಳಿದರು. 'ಅಪ್ಪ-ಅಮ್ಮ ಹಾಗೂ ಅಪ್ಪು ಅನ್ನು ಕಳೆದುಕೊಂಡಿರುವ ನೋವಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿಲ್ಲ'' ಎಂದು ದುನಿಯಾ ವಿಜಯ್ ಹೇಳಿದ್ದರು. ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣ ಮೂಲಕ ಶುಭಾಶಯ ಕೋರಿದರು.