ನಿಖಿಲ್ ಕುಮಾರಸ್ವಾಮಿ ಪುತ್ರ ಅವ್ಯಾನ್ ದೇವ್ ಮುಡಿಕೊಟ್ಟ ಕುಟುಂಬ!
ನಿಖಿಲ್ ಕುಮಾರ್ ಮತ್ತು ರೇವತಿ ಪುತ್ರನ ನಾಮಕರಣ ಕೆಲವು ತಿಂಗಳ ಹಿಂದಷ್ಟೇ ನೆರವೇರಿದೆ. ಈಗ ಮಗುವಿನ ಮುಡಿ ಕೊಡಲಾಗಿದೆ. ಜೂನ್ 8ರಂದು ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಸಮಾರಂಭ ನಡೆಯುತ್ತಿದೆ. ಅವ್ಯಾನ್ ದೇವ್ ಎಂದು ಹೆಸರಿಟ್ಟರು.
ಇನ್ನು ಇತ್ತೀಚೆಗೆ ಆಗಸ್ಟ್ 18ರಂದು ಕೃಷ್ಣ ಜನ್ಮಾಷ್ಟಮಿ ದಿನ ಪುತ್ರನಿಗೆ ಕೃಷ್ಣನ ರೀತಿ ಅಲಂಕಾರ ಮಾಡಿ ಫೋಟೋಶೂಟ್ ಮಾಡಿಸಿದ್ದಾರೆ. ಪಂಚೆ ಧರಿಸಿ ನವಿಲು ಗರಿ ಇಟ್ಟುಕೊಂಡಿರುವ ಮುದ್ದು ಕೃಷ್ಣ ಲುಕ್ ವೈರಲ್ ಆಗಿತ್ತು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೊಮ್ಮಗನ ಮೊದಲ ಮುಡಿ ಶಾಸ್ತ್ರ ನೆರವೆರಿದೆ. ಇದೇ ಆಗಸ್ಟ್ 21 ಮನೆ ದೇವರ ಮುಂದೆ ನಡೆಯಿತು. ಚನ್ನರಾಯಪಟ್ಟಣ ತಾಲೂಕಿನ ಯಲಿಯೂರು ಲಕ್ಷ್ಮಿ ದೇಗುಲದಲ್ಲಿ ಕುಮಾರಸ್ವಾಮಿ ಮೊಮ್ಮಗನ ಮುಡಿ ಅರ್ಪಿಸಿ ಪೂಜೆ ಸಲ್ಲಿಸಲಾಯಿತು.

ಅಲ್ಲಿಂದ ಹೆಳನರಸೀಪುರ ತಾಲೂಕಿನ ಹರದನಹಳ್ಳಿಯ ಕುಲದೇವರು ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ಜತೆಗಿದ್ದರು. ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದರು.
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ 2020 ಏಪ್ರಿಲ್‌ನಲ್ಲಿ ಹಸೆಮಣೆ ಏರಿದರು. ಇಬ್ಬರ ಮದುವೆಗೆ ಲಾಕ್ ಡೌನ್ ಅಡ್ಡಿಯಾಗಿತ್ತು. ಲಾಕ್ ಡೌನ್ ಸಮಯದಲ್ಲೇ ರಾಮನಗರದಲ್ಲಿ ನಿಖಿಲ್ ಕುಮಾರ್, ರೇವತಿ ಮದುವೆ ನೆರವೇರಿತು.
ನಿಖಿಲ್ ಮತ್ತು ರೇವತಿ ಆಗಾಗ ತಮ್ಮ ಮಗುವಿನ ಜೊತೆಗೆ ಇರುವ ಫೋಟೊಗಳನ್ನು ಸಾಮಾಜಿಕಾ ಜಾಲಾತಾನದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಮಗುವಿನ ಮುಖ ತೋರಿಸಿಲ್ಲ. ನಿಖಿಲ್ ರೇವತಿ ಮದುವೆ, ಸೀಮಂತಾ ಕಾರ್ಯಕ್ರಮ ಸೇರಿದಂತೆ ಎಲ್ಲಾವೂ ಬಹಳ ಅದ್ಧೂರಿಯಾಗಿ ನೆರವೇರಿದೆ. ಈಗ ಮಗುವಿನ ನಾಮಕರಣವನ್ನೂ ಕೂಡ ಅದ್ದೂರಿಯಾಗಿ ಮಾಡಿದ್ದಾರೆ.
2020ರಲ್ಲಿ ಬಿಡದಿಯ ತೋಟದ ಮನೆಯಲ್ಲಿ ನಿಖಿಲ್ ಮತ್ತು ರೇವತಿಯ ಮದುವೆ ಅದ್ಧೂರಿಯಾಗಿ ನಡೆದಿದೆ. 2021ರ ಸೆಪ್ಟೆಂಬರ್ನಲ್ಲಿ ರೇವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗುವಿನ ನಾಮಕರಣ ಮಾಡಲಾಗಿದೆ. ನಾಮಕರಣ ಸಮಾರಂಭದಲ್ಲಿ ಗೌಡರ ಕುಟುಂಬ ಹಾಗೂ ಕೆಲ ಆಪ್ತರು ಮಾತ್ರ ಭಾಗವಹಿಸಿದ್ದಾರೆ.
ಇನ್ನು ನಿಖಿಲ್ ಕುಮಾರ್ ಸಿನಿಮಾಗಳ ಬಗ್ಗೆ ಮಾತನಾಡುವುದಾದರೆ, ಜಾಗ್ವಾರ್ ಸಿನಿಮಾದ ಮೂಲಕ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ನಿಖಿಲ್ ಅಭಿನಯದ 'ರೈಡರ್' ರಿಲೀಸ್ ಆಗಿದ್ದು, ಅವರ ಮುಂದಿನ ಸಿನಿಮಾ ಸೆಟ್ಟೇರಬೇಕು. ಇನ್ನು ಒಂದಷ್ಟು ಸಿನಮಾಗಳು ನಿಖಿಲ್ ಕುಮಾರ್ ಕೈಯಲ್ಲಿ ಇದ್ದು, ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿಯು ನಿಖಿಲ್ ಕುಮಾರ್ ಸಿನಿಮಾ ಮಾಡುತ್ತಿದ್ದಾರೆ.


Click it and Unblock the Notifications











