For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗ ಬಂದ್ ಬೇಡವೆಂದ ನಿಖಿಲ್, ಕರ್ನಾಟಕ ಬಂದ್‌ ಬಗ್ಗೆಯೂ ಅಸಮಾಧಾನ

  By ರಾಮನಗರ ಪ್ರತಿನಿಧಿ
  |

  ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸಲು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 31ರ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು, ಚಿತ್ರೋದ್ಯಮದ ಗಣ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

  ಕರ್ನಾಟಕ ಬಂದ್‌ಗೆ ಚಿತ್ರರಂಗ ಬೆಂಬಲ ನೀಡಲಿದೆ ಎನ್ನಲಾಗಿತ್ತು, ಆದರೆ ಬಳಿಕ ಕೆಲವು ಭಿನ್ನ ಸ್ವರಗಳು ಎದ್ದು ಚಿತ್ರರಂಗ ಬಂದ್‌ಗೆ ನೈತಿಕ ಬೆಂಬಲವನ್ನಷ್ಟೆ ನೀಡಲಿದೆ, ಚಿತ್ರರಂಗದ ಚಟುವಟಿಕೆಗಳು, ಚಿತ್ರಮಂದಿರಗಳ ಬಂದ್ ಬೇಡ ಎನ್ನಲಾಯಿತು. ಕೆಲವು ಸ್ಟಾರ್ ನಟರು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  'ರೈಡರ್' ಸಿನಿಮಾದ ಪ್ರಚಾರಕ್ಕಾಗಿ ನಿನ್ನೆ ಮೈಸೂರಿಗೆ ಆಗಮಿಸಿದ್ದ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಸಹ ಚಿತ್ರರಂಗ ಬಂದ್‌ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ''ಡಿಸೆಂಬರ್ 31 ಶುಕ್ರವಾರ. ಅಂದು ಹಲವು ಕನ್ನಡ ಸಿನಿಮಾಗಳು ಬಿಡುಗಡೆ ಆಗುವುದಕ್ಕಿವೆ. ಎಲ್ಲರಿಗೂ ಗೊತ್ತಿರುವಂತೆ ಸಿನಿಮಾದ ಮೊದಲ ಮೂರು ದಿನದ ಕಲೆಕ್ಷನ್ ಸಿನಿಮಾದ ಯಶಸ್ಸಿಗೆ ಬಹಳ ಮುಖ್ಯ ಹೀಗಿರುವಾಗ ಮೊದಲ ದಿನವೇ ಚಿತ್ರಮಂದಿರ ಬಂದ್ ಮಾಡಿದರೆ ನಿರ್ಮಾಪಕನಿಗೆ ಅನ್ಯಾಯವಾಗುತ್ತದೆ'' ಎಂದರು.

  ''ಎರಡು ವರ್ಷ ಕೋವಿಡ್‌ನಿಂದಾಗಿ ಚಿತ್ರರಂಗ ತತ್ತರಿಸಿದೆ. ಹಾಗಾಗಿ ಈಗ ಸಾಲುಗಟ್ಟಿ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ನಮ್ಮ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಡಿಸೆಂಬರ್ 31ರಂದು ಸಹ ಹಲವು ಕನ್ನಡ ಸಿನಿಮಾಗಳು ಬಿಡುಗಡೆ ಆಗಲಿವೆ. ಅವುಗಳಿಗೂ ಒಳ್ಳೆಯದಾಗಬೇಕು'' ಎಂದರು ನಿಖಿಲ್.

  ''ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಆದರೆ ಇದರಿಂದ ಯಾರಿಗೆ ಏನು ಪ್ರಯೋಜನ, ಸಾರ್ವಜನಿಕರಿಗೆ ಏನು ಉಪಯೋಗ ಎಂಬುದರ ಪರಾಮರ್ಶೆ ಆಗಬೇಕು. ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಬಂದ್ ಮಾಡುವುದರಿಂದ ಪ್ರಯೋಜನವಿಲ್ಲ. ಬಂದ್‌ಗಳು ಕೇವಲ ಪ್ರಚಾರಕ್ಕೆ ಸೀಮಿತವಾಗಬಾರದು'' ಎಂದಿದ್ದಾರೆ ನಿಖಿಲ್.

  ಡಿಸೆಂಬರ್ 31ರಂದು ನಟ ಅಜಯ್ ರಾವ್, ರಚಿತಾ ರಾಮ್ ನಟನೆಯ 'ಲವ್ ಯು ರಚ್ಚು' ಸಿನಿಮಾ ಬಿಡುಗಡೆ ಆಗುತ್ತಿದೆ. ಅದೇ ದಿನ ದಿಗಂತ್ ನಟನೆಯ 'ಹುಟ್ಟುಹಬ್ಬದ ಶುಭಾಶಯ' ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ಒಂದೊಮ್ಮೆ ಬಂದ್ ಆಗಿ ಚಿತ್ರಮಂದಿರಗಳು ಕಾರ್ಯನಿರ್ವಹಿಸದಿದ್ದರೆ ಈ ಎರಡೂ ಸಿನಿಮಾಕ್ಕೆ ದೊಡ್ಡ ನಷ್ಟ ಉಂಟಾಗಲಿದೆ.

  ಬಂದ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ 'ಲವ್ ಯು ರಚ್ಚು' ಸಿನಿಮಾದ ನಿರ್ಮಾಪಕ ಗುರು ದೇಶಪಾಂಡೆ ಬಂದ್ ನಡೆದರೆ ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಷ್ಟೆ ಎಂದರು. ನಟ ಶಿವರಾಜ್ ಕುಮಾರ್ ಸಹ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದು, ''ನಮ್ಮವರಿಗೆ ಸಮಸ್ಯೆ ಆಗುವ ರೀತಿ ಹೋರಾಟ ಮಾಡಬಾರದು'' ಎಂದಿದ್ದಾರೆ. ನಟ ಯಶ್‌ ಸಹ ಇದೇ ಮಾದರಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  ನಿಖಿಲ್ ಕುಮಾರಸ್ವಾಮಿ ಅವರ ತಂದೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸಹ ಕರ್ನಾಟಕ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಬಂದ್‌ನಿಂದ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.

  English summary
  Nikhil Kumaraswamy oppose to movie industry bandh on December 31. He said Movie industry bandh will affect our industry only.
  Monday, December 27, 2021, 12:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X