ಸಿನಿಮಾರಂಗದಲ್ಲಿ ಅಪ್ಪನ ಹಾದಿಯನ್ನೇ ತುಳಿದ ನಿಖಿಲ್ ಕುಮಾರಸ್ವಾಮಿ

ರಾಜಕೀಯದಲ್ಲಿ ಹಿನ್ನಡೆ ಅನುಭವಿಸಿರುವ ನಿಖಿಲ್ ಕುಮಾರಸ್ವಾಮಿ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿದ್ದಾರೆ.

Recommended Video

ತಾಯಿಯನ್ನು ಕಳೆದುಕೊಂಡ ಜೋಗಿ ಪ್ರೇಮ್! | Filmibeat Kannada

ಲಾಕ್‌ಡೌನ್ ಸಮಯದಲ್ಲಿ ಪತ್ನಿಯೊಂದಿಗೆ ಹಾಯಾಗಿ ಕಾಲಕಳೆಯುತ್ತಿರುವ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಕೆಲವಾರು ಕತೆಗಳನ್ನು ಕೇಳಿ ಒಪ್ಪಿಗೆ ಸಹ ಸೂಚಿಸಿದ್ದಾರೆ ಎನ್ನಲಾಗಿದೆ.

ಹೊಸ ವಿಷಯವೆಂದರೆ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ತಂದೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ತುಳಿದಿದ್ದ ಹಾದಿಯನ್ನೇ ಸಿನಿರಂಗದಲ್ಲಿ ತುಳಿಯಲು ನಿಶ್ಚಯಿಸಿದ್ದಾರೆ.

ಕುಮಾರಸ್ವಾಮಿ ಸಹ ನಿರ್ಮಾಪಕರಾಗಿದ್ದರು

ಕುಮಾರಸ್ವಾಮಿ ಸಹ ನಿರ್ಮಾಪಕರಾಗಿದ್ದರು

ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮುನ್ನಾ ಸಿನಿಮಾ ನಿರ್ಮಾಪಕರಾಗಿದ್ದರು. ಚೆನ್ನಾಂಬಿಕಾ ಫಿಲಂಸ್‌ ಮೂಲಕ ಸಾಕಷ್ಟು ಉತ್ತಮ ಸಿನಿಮಾಗಳನ್ನು ಅವರು ಕನ್ನಡ ಸಿನಿಮಾರಂಗಕ್ಕೆ ನೀಡಿದ್ದಾರೆ. ಈಗ ಇದೇ ಹಾದಿಯನ್ನು ತುಳಿದಿದ್ದಾರೆ ನಿಖಿಲ್ ಕುಮಾರಸ್ವಾಮಿ.

ನಿರ್ಮಾಪಕರಾಗುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ

ನಿರ್ಮಾಪಕರಾಗುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ ಅವರು ನಿರ್ಮಾಪಕರಾಗುತ್ತಿದ್ದು, ತಮ್ಮ ಎನ್‌ಕೆ ಎಂಟರ್‌ಟೇನ್‌ಮೆಂಟ್ ಹೆಸರಿನ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದು, ಮೊದಲ ಸಿನಿಮಾವನ್ನು ನಿರ್ಮಿಸಲು ಸಕಲ ಸಜ್ಜಾಗಿದ್ದಾರೆ. ಸಿನಿಮಾದ ಪ್ರೀಪ್ರೊಡಕ್ಷನ್ ಹಂತ ಈಗಾಗಲೇ ಪ್ರಾರಂಭವಾಗಿದೆ.

ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ನಿರ್ಮಾಣ

ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ನಿರ್ಮಾಣ

ನಿಖಿಲ್ ಕುಮಾರಸ್ವಾಮಿ ಅವರು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದು, ಸಿನಿಮಾದ ಹೆಸರು 'ಸಂಗೀತ್'. ಹಂಬಲ್ ಪೊಲಿಟೀಶಿಯನ್ ನಾಗರಾಜ್ ಸಿನಿಮಾ ನಿರ್ದೇಶಿಸಿದ್ದ ಸಾದ್ ಖಾನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ನಟ-ನಟಿಯರು ಅಂತಿಮವಾಗಿಲ್ಲ

ನಟ-ನಟಿಯರು ಅಂತಿಮವಾಗಿಲ್ಲ

ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಆದರೆ ಸಿನಿಮಾದ ಚಿತ್ರೀಕರಣವು ಸೆಪ್ಟೆಂಬರ್‌ನಲ್ಲಿ ಕೊಡಗು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾರಂಭವಾಗಲಿದೆ ಎಂದು ನಿರ್ದೇಶಕ ಸಾದ್ ಖಾನ್ ಹೇಳಿದ್ದಾರೆ.

ಲಹರಿ ಮ್ಯೂಸಿಕ್‌ನ ಚಂದ್ರು ಮನೋಹರ್ ಜೊತೆಗಿದ್ದಾರೆ

ಲಹರಿ ಮ್ಯೂಸಿಕ್‌ನ ಚಂದ್ರು ಮನೋಹರ್ ಜೊತೆಗಿದ್ದಾರೆ

ನಿಖಿಲ್ ಕುಮಾರಸ್ವಾಮಿ ಅವರು ಒಬ್ಬರೇ ಈ ಸಿನಿಮಾಕ್ಕೆ ಹಣ ತೊಡಗಿಸುತ್ತಿಲ್ಲ, ನಿಖಿಲ್ ಜೊತೆಗೆ ಲಹರಿ ಮ್ಯೂಸಿಕ್‌ನ ಚಂದ್ರು ಮನೋಹರ್ ಸಹ ಕೈಜೋಡಿಸಿದ್ದಾರೆ. ವಿಶೇಷವೆಂದರೆ ಚಂದ್ರು ಮನೋಹರ್ ಅವರು ನಿಖಿಲ್ ಅವರ ಮತ್ತೊಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅದು ಕ್ರೀಡೆಯೊಂದರ ಬಗೆಗಿನ ಕತೆಯಾಗಿದೆ.

More from Filmibeat

English summary
Actor Nikhil Kumaraswamy producing a romantic comedy Kannada movie. Its his first movie as a producer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X