ಪುನೀತ್ ಜೊತೆ ಕಳೆದ ಕ್ಷಣ ನೆನೆದು ನಿಖಿಲ್ ಭಾವುಕ

By ರಾಮನಗರ ಪ್ರತಿನಿಧಿ

ರಾಮನಗರದ ಸುಗ್ಗನಹಳ್ಳಿಯಲ್ಲಿ ನಡೆದ ಪುನೀತ್ ರಾಜ್‌ಕುಮಾರ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಈ ವೇಳೆ ಸ್ಯಾಂಡಲ್ ವುಡ್ ಯುವರಾಜ ಯುವರತ್ನ ಅಪ್ಪುವಿನ ಅಕಾಲಿಕ ಸಾವನ್ನು ನೆನೆದು ಭಾವುಕರಾಗಿದ್ದಲ್ಲದೆ ದೊಡ್ಡಮನೆ ಕುಟುಂಬದೊಂದಿಗಿನ ತಮ್ಮ ಬಾಂಧವ್ಯವನ್ನು ಹಂಚಿಕೊಂಡರು.

ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಇಡೀ ರಾಜ್ಯವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಇನ್ನು ಅಪ್ಪುವಿನ ನಿಧನದ ಶೋಕದಿಂದ ಹೊರಬರದ ಜನ ಹಲವೆಡೆ ರಕ್ತದಾನ, ನೇತ್ರದಾನ, ಅನ್ನಸಂತರ್ಪಣೆ ಏರ್ಪಡಿಸುತ್ತಿದ್ದಾರೆ. ಅದರಂತೆ ಇಂದು ರಾಮನಗರದ ಸುಗ್ಗನಹಳ್ಳಿ ಗ್ರಾಮದಲ್ಲಿ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಗ್ರಾಮಸ್ಥರು ಹಾಗೂ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅನ್ನಸಂತರ್ಪಣೆ ಮಾಡುವ ಮೂಲಕ ಪುನೀತ್ ಅವರಿಗೆ ನಮನ ಸಲ್ಲಿಸಿದರು.

Nikhil Kumaraswamy Remembers His Memories With Puneeth Rajkumar In Ramanagara

ಈ ವೇಳೆ ಮಾತನಾಡಿದ ನಿಖಿಲ್, ''ಪುನೀತ್ ನಿಧನವನ್ನು ತಾವು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ತಮ್ಮ ಕುಟುಂಬದ ಸದಸ್ಯನನ್ನೇ ಕಳೆದುಕೊಂಡಂತೆ ಭಾಸವಾಗುತ್ತಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ನ.16ನೇ ತಾರೀಖು ನಡೆಯುವ ನುಡಿನಮನ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗುತ್ತಿದ್ದು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ'' ಎಂದು ಹೇಳಿದರು.

ತಮ್ಮ ಮತ್ತು ಪುನೀತ್ ನಡುವುನ ಬಾಂಧವ್ಯ ಸ್ಮರಿಸಿಕೊಂಡ ನಿಖಿಲ್ ಕುಮಾರಸ್ವಾಮಿ ತಮ್ಮ ಮೊದಲ ಚಿತ್ರ 'ಜಾಗ್ವಾರ್' ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದ್ದ ವೇಳೆ ಚಿತ್ರರಂಗದ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಆದರೆ ಕಾರಣಾಂತರಗಳಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದ ಪುನೀತ್ ರವರು ಹೂಗುಚ್ಛ ಕಳುಹಿಸಿ ಶುಭ ಕೋರಿದ್ದರು ಎಂದು ನೆನಪಿಸಿಕೊಂಡರು.

''ಇತ್ತೀಚಿನ ದಿನಗಳಲ್ಲಿ ರಾಘಣ್ಣ ಹಾಗೂ ಅಪ್ಪು ಕುಟುಂಬದ ಜತೆ ತಮ್ಮ ಒಡನಾಟ ಬೆಳೆದಿತ್ತು. ಅವರ ಮನೆಗೆ ಊಟಕ್ಕಾಗಿ ಕರೆದ್ದ ಸಂದರ್ಭದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಸಮಯ ಕಳೆಯುವ ಜತೆಗೆ ಮುಂಬರುವ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಮಗೆ ಯಾವ ರೀತಿಯ ಪಾತ್ರಗಳು ಸೂಟ್ ಆಗುತ್ತವೆ ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದ್ದರು'' ಎಂದರು.

Nikhil Kumaraswamy Remembers His Memories With Puneeth Rajkumar In Ramanagara

''ದೊಡ್ಡಮನೆಯವರ ಒಳ್ಳೆಯ ನಡವಳಿಕೆ ಇಡೀ ಜಗತ್ತಿಗೆ ಗೊತ್ತು. ಮೊನ್ನೆ ಅರಮನೆ ಮೈದಾನದಲ್ಲಿ ನಡೆದ ಊಟದ ವ್ಯವಸ್ಥೆಯನ್ನು ಇಲ್ಲಿವರೆಗೆ ದೇಶದಲ್ಲಿ ಯಾರೂ ಕೂಡ ಅಂತಹ ಕಾರ್ಯಕ್ರಮವನ್ನು ಮಾಡಲು ಸಾಧ್ಯವಾಗಿಲ್ಲ. ದೊಡ್ಡಗುಣ ಇರುವ ಕುಟುಂಬಕ್ಕೆ ಇಂತಹ ಆಘಾತ ಆಗಬಾರದಿತ್ತು. ಎರಡೂವರೆ ತಿಂಗಳ ಹಿಂದೆ ನನ್ನನ್ನು ಪ್ರೀತಿಯಿಂದ ಕಂಡಿದ್ದ ಪುನೀತ್ ಇಂದು ನಮ್ಮೊಂದಿಗೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ'' ಎಂದು ನಿಖಿಲ್ ಭಾವುಕರಾದರು.

ಒಟ್ಟಾರೆ ಅಭಿಮಾನಿ ದೇವರುಗಳ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ನಮ್ಮನ್ನಗಲಿ ಎರಡು ವಾರಗಳೇ ಕಳೆದರು ಅಭಿಮಾನಿಗಳಿಗೆ ಅವರ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಕ್ತದಾನ, ನೇತ್ರದಾನ, ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ತಮ್ಮ ನೆಚ್ಚನ ನಟನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದರೆ ಯುವರಾಜನ ನೆನೆದ ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರು ಭಾವುಕರಾಗಿ ಪುಷ್ಪನಮನ ಸಲ್ಲಿಸಿದರು.

More from Filmibeat

English summary
Nikhil Kumaraswamy remembers his memories with Puneeth Rajkumar in Ramanagara. He inaugurated blood donation camp organized in memory of Appu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X