ನಿಖಿಲ್-ರೇವತಿ ಮದುವೆ ಬಗ್ಗೆ ನಿರ್ಧಾರ ಬದಲಿಸಿದ ಕುಮಾರಸ್ವಾಮಿ?

ನಿಖಿಲ್ ಕುಮಾರಸ್ವಾಮಿ-ರೇವತಿ ಮದುವೆ ರಾಜ್ಯದ ಅದ್ಧೂರಿ ಮದುವೆಗಳಲ್ಲಿ ಪ್ರಮುಖ ಮದುವೆ ಆಗಲಿದೆ ಎಂದೇ ಎಣಿಸಲಾಗಿತ್ತು. ಆದರೆ ಕುಮಾರಸ್ವಾಮಿ ಅವರು ತಮ್ಮ ನಿರ್ಧಾರ ಬದಲಿಸಿದ್ದಾರೆ ಎನ್ನಲಾಗಿದೆ.

ಹೌದು, ಆರತಕ್ಷತೆಯನ್ನೇ ಬಹು ಅದ್ಧೂರಿಯಾಗಿ ಮಾಡಿದ್ದ ಕುಮಾರಸ್ವಾಮಿ, ಪುತ್ರನ ಮದುವೆಯನ್ನು ರಾಮನಗರದಲ್ಲಿ ಭಾರಿ ಅದ್ಧೂರಿಯಾಗಿ ಮಾಡಲು ಸಕಲ ಸಿದ್ಧತೆಯನ್ನೂ ಮಾಡುವ ಯೋಜನೆ ತಯಾರಿಸಿದ್ದರು. ಆದರೆ ಅದಕ್ಕೆ ಕೊರೊನಾ ಅಡ್ಡಿ ಪಡಿಸಿದೆ.

ಹೌದು, ಕೊರೊನಾ ಕಾರಣದಿಂದಾಗಿ ರಾಮನಗರದಲ್ಲಿ ಭಾರಿ ಅದ್ಧೂರಿಯಾಗಿ ನಡೆಯಬೇಕಿದ್ದ ನಿಖಿಲ್ ಕುಮಾರಸ್ವಾಮಿ- ರೇವತಿ ಮದುವೆ ಬೆಂಗಳೂರಿಗೆ ಸ್ಥಳಾಂತರವಾಗಿದೆ. ಆದರೆ ಈಗ ಮದುವೆ ಬಗ್ಗೆ ಮತ್ತೊಂದು ಸುದ್ದಿ ಹೊರಬಿದ್ದಿದೆ.

ನಿರ್ಧಾರ ಬದಲಿಸಿದ ಕುಮಾರಸ್ವಾಮಿ?

ನಿರ್ಧಾರ ಬದಲಿಸಿದ ಕುಮಾರಸ್ವಾಮಿ?

ನಿಖಿಲ್ ಕುಮಾರಸ್ವಾಮಿ ಮದುವೆಯನ್ನು ಭಾರಿ ಅದ್ಧೂರಿಯಾಗಿ ಮಾಡಲು ಕುಮಾರಸ್ವಾಮಿ ಇಚ್ಛಿಸಿದ್ದರು ಎನ್ನಲಾಗಿತ್ತು. ಆದರೆ ಈಗ ಅವರು ನಿರ್ಧಾರ ಬದಲಿಸಿ ಸರಳ ಮದುವೆಯ ಮುಖ ಮಾಡಿದ್ದಾರೆ.

ಸರಳವಾಗಿ ಮದುವೆಯಾಗಲಿದ್ದಾರೆ ನಿಖಿಲ್-ರೇವತಿ?

ಸರಳವಾಗಿ ಮದುವೆಯಾಗಲಿದ್ದಾರೆ ನಿಖಿಲ್-ರೇವತಿ?

ಹೌದು, ನಿಖಿಲ್-ರೇವತಿ ಮದುವೆಯನ್ನು ಸರಳವಾಗಿ ಮಾಡುವುದಾಗಿ ಕುಮಾರಸ್ವಾಮಿ ನಿರ್ಧಾರ ಮಾಡಿದ್ದು, ಮನೆ ದೇವಸ್ಥಾನದಲ್ಲಿ ಕುಟುಂಬ ಸದಸ್ಯರ, ಹಿರಿಯರ ಹಾಜರಿಯಲ್ಲಿ ಸರಳವಾಗಿ ನಿಖಿಲ್ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ.

60 ಎಕರೆಯಲ್ಲಿ ಮದುವೆ ಮಾಡಲು ನಿಶ್ಚಯಿಸಲಾಗಿತ್ತು

60 ಎಕರೆಯಲ್ಲಿ ಮದುವೆ ಮಾಡಲು ನಿಶ್ಚಯಿಸಲಾಗಿತ್ತು

ರಾಮನಗರದ ಸುಮಾರು 60 ಎಕರೆ ಜಮೀನಿನಲ್ಲಿ ಈಗಾಗಲೇ ಸಿದ್ಧತೆ ನಡೆದಿತ್ತು. ಜಾನಪದ ಲೋಕದ ಜಮೀನಿನಲ್ಲಿ ಈಗಾಗಲೇ 6 ಕೊಳವೆಬಾವಿ ಕೊರೆಸಲಾಗಿತ್ತು ಆದರೆ ಕೊರೊನಾ ಭೀತಿಯಿಂದ ಸ್ಥಳ ಬದಲಾವಣೆ ಮಾಡಲಾಗಿತ್ತು, ಆದರೆ ಕೊರೊನಾ ಭೀತಿ ಕಡಿಮೆಯಾಗದ ಕಾರಣ ಸರಳ ಮದುವೆಗೆ ಮೊರೆ ಹೋಗುವ ಸಾಧ್ಯತೆ ದಟ್ಟವಾಗಿದೆ.

ಏಪ್ರಿಲ್ 17 ಕ್ಕೆ ನಿಶ್ಚಯವಾಗಿರುವ ಮದುವೆ

ಏಪ್ರಿಲ್ 17 ಕ್ಕೆ ನಿಶ್ಚಯವಾಗಿರುವ ಮದುವೆ

ಏಪ್ರಿಲ್ 17 ರಂದು ರಾಮನಗರದಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಈಗಾಲಗೇ 80 ಲಕ್ಷ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಎಲ್ಲವೂ ತಲೆಕೆಳಗಾಗಿದೆ.

ನಿದಗಿಯಾದ ದಿನವೇ ಮದುವೆ

ನಿದಗಿಯಾದ ದಿನವೇ ಮದುವೆ

ಆದರೆ ನಿಗದಿಯಾಗಿರುವ ದಿನದಂದೇ ಮದುವೆ ಮಾಡಲು ಕುಟುಂಬ ನಿಶ್ಚಯಿಸಿದ್ದು, ಅದ್ಧೂರಿಯಾಗಿಲ್ಲದಿದ್ದರೂ ಸರಳವಾಗಿ ಆದರೂ ಮದುವೆ ಮುಗಿಸುವ ಯೋಜನೆ ಮಾಡಿಕೊಂಡಿದ್ದಾರೆ. ಕೊರೊನಾ ಭೀತಿ ಮುಗಿದ ಮೇಲೆ ಆರತಕ್ಷತೆಯನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ.

More from Filmibeat

English summary
Nikhil Kumaraswamy and Revathi's marriage expected to be one of Karnataka's richer marriage but due to corona scare it will be a simple marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X