ಆರಂಭವಾಯ್ತು 'ನಿಖಿಲ್-ರೇವತಿ ಕಲ್ಯಾಣ': ಮುಹೂರ್ತ ಯಾವ ಸಮಯಕ್ಕೆ?

ನಿಖಿಲ್ ಕುಮಾರಸ್ವಾಮಿ-ರೇವತಿ ವಿವಾಹ ಶಾಸ್ತ್ರಗಳು ಆರಂಭವಾಗಿವೆ. ನಿಖಿಲ್ ಕುಮಾರಸ್ವಾಮಿ ಕೆಲವೇ ಗಂಟೆಗಳಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ.

Recommended Video

Nikhil Kumaraswamy marriage footage midst Corona Lockdown | Nikhil Kumarswamy Weds Revathi

ರಾಮನಗರದ ಕೇತಿಗಾನಹಳ್ಳಿಯ ಫಾರಂ ನಲ್ಲಿ ನಿಖಿಲ್ ಕುಮಾರಸ್ವಾಮಿ-ರೇವತಿ ಕಲ್ಯಾಣ ಆರಂಭವಾಗಿದೆ. ಶಾಸ್ತ್ರೋಕ್ತವಾಗಿ ಮದುವೆ ನಡೆಯಲಿದ್ದು, ಕೆಲವೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಿಖಿಲ್, ರೇವತಿಗೆ ತಾಳಿ ಕಟ್ಟಲಿದ್ದಾರೆ.

ಈಗಾಗಲೇ ಅರಿಶಿನ ಶಾಸ್ತ್ರ ಪ್ರಾರಂಭವಾಗಿದೆ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ದಂಪತಿ ಪುತ್ರ ನಿಖಿಲ್‌ ಗೆ ಅರಿಶಿನ ನೀರು ಎರೆದಿದ್ದಾರೆ. ಈ ಚಿತ್ರ ಈಗಾಗಲೇ ವೈರಲ್ ಆಗಿದೆ.

ಮುದ್ದಾಗಿ ಕಾಣುತ್ತಿರುವ ಮದುಮಗಳು

ಮುದ್ದಾಗಿ ಕಾಣುತ್ತಿರುವ ಮದುಮಗಳು

ಮದುಮಕ್ಕಳಿಬ್ಬರಿಗೂ ಅರಿಶಿಣ ಶಾಸ್ತ್ರ ಆರಂಭವಾಗಿದ್ದು, ರೇವತಿ ತಿಳಿ ಬಿಳಿ ಬಣ್ಣದ ಸೀರೆ ಉಟ್ಟು, ಅರಿಶಿನ ಹಚ್ಚಿಸಿಕೊಳ್ಳುತ್ತಿರುವ ಚಿತ್ರ ಮುದ್ದಾಗಿದೆ. ಮುತ್ತಿನ ಆಭರಣಗಳು ನವಮದುಮಗಳ ಕಳೆಯನ್ನು ಇನ್ನಷ್ಟು ಹೆಚ್ಚಿಸಿವೆ.

ಸ್ವಗೃಹದ ಮುಂದೆ ವೈಭವದ ಚಪ್ಪರ

ಸ್ವಗೃಹದ ಮುಂದೆ ವೈಭವದ ಚಪ್ಪರ

ಕುಮಾರಸ್ವಾಮಿ ಅವರ ಸ್ವಗೃಹದ ಮುಂದೆ ಭರ್ಜರಿಯಾಗಿ ಚಪ್ಪರ ಹಾಕಲಾಗಿದೆ. ಇಂದು ಚಪ್ಪರ ಶಾಸ್ತ್ರ ಸಹ ಇರುವ ಕಾರಣ, ಚಪ್ಪರಕ್ಕೆ ಪೂಜೆಯನ್ನು ನಿಖಿಲ್ ಕುಮಾರಸ್ವಾಮಿ ನೆರವೇರಿಸಿದ್ದಾರೆ.

ವರನ ಸ್ವಗೃಹದಲ್ಲಿ ಬಹುತೇಕ ಶಾಸ್ತ್ರ

ವರನ ಸ್ವಗೃಹದಲ್ಲಿ ಬಹುತೇಕ ಶಾಸ್ತ್ರ

ಅರಿಶಿನ ಶಾಸ್ತ್ರ, ದೇವರ ಪೂಜೆ ಇನ್ನಿತರ ಕಾರ್ಯಗಳು ವರನ ಸ್ವಗೃಹದಲ್ಲಿಯೇ ನಡೆಯುತ್ತಿದೆ. ಕೇತಿಗಾನಹಳ್ಳಿಯಲ್ಲಿ ಮಾಂಗಲ್ಯ ಧಾರಣೆ ಮಾತ್ರವೇ ನಡೆಯಲಿದೆ.

ನಾಳೆ ಬೆಳಿಗ್ಗೆ ಮಾಂಗಲ್ಯಧಾರಣೆ

ನಾಳೆ ಬೆಳಿಗ್ಗೆ ಮಾಂಗಲ್ಯಧಾರಣೆ

ಬೆಳಿಗ್ಗೆ 7:30 ರ ಹೊತ್ತಿಗೆ ಮದುಮಕ್ಕಳು ಮತ್ತು ಇಬ್ಬರ ಕಡೆಯವರು ಕೇತಿಗಾನಹಳ್ಳಿಗೆ ತೆರಳಲಿದ್ದಾರೆ. ಅಲ್ಲಿ 9:30 ರ ಸುಮಾರಿಗೆ ಮಾಂಗಲ್ಯಧಾರಣೆ ನಡೆಯಲಿದೆ. ನಂತರ ಆಗಮಿಸಿದ ಅತಿಥಿಗಳಿಗೆ ಊಟದ ವ್ಯವಸ್ಥೆ ಆಯೋಜಿಸಲಾಗಿದೆ. 12 ಗಂಟೆ ಹೊತ್ತಿಗೆ ಅಲ್ಲಿಂದ ಎಲ್ಲರೂ ವರನ ಮನೆಗೆ ವಾಪಸ್ಸಾಗಲಿದ್ದಾರೆ. ನಾಳೆಯೇ ಸೊಸೆಯನ್ನು ಮನೆ ತುಂಬಿಸಿಕೊಳ್ಳಲಿದ್ದಾರೆ ಕುಮಾರಸ್ವಾಮಿ ದಂಪತಿ.

More from Filmibeat

English summary
Nikhil Kumaraswamy and Revathi's marriage rituals started today. marriage function will happen tomorrow in Ramanagar's Kethiganahalli.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X