ತೆಲುಗು ಖ್ಯಾತ ನಿರ್ದೇಶಕನಿಂದ ನಿಖಿಲ್ ಕುಮಾರಸ್ವಾಮಿಯ ನಾಲ್ಕನೇ ಸಿನಿಮಾ

ಲಾಕ್‌ಡೌನ್ ಸಡಿಲಿಕೆ ನಂತರ ಸಕ್ರಿಯ ರಾಜಕೀಯದಲ್ಲಿ ನಿಧಾನಕ್ಕೆ ತೊಡಗಿಕೊಳ್ಳುತ್ತಿರುವ ನಿಖಿಲ್ ಕುಮಾರಸ್ವಾಮಿ ಸಿನಿಮಾ ಕಡೆಯೂ ಗಮನ ಹರಿಸಲು ಪ್ರಾರಂಭಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದು, ಅದರ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಸಿನಿಮಾಕ್ಕೆ ತೆಲುಗಿನ ಖ್ಯಾತ ಸಿನಿಮಾ ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದಾರೆ.

ಸಿನಿಮಾಕ್ಕೆ ಪ್ರಸ್ತುತ 'ಎನ್‌ಕೆ04' ಎಂದು ಹೆಸರಿಡಲಾಗಿದೆ. ಆದರೆ ಇನ್ನು ಐದು ದಿನದಲ್ಲಿ ಸೆಪ್ಟೆಂಬರ್ 11 ರಂದು ಸಿನಿಮಾದ ಹೆಸರು ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಆಗಲಿದೆ.

ಆಕ್ಷನ್ ಸಿನಿಮಾ ಆಗಿರಲಿದೆ

ಆಕ್ಷನ್ ಸಿನಿಮಾ ಆಗಿರಲಿದೆ

ಚಿತ್ರ ಬಿಡುಗಡೆ ಮಾಡಿರುವ ಆರಂಭಿಕ ಪೋಸ್ಟರ್‌ನಲ್ಲಿ ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಆಗಲಿರುವ ಸುಳಿವು ನೀಡಿದೆ. ಸೀತಾರಾಮಕಲ್ಯಾಣದಂತಹಾ ಕೌಟುಂಬಿಕ ಆಕ್ಷನ್ ಸಿನಿಮಾ ಮಾಡಿದ್ದ ನಿಖಿಲ್, ಈಗ ಪೂರ್ಣ ಆಕ್ಷನ್ ಸಿನಿಮಾದತ್ತ ಹೊರಳಿರುವ ಸಂಭವ ಇದೆ.

ತೆಲುಗಿನಲ್ಲಿ ಹಲವು ಹಿಟ್ ಸಿನಿಮಾ ನೀಡಿದ್ದಾರೆ

ತೆಲುಗಿನಲ್ಲಿ ಹಲವು ಹಿಟ್ ಸಿನಿಮಾ ನೀಡಿದ್ದಾರೆ

ತೆಲುಗಿನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ವಿಜಯ್ ಕುಮಾರ್ ಕೊಂಡ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ವಿಜಯ್ ಕುಮಾರ್ ಕೊಂಡ ಅವರಿಗೆ ಇದು ಮೊದಲ ಕನ್ನಡ ಸಿನಿಮಾ ಆಗಿರಲಿದೆ.

ಪ್ರೇಮಕಥಾ ಸಿನಿಮಾಗಳಿಗೆ ಖ್ಯಾತರು ಕೊಂಡ

ಪ್ರೇಮಕಥಾ ಸಿನಿಮಾಗಳಿಗೆ ಖ್ಯಾತರು ಕೊಂಡ

ವಿಜಯ್ ಕುಮಾರ್ ಕೊಂಡ ಪ್ರೇಮಕತೆಗಳಿಗೆ ಹೆಚ್ಚು ಖ್ಯಾತರು. 'ಗುಂಡೆ ಜಾರಿ ಗಲ್ಲಂಥೈಯಿಂದೇ', 'ಒಕ ಲೈಲಾ ಕೋಸಂ', ಓಯ್ ಬುಜ್ಜಿಗಾ, ಹಾರ್ಟ್ ಅಟ್ಯಾಕ್ 2, ಮ್ಯಾಜಿಕ್ ಲವ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

Recommended Video

25 ಸಲ ಹುಚ್ಚ ಸಿನಿಮಾನ ಥಿಯೇಟರ್ ನಲ್ಲಿ ನೋಡಿದ್ದೀನಿ | Kirik Keerthi | Filmibeat Kannada
ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ

ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ

ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ, ತೋಟ ಮಾಡಲು ಪ್ರಾರಂಭಿಸಿದ್ದಾರೆ. ಇದರ ಜೊತೆಗೆ ಮನೆಯೊಂದನ್ನು ನಿರ್ಮಿಸುತ್ತಿದ್ದಾರೆ. ರಾಜಕೀಯ ಅದರ ಜೊತೆಗೆ ಇದೀಗ ಪುನಃ ಸಿನಿಮಾ ಚಿತ್ರೀಕರಣದಲ್ಲಿ ಕೆಲವೇ ದಿನಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

More from Filmibeat

English summary
Nikhil Kumaraswamy's 4th movie shooting will start soon. Movie's name will be announce in few days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X