ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದಂದು 'ರೈಡರ್' ತಂಡ ನೀಡಲಿದೆ ಉಡುಗೊರೆ

ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬ ಕೆಲವೇ ದಿನಗಳಿವೆ. ಜನವರಿ 22 ಕ್ಕೆ ನಿಖಿಲ್‌ ತಮ್ಮ 31 ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ರಾಜಕಾರಣ ಹಾಗೂ ಸಿನಿಮಾ ಎರಡೂ ದೋಣಿಯ ಮೇಲೆ ಕಾಲಿಟ್ಟಿರುವ ನಿಖಿಲ್, ಎರಡನ್ನೂ ಸಮತೋಲನ ಮಾಡಿಕೊಂಡು ಹೋಗುತ್ತಿದ್ದಾರೆ. ನಿಖಿಲ್ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ನಿಧಾನಕ್ಕೆ ಚಿತ್ರೀಕರಣ ಮುಗಿಸುತ್ತಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದಂದು ನಿಖಿಲ್ ಅಭಿನಯಿಸುತ್ತಿರುವ 'ರೈಡರ್' ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.

Nikhil Kumaraswamys Raider Movie Trailer Will Release On January 22

ರೈಡರ್ ಸಿನಿಮಾವನ್ನು ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿದ್ದರು, ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿನಿಮಾ ಶೇ 50% ರಷ್ಟು ಚಿತ್ರೀಕರಣ ಮುಗಿಸಿದೆ.

ನಿಖಿಲ್ ಕುಮಾರಸ್ವಾಮಿ ಸಹ ಈ ಬಗ್ಗೆ ಪೋಸ್ಟ್ ಮಾಡಿದ್ದು, 'ಒಂದಷ್ಟು ಹೊಸ ನಿರೀಕ್ಷೆಗಳೊಂದಿಗೆ ನನ್ನ ಮುಂದಿನ ಸಿನಿಮಾ "ರೈಡರ್"ನ ಟೀಸರ್ ಇದೇ ತಿಂಗಳ 22.01.2021 ರಂದು ಬಿಡುಗಡೆಯಾಗಲಿದೆ. ಸಿನಿಮಾಭಿಮಾನಿಗಳು ಹಾಗೂ ಕನ್ನಡ ಚಿತ್ರಪ್ರೇಮಿಗಳಿಗೆ ಟೀಸರ್ ಇಷ್ಟವಾಗಬಹುದು ಎಂಬ ಭರವಸೆ ನನ್ನದು. ಎಂದಿನಂತೆ ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ಹಾರೈಕೆಗಳಿರಲಿ' ಎಂದು ಮನವಿ ಮಾಡಿದ್ದಾರೆ.

ರೈಡರ್ ಸಿನಿಮಾ ನಿಜಜೀವನ ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದ್ದು, ಸಿನಿಮಾದಲ್ಲಿ ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ದತ್ತಣ್ಣ ಇನ್ನೂ ಹಲವರು ನಟಿಸುತ್ತಿದ್ದಾರೆ.

ಕ್ರೀಡೆ ಆಧರಿತ ಸಿನಿಮಾ ಒಂದರಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ದಿನಕರ್ ತೂಗುದೀಪ್ ಅವರು ನಿಖಿಲ್ ಕುಮಾರಸ್ವಾಮಿ ಸಿನಿಮಾ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ದಿನಕರ್, 'ನಾನು ನನ್ನ ಹೊಸ ಚಿತ್ರಕ್ಕೆ ಸ್ಕ್ರಿಪ್ಟ್ ತಯಾರಿಯಲ್ಲಿದ್ದೇನೆ. ಇದಕ್ಕೆ ಕಲಾವಿದರ ಆಯ್ಕೆ ಇನ್ನು ಅಂತಿಮವಾಗಿಲ್ಲ. ಆದರೆ ಕೆಲವು ಮೀಡಿಯಾ ವೆಬ್ ಸೈಟ್ ಗಳು ಹಾಗೂ ಚಾನೆಲ್ ಗಳು ಇದನ್ನು ತಿಳಿದು ಕೊಳ್ಳದೆ ತಮಗೆ ಇಷ್ಟ ಬಂದವರ ಹೆಸರನ್ನು ಇಲ್ಲಿ ಸೇರಿಸಿ ಸುಳ್ಳು ಸುದ್ದಿಯನ್ನು ಹಬ್ಬಿಸುವುದು, ಅವರಿಗೆ ಶೋಭೆ ತರುವುದಿಲ್ಲ. ಯಾವುದೇ ವಿಷಯವಾಗಲಿ, ಅದಕ್ಕೆ ಸಂಬಂಧಪಟ್ಟವರನ್ನು ಸಂಪರ್ಕಿಸದೇ ಪ್ರಕಟಿಸುವುದು ಉಚಿತವಲ್ಲ. ಚಿತ್ರದ ಎಲ್ಲ ಪ್ರಿ-ಪ್ರೊಡಕ್ಷನ್ ಕೆಲಸಗಳು ಮುಗಿದ ಮೇಲೆ ನಾನೇ ಅಧಿಕೃತವಾಗಿ ಹೇಳಿಕೆ ನೀಡುತ್ತೇನೆ' ಎಂದು ಹೇಳಿದ್ದರು.

More from Filmibeat

English summary
Nikhil Kumaraswamy's Raider movie trailer will be releasing on January 22. That day is Nikhil's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X