ಡಬ್ಬಿಂಗ್ ಮುಗಿಸಿದ 'ರೈಡರ್': ಮನವಿ ಮಾಡಿದ ನಿಖಿಲ್

ನಿಖಿಲ್ ಕುಮಾರಸ್ವಾಮಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ರೈಡರ್' ಸಿನಿಮಾ ಡಬ್ಬಿಂಗ್ ಮುಗಿಸಿದ್ದು ಚಿತ್ರಮಂದಿರಕ್ಕೆ ಬರಲು ಸಕಲ ಸಜ್ಜಾಗಿದೆ.

ಸಿನಿಮಾದ ಡಬ್ಬಿಂಗ್‌ ಮುಗಿದ ಬಗ್ಗೆ ವಿಶೇಷ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದ್ದು, 'ರೈಡರ್' ಸಿನಿಮಾದಲ್ಲಿ ನಟಿಸಿರುವ ಮುಖ್ಯ ಕಲಾವಿದರೆಲ್ಲ ವಿಡಿಯೋದಲ್ಲಿದ್ದಾರೆ. ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಹಲವು ಹಿರಿಯ ನಟರು 'ರೈಡರ್' ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ನಟ ನಿಖಿಲ್ ಕುಮಾರಸ್ವಾಮಿ ಸಹ 'ರೈಡರ್' ಸಿನಿಮಾವನ್ನು ತಪ್ಪದೇ ನೋಡುವಂತೆ ಮನವಿ ಮಾಡಿದ್ದಾರೆ. ಜೊತೆಗೆ 'ರೈಡರ್ ' ಸಿನಿಮಾದಲ್ಲಿನ ಡೈಲಾಗ್ ಒಂದು ಸಹ ವಿಡಿಯೋದಲ್ಲಿದೆ.

''ಇನ್ನೇನು ನಿಮ್ಮ ಮೇಲೆ ಕೈ ಮಾಡಿದ್ರೆ ಸುಮ್ಮನಿರ್ಬೇಕಾ'' ಎಂದು ಕಾಮ್ ಆಗಿ ಆದರೆ ಖಡಕ್‌ ಆಗಿ ಕೇಳುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ. ಡಬ್ಬಿಂಗ್ ಅವಧಿಯ ಈ ಸಣ್ಣ ತುಣಕನ್ನು ವಿಡಿಯೋದಲ್ಲಿ ಚಿತ್ರತಂಡ ಬಿಟ್ಟುಕೊಟ್ಟಿದೆ. ಡಬ್ಬಿಂಗ್ ಮುಗಿಸಿರುವ ನಟ ನಿಖಿಲ್ ಕುಮಾರಸ್ವಾಮಿ, ''ನಮ್ಮ 'ರೈಡರ್' ಸಿನಿಮಾದ ಡಬ್ಬಿಂಗ್ ಇಂದು ಮುಗಿದಿದೆ. 'ರೈಡರ್' ಸಿನಿಮಾ ಶೀಘ್ರದಲ್ಲಿ ನಿಮ್ಮೆಲ್ಲರ ಮುಂದೆ ಬರಲಿದೆ ದಯವಿಟ್ಟು ನೀವೆಲ್ಲರೂ ಪ್ರೋತ್ಸಾಹ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ'' ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.

ಶುಭ ಕೋರಿದ ಹಿರಿಯ ನಟರು

ಶುಭ ಕೋರಿದ ಹಿರಿಯ ನಟರು

ಸಿನಿಮಾಕ್ಕಾಗಿ ನಟ ಅಚ್ಯುತ್ ಕುಮಾರ್, ಹಿರಿಯ ನಟ ದತ್ತಣ್ಣ, ಶೋಭರಾಜ್, ರಾಜೇಶ್ ನಟರಂಗ, ಚಿಕ್ಕಣ್ಣ, ನಾಯಕಿ ಅನುಷಾ ರೈ, ಕಾಶ್ಮೀರಾ ಪರದೇಶಿ ಇನ್ನೂ ಕೆಲವು ನಟರು ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಶೋಭರಾಜ್ ಅಂತೂ, 'ಸಿನಿಮಾ ಬೈಕ್ ರೀತಿಯಲ್ಲಿ ವೇಗವಾಗಿ ಸಾಗುತ್ತದೆ' ಎಂದು ಹೊಗಳಿದ್ದಾರೆ. ರಾಜೇಶ್ ನಟರಂಗ, ''ನನಗೆ ಕಕತೆ ಬಹಳ ಇಷ್ಟವಾಯಿತು ಎಂದಿದ್ದಾರೆ. ಹಿರಿಯ ನಟ ದತ್ತಣ್ಣ ಮಾತನಾಡಿ, ''ಚಿತ್ರದಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಶುಭವಾಗಲಿ'' ಎಂದು ಹಾರೈಸಿದ್ದಾರೆ.

ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ

ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ

'ರೈಡರ್' ಸಿನಿಮಾವನ್ನು ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶನ ಮಾಡಿದ್ದಾರೆ. ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾ, 'ಗುಂಡೆಜಾರಿ ಗಲ್ಲಂತೈಯಿಂದೆ', 'ಒಕ ಲೈಲಾ ಕೋಸಂ' ಹಾಗೂ ಇನ್ನೂ ಕೆಲವು ಸಿನಿಮಾಗಳನ್ನು ವಿಜಯ್ ಕುಮಾರ್ ಕೊಂಡ ನಿರ್ದೇಶಿಸಿದ್ದದಾರೆ. ಕನ್ನಡದಲ್ಲಿ ಇದು ಅವರ ಮೊದಲ ಸಿನಿಮಾ, 'ರೈಡರ್' ಸಿನಿಮಾವು ಆಕ್ಷನ್ ಹಾಗೂ ಪ್ರೇಮ ಕತೆಯನ್ನು ಹೊಂದಿದ್ದು ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ಬಿಡುಗಡೆ ಆಗಲಿದೆ. ವಿಜಯ್ ಕುಮಾರ್ ಕೊಂಡ ಕುರಿತಾಗಿಯೂ 'ರೈಡರ್' ಸಿನಿಮಾದ ನಟರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಿಖಿಲ್ ನಟಿಸುತ್ತಿರುವ ನಾಲ್ಕನೇ ಸಿನಿಮಾ

ನಿಖಿಲ್ ನಟಿಸುತ್ತಿರುವ ನಾಲ್ಕನೇ ಸಿನಿಮಾ

'ಜಾಗ್ವಾರ್', 'ಕುರುಕ್ಷೇತ್ರ', 'ಸೀತಾರಾಮ ಕಲ್ಯಾಣ' ಸಿನಿಮಾಗಳ ಬಳಿಕ ನಿಖಿಲ್ ಕುಮಾರಸ್ವಾಮಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ರಗಡ್ ಲುಕ್‌ನಲ್ಲಿ ನಿಖಿಲ್ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಿಖಿಲ್‌ರದ್ದು ಕಾಲೇಜು ಯುವಕನ ಪಾತ್ರ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಂದ್ಯಾಲ ರವಿ ಚಿತ್ರಕತೆ ಬರೆದಿದ್ದಾರೆ. ಡಬ್ಬಿಂಗ್ ಮುಗಿದ ಬಳಿಕ ಡಿಟಿಎಸ್ ಮಿಕ್ಸಿಂಗ್ ಇನ್ನಿತರೆ ಕೆಲಸಗಳನ್ನು ಮುಗಿಸಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ ಸಿನಿಮಾ. ಈ ಸಿನಿಮಾದ ಬಳಿಕ ನಂದ ಕಿಶೋರ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ನಿಖಿಲ್ ನಟಿಸುತ್ತಿದ್ದು, ಇದೇ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

ತಂದೆಯಾಗುತ್ತಿರುವ ಖುಷಿಯಲ್ಲಿ ನಿಖಿಲ್ ಕುಮಾರಸ್ವಾಮಿ

ತಂದೆಯಾಗುತ್ತಿರುವ ಖುಷಿಯಲ್ಲಿ ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ರೇವತಿ ಅವರೊಟ್ಟಿಗೆ ವಿವಾಹವಾದ ನಿಖಿಲ್ ಇದೀಗ ತಂದೆಯಾಗುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರೇವತಿ ಅವರ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಸಿನಿಮಾ, ರಾಜಕೀಯದ ಜೊತೆಗೆ ಕೃಷಿಯೆಡೆಗೂ ಗಮನ ಹರಿಸಿದ್ದು, ಬಿಡದಿ ಸಮೀಪದ ದೊಡ್ಡ ಫ್ಲ್ಯಾಟ್‌ನಲ್ಲಿ ಕೃಷಿ ಪ್ರಾರಂಭ ಮಾಡಿದ್ದಾರೆ.

More from Filmibeat

English summary
Nikhil Kumaraswamy's Rider movie completes dubbing and will release in theaters soon. Rider is Nikhil Kumaraswamy's fourth movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X