For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್; ಲಡಾಖ್‌ನಲ್ಲಿ 'ರೈಡರ್' ನಿಖಿಲ್ ಕುಮಾರ್

  |

  ನಟ-ರಾಜಕಾರಣಿ ನಿಖಿಲ್ ಕುಮಾರ್ ಸದ್ಯ ಲಡಾಖ್ ನಲ್ಲಿ ಬೀಡುಬಿಟ್ಟಿದ್ದಾರೆ. ಒಂದೆಡೆ ಕೊರೊನಾ ಹೆಚ್ಚಾಗುತ್ತಿದೆ ಇತ್ತ ನಿಖಿಲ್ ಕೂಲ್ ಕೂಲ್ ಲಡಾಖ್ ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ.

  ಅಂದಹಾಗೆ ನಿಖಿಲ್ ಲಡಾಖ್ ಕಡೆ ಮುಖ ಮಾಡಿರುವುದು ತಮ್ಮ ಮುಂದಿನ ಚಿತ್ರದ ಶೂಟಿಂಗ್ ಗಾಗಿ. ನಿಖಿಲ್ ಕುಮಾರ್ ನಟನೆಯ 'ರೈಡರ್' ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಲೇಹ್ ಲಡಾಖ್ ನಲ್ಲಿರುವ ಸುಂದರ ಫೋಟೋಗಳನ್ನು ನಿಖಿಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಕನ್ನಡ ತಪ್ಪಾಗಿ ಬರೆದ ನಿಖಿಲ್ ಕುಮಾರ್: ಕನ್ನಡ ಪಾಠ ಮಾಡಿದ ನೆಟ್ಟಿಗರುಕನ್ನಡ ತಪ್ಪಾಗಿ ಬರೆದ ನಿಖಿಲ್ ಕುಮಾರ್: ಕನ್ನಡ ಪಾಠ ಮಾಡಿದ ನೆಟ್ಟಿಗರು

  ಎಂಜಾಯ್ ಮಾಡಲು ಇದು ಕೆಟ್ಟ ಸ್ಥಳವಲ್ಲ ಎಂದು ಬರೆದುಕೊಂಡು ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಉದ್ಯೋಗ ನಿಮ್ಮ ಜೇಬು ತುಂಬಿಸುತ್ತೆ. ಅಡ್ವೆಂಚರ್ ನಿಮ್ಮ ಆತ್ಮವನ್ನು ತುಂಬುತ್ತದೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

  ಇತ್ತೀಚಿಗೆ ನಿಖಿಲ್ ಶೇರ್ ಮಾಡಿದ್ದ ಪೋಸ್ಟ್ ಟ್ರೋಲ್ ಗೆ ಗುರಿಯಾಗಿತ್ತು. ಕನ್ನಡದ ಪದ ತಪ್ಪಾಗಿ ಬರೆದ ನಿಖಿಲ್ ಗೆ ನೆಟ್ಟಿಗರು ಕನ್ನಡ ಪಾಠಮಾಡಿದ್ದರು. 'ರೈಡರ ಚಿತ್ರ ಚಿತ್ರಿಕರಣ ವೇಳೆ ಲೇ ಲಡಾಕನಲ ಕಂಡು ಬಂದಂತ ಅದ್ಬುತ ಮನಕಲಕುವಾ ದೃಶ್ಯ' ಎಂದು ಬರೆದಿದ್ದರು.

  ಪುನೀತ್ ನಟಿಸುವ ಹೊಸ ಸಿನಿಮಾದಲ್ಲಿ ನೀವು ಕೂಡ ನಟಿಸಬೇಕು ಅಂದ್ರೆ ಹೀಗ್ ಮಾಡಿ | Filmibeat Kannada

  ಕನ್ನಡವನ್ನು ಸರಿಯಾಗಿ ಬಳಸಿ ಎಂದು ಎಚ್ಚರಿಸಿದ್ದಾರೆ. ಜೊತೆಗೆ ವಾಕ್ಯ ಬಳಕೆ ಬಗ್ಗೆಯೂ ಪಾಠ ಮಾಡಿದ್ದಾರೆ. 'ಅದೊಂದು ಸುಂದರವಾದ ಸ್ಥಳ, ಮನಮೋಹಕವಾಗಿದೆ, ಅದ್ಭುತವಾಗಿದೆ ಅಂದ್ರೆ ಸರಿ. ಆದರೆ, ಮನಕಲುಕುವ ದೃಶ್ಯ ಏನಿದೆ' ಎಂದು ಪ್ರಶ್ನಿಸಿದ್ದಾರೆ.

  English summary
  Kannada Actor Nikhil Kumaraswamy shares Rider movie shooting photo at Lehladakh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X