For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಕುಮಾರ್ ಪುತ್ರನ ನಾಮಕರಣ: 'ಅವ್ಯಾನ್' ಹೆಸರಿನ ಅರ್ಥವೇನು ಗೊತ್ತಾ?

  |

  ನಟ ನಿಖಿಲ್ ಕುಮಾರಸ್ವಾಮಿ ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಸದಾ ಬ್ಯುಸಿಯಾಗಿ ಇರುತ್ತಾರೆ. ಇನ್ನು ನಿಖಿಲ್ ತಮ್ಮ ವೈಯಕ್ತಿಕ ವಿಚಾರಗಳಿಗೂ ಹೆಚ್ಚು ಸುದ್ದಿ ಆಗುತ್ತಾರೆ. ನಿಖಿಲ್ ಮತ್ತು ರೇವತಿ ದಂಪತಿಗಳಿಗೆ ಗಂಡು ಮಗು ಜನಿಸಿದೆ. ಮಗು ಹುಟ್ಟಿದಾಗಿನಿಂದಲೂ ಮಗುವಿನ ಮುಖವನ್ನು ಎಲ್ಲೂ ರಿವೀಲ್ ಮಾಡಿರಲಿಲ್ಲ ಕುಟುಂಬಸ್ಥರು.

  ಆದರೆ ಈಗ ಮಗುವಿಗೆ ನಾಮಕರಣ ಮಾಡಲಾಗಿದೆ. ದೇವೆಗೌಡರ ಕುಟುಂಬದಲ್ಲಿ ನಾಮಕರಣ ಕಾರ್ಯಕ್ರಮದ ಸಂತಸ ಮನೆ ಮಾಡಿದೆ. ನಿಖಿಲ್ ಕುಮಾರಸ್ವಾಮಿ ಮಗನಿಗೆ 9 ತಿಂಗಳು ತುಂಬಿದೆ. ಹಾಗಾಗಿ ಮಗುವಿಗೆ ನಾಮಕರಣ ಮಾಡಲಾಗಿದೆ.

  Exclusive: ನಿಖಿಲ್ ಕುಮಾರ್ 'ಯುದುವೀರ' ಸಿನಿಮಾ ಸ್ಥಗಿತ: ನಿರ್ಮಾಣ ಸಂಸ್ಥೆ ಹೇಳಿದ್ದೇನು?Exclusive: ನಿಖಿಲ್ ಕುಮಾರ್ 'ಯುದುವೀರ' ಸಿನಿಮಾ ಸ್ಥಗಿತ: ನಿರ್ಮಾಣ ಸಂಸ್ಥೆ ಹೇಳಿದ್ದೇನು?

  ನಿಖಿಲ್ ಕುಮಾರಸ್ಟಾಮಿ ಮಗ, ಕುಮಾರಸ್ವಾಮಿ ಮೊಮ್ಮಗ, ದೇವೇಗೌಡರ ಮರಿಮೊಮ್ಮಗನಿಗೆ 'ಅವ್ಯನ್ ದೇವ್' ಎಂದು ನಾಮಕರಣ ಮಾಡಲಾಗಿದೆ. ಈ ಕಾರ್ಯಕ್ರಮ ಕುಟುಂಬಸ್ಥರಿಗೆ ಮಾತ್ರ ಸೀಮಿತವಾಗಿತ್ತು. ಹಾಗಾಗಿ ಹೆಚ್ಚು ಜನರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ. ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಾಮಕರಣ ಮಾಡಲಾಗಿದೆ.

  'ಅವ್ಯಾನ್' ಹೆಸರಿನ ಅರ್ಥ ಏನು ಗೊತ್ತಾ?

  ನಿಖಿಲ್ ಕುಮಾರ್ ಮತ್ತು ರೇವತಿ ಪುತ್ರನಿಗೆ ನಾಮಕರಣ ಮಾಡಲಾಗಿದೆ. ಮಗನಿಗೆ ಅವ್ಯಾನ್ ದೇವ್ ಎನ್ನುವ ಹೆಸರು ಇಡಲಾಗಿದೆ. ಆದರೆ ಅವ್ಯಾನ್ ಎನ್ನುವ ಹೆಸರಿನ ಅರ್ಥ ಏನು ಎನ್ನುವುದನ್ನು ಹುಡುತ್ತಾ ಹೋದರೆ. ಅದು ಗಣಪತಿಗೆ ಇರುವ ಮತ್ತೊಂದು ಹೆಸರು. ವಿಘ್ನ ವಿನಾಯಕನಿಗೆ ಅವ್ಯಾನ್ ಎಂದೂ ಕರೆಯಲಾಗುತ್ತದೆ.

  ನಿಖಿಲ್ ಮತ್ತು ರೇವತಿ ಫೊಟೋಗಳು ವೈರಲ್!

  ನಿಖಿಲ್ ಮತ್ತು ರೇವತಿ ಫೊಟೋಗಳು ವೈರಲ್!

  ನಿಖಿಲ್ ಮತ್ತು ರೇವತಿ ಆಗಾಗ ತಮ್ಮ ಮಗುವಿನ ಜೊತೆಗೆ ಇರುವ ಫೋಟೊಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಮಗುವಿನ ಮುಖ ತೋರಿಸಿಲ್ಲ. ನಿಖಿಲ್ ರೇವತಿ ಮದುವೆ, ಸೀಮಂತಾ ಕಾರ್ಯಕ್ರಮ ಸೇರಿದಂತೆ ಎಲ್ಲವೂ ಬಹಳ ಅದ್ಧೂರಿಯಾಗಿ ನೆರವೇರಿದೆ. ಈಗ ಮಗುವಿನ ನಾಮಕರಣವನ್ನೂ ಕೂಡ ಅದ್ದೂರಿಯಾಗಿ ಮಾಡಿದ್ದಾರೆ.

  2021ರಲ್ಲಿ ಮಗು ಜನನ!

  2021ರಲ್ಲಿ ಮಗು ಜನನ!

  2020ರಲ್ಲಿ ಬಿಡದಿಯ ತೋಟದ ಮನೆಯಲ್ಲಿ ನಿಖಿಲ್​ ಮತ್ತು ರೇವತಿಯ ಮದುವೆ ಅದ್ಧೂರಿಯಾಗಿ ನಡೆದಿತ್ತು. 2021ರ ಸೆಪ್ಟೆಂಬರ್​ನಲ್ಲಿ ರೇವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗುವಿನ ನಾಮಕರಣ ಮಾಡಲಾಗಿದೆ. ನಾಮಕರಣ ಸಮಾರಂಭದಲ್ಲಿ ಗೌಡರ ಕುಟುಂಬ ಹಾಗೂ ಕೆಲ ಆಪ್ತರು ಮಾತ್ರ ಭಾಗವಹಿಸಿದ್ದಾರೆ.

  ರೈಡರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಿಖಿಲ್!

  ರೈಡರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಿಖಿಲ್!

  ಇನ್ನು ನಿಖಿಲ್ ಕುಮಾರ್ ಸಿನಿಮಾಗಳ ಬಗ್ಗೆ ಮಾತನಾಡುವುದಾದರೆ, 'ಜಾಗ್ವಾರ್' ಸಿನಿಮಾದ ಮೂಲಕ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ನಿಖಿಲ್ ಅಭಿನಯದ 'ರೈಡರ್' ರಿಲೀಸ್ ಆಗಿದ್ದು, ಅವರ ಮುಂದಿನ ಸಿನಿಮಾ ಸೆಟ್ಟೇರಬೇಕು. ಇನ್ನು ಒಂದಷ್ಟು ಸಿನಿಮಾಗಳು ನಿಖಿಲ್ ಕುಮಾರ್ ಕೈಯಲ್ಲಿ ಇದ್ದು, ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ ಅಡಿಯಲ್ಲಿಯು ನಿಖಿಲ್ ಕುಮಾರ್ ಸಿನಿಮಾ ಮಾಡುತ್ತಿದ್ದಾರೆ.

  English summary
  Nikhil Kumaraswamy Son naming Ceremony; Actor reveal name of his baby boy, Know More
  Wednesday, June 8, 2022, 15:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X