ಅಪ್ಪನ ಹುಟ್ಟುಹಬ್ಬದಂದು ಮಗನಿಂದ ಉಡುಗೊರೆ: ರೈಡರ್ ಟ್ರೈಲರ್ ಬಿಡುಗಡೆ

ಇಂದು (ಡಿಸೆಂಬರ್ 16) ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬ. ಈ ವಿಶೇಷ ದಿನದಂದು ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನಟಿಸಿರುವ 'ರೈಡರ್' ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

3 ನಿಮಿಷದ ಮೇಲೆ ಎರಡು ಸೆಕೆಂಡ್ ಉದ್ದವಿರುವ ಟ್ರೈಲರ್‌ನಲ್ಲಿ ಆಕ್ಷನ್, ಪ್ರೀತಿ, ಸೆಂಟಿಮೆಂಟ್, ಹಾಸ್ಯ ಎಲ್ಲವೂ ಮಿಳಿತವಾಗಿದ್ದು, ಒಂದೊಳ್ಳೆ ಮನೊರಂಜನಾ ಪ್ಯಾಕೇಜ್ ಆಗಿರಲಿದೆ 'ರೈಡರ್' ಸಿನಿಮಾ ಎಂಬ ಸುಳಿವನ್ನು ನೀಡಿದೆ ಚಿತ್ರತಂಡ.

ಟ್ರೈಲರ್‌ನಲ್ಲಿ ಕೆಲವು ಆಕ್ಷನ್ ದೃಶ್ಯಗಳ ಝಲಕ್ ಅನ್ನು ತೋರಿಸಲಾಗಿದ್ದು ಫೈಟ್‌ಗಳು ಅದ್ಭುತವಾಗಿ ಮೂಡಿಬಂದಿವೆ. ಸಿನಿಮಾದಲ್ಲಿ ಸುಂದರ ಪ್ರೇಮಕತೆ ಇದೆ. ಜೊತೆಗೆ ಅಪ್ಪ-ಮಗನ ನಡುವಿನ ಭಾವುಕ ಬಂಧದ ಕತೆ. ನಿಖಿಲ್ ಕುಮಾರಸ್ವಾಮಿ ನಟನೆ ಸಹ ತುಸು ಮಾಗಿರುವುದನ್ನು ಟ್ರೈಲರ್‌ನಲ್ಲಿಯೇ ಗುರುತಿಸಬಹುದಾಗಿದೆ.

Nikhil Kumaraswamy Starrer Rider Kannada Movie Trailer Released

ಸಿನಿಮಾವನ್ನು ದುಬಾರಿ ವೆಚ್ಚದಲ್ಲಿಯೇ ನಿರ್ಮಿಸಿರುವುದಕ್ಕೂ ಟ್ರೈಲರ್‌ನಲ್ಲಿ ಕೆಲ ಕುರುಹುಗಳು ಸಿಗುತ್ತವೆ. ಸುಂದರ ಪ್ರಕೃತಿಯ ದೃಶ್ಯಗಳು, ಏರಿಯಲ್ ಶಾಟ್‌ಗಳು, ಗುಣಮಟ್ಟದ ಕ್ಯಾಮೆರಾ ಕೆಲಸ ಟ್ರೈಲರ್‌ನಲ್ಲಿ ಕಣ್ಣಿಗೆ ರಾಚುತ್ತದೆ. ಒಂದು ಹಾಡಿನ ತುಣುಕೂ ಸಹ ಟ್ರೈಲರ್‌ನಲ್ಲಿ ಇಣುಕಿ ಮರೆಯಾಗುತ್ತದೆ.

ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಜೊತೆಗೆ ನಾಯಕಿ ಕಶ್ಮಿರಾ ಪರದೇಶಿ ಮುದ್ದಾಗಿ ಕಾಣುತ್ತಿದ್ದಾರೆ. ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ 'ರೈಡರ್‌'ನಲ್ಲಿ ನಿಖಿಲ್ ಹೆಚ್ಚು ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾರೆ. ಹಾಸ್ಯಕ್ಕೆ ಚಿಕ್ಕಣ್ಣ ಇದ್ದಾರೆ. ನಿಖಿಲ್ ತಂದೆಯ ಪಾತ್ರದಲ್ಲಿ ಅಚ್ಯುತ್ ಕುಮಾರ್. ವಿಲನ್ ಆಗಿ ಗರುಡ ರಾಮ್ ಎಂಟ್ರಿಯೂ ಸೂಪರ್ ಆಗಿದೆ. ಎಲ್ಲ ಮಸಾಲೆಗಳನ್ನು ಹದವಾಗಿ ಬೆರೆಸಿಯೇ ವಿಜಯ್ ಕುಮಾರ್ ಕೊಂಡ 'ರೈಡರ್' ಸಿನಿಮಾವನ್ನು ನಿರ್ದೇಶಿಸಿದಂತಿದೆ. ಸಿನಿಮಾವು ಡಿಸೆಂಬರ್ 24 ಕ್ಕೆ ಬಿಡುಗಡೆ ಆಗಲಿದೆ.

'ಸೀತಾರಾಮ ಕಲ್ಯಾಣ' ಸಿನಿಮಾದ ಬಳಿಕ ಬಿಡುಗಡೆ ಆಗುತ್ತಿರುವ ನಿಖಿಲ್ ನಟನೆಯ ಸಿನಿಮಾ 'ರೈಡರ್'. ಈ ಸಿನಿಮಾದ ಬಳಿಕ ಎರಡು ಸಿನಿಮಾಗಳನ್ನು ನಿಖಿಲ್ ಈಗಾಗಲೇ ಒಪ್ಪಿಕೊಂಡಿದ್ದಾರೆ. ನಂದ ಕಿಶೋರ್, ನಿಖಿಲ್‌ಗಾಗಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Nikhil Kumaraswamy starrer Rider Kannada movie trailer released on December 16. Movie directed by Vijay Kumar Konda. Movie will release on December 24.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X