For Quick Alerts
  ALLOW NOTIFICATIONS  
  For Daily Alerts

  ಪತ್ನಿ ರೇವತಿಯನ್ನು ಹೊಗಳಿ ಕಾಲೆಳೆದ ನಿಖಿಲ್ ಕುಮಾರಸ್ವಾಮಿ

  |

  ನಿಖಿಲ್ ಕುಮಾರಸ್ವಾಮಿ ಗೃಹಸ್ಥಾಶ್ರಮ ಪ್ರವೇಶಿಸಿ ಈಗಾಗಲೇ ಐದು ತಿಂಗಳಾಗುತ್ತಾ ಬಂತು. ಲಾಕ್‌ಡೌನ್ ಅವಧಿಯಲ್ಲಿ ಪರಸ್ಪರ ಸಾಕಷ್ಟು ಸಮಯ ಒಟ್ಟಿಗೆ ಕಳೆದಿರುವ ಈ ಯುವ ಜೋಡಿ. ಪ್ರಸ್ತುತ ರಾಜ್ಯದ ಸೆಲೆಬ್ರಿಟಿ ಜೋಡಿಗಳಲ್ಲೊಂದು.

  ಮದುವೆ ಬಳಿಕ ಹಲವು ಹೊಸ ವಿಷಯಗಳಲ್ಲಿ ತೊಡಗಿಸಿಕೊಂಡಿರುವ ನಿಖಿಲ್, ತೋಟಗಾರಿಕೆ, ಮನೆ ನಿರ್ಮಾಣ ಕ್ಕೆ ಕೈಹಾಕಿದ್ದಾರೆ. ಅನ್‌ಲಾಕ್ ಪ್ರಾರಂಭವಾದ ಬಳಿಕ ಸಕ್ರಿಯ ರಾಜಕಾರಣಕ್ಕೆ ಮರಳುವ ಜೊತೆಗೆ ಸಿನಿಮಾ ಚಿತ್ರೀಕರಣದಲ್ಲೂ ಭಾಗವಹಿಸುತ್ತಿದ್ದಾರೆ.

  ಅಂಬಾರಿ ಹೊರುವ 'ಅರ್ಜುನ'ನನ್ನು ಭೇಟಿ ಮಾಡಿದ ನಿಖಿಲ್ ಕುಮಾರ್ ದಂಪತಿ ಅಂಬಾರಿ ಹೊರುವ 'ಅರ್ಜುನ'ನನ್ನು ಭೇಟಿ ಮಾಡಿದ ನಿಖಿಲ್ ಕುಮಾರ್ ದಂಪತಿ

  ಸಾಮಾಜಿಕ ಜಾಲತಾಣದಲ್ಲಿ ಪತ್ನಿಯೊಂದಿಗಿನ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುವ ನಿಖಿಲ್, ಮೊದಲ ಬಾರಿಗೆ ಪತ್ನಿ ರೇವತಿ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ನಿರೂಪಕಿ ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್‌ 'ಅನುಶ್ರೀ ಆಂಕರ್' ಗಾಗಿ ಮಾಡಿರುವ ಸಂದರ್ಶನದಲ್ಲಿ ನಿಖಿಲ್ ಮನಬಿಚ್ಚಿ ಮಾತನಾಡಿದ್ದಾರೆ.

  ಪತ್ನಿಯನ್ನು ಮನಸ್ಸಾರೆ ಹೊಗಳಿದ ನಿಖಿಲ್

  ಪತ್ನಿಯನ್ನು ಮನಸ್ಸಾರೆ ಹೊಗಳಿದ ನಿಖಿಲ್

  ಸಂದರ್ಶನದಲ್ಲಿ ಪತ್ನಿ ರೇವತಿಯವರನ್ನು ಮನಸ್ಸಾರೆ ಹೊಗಳಿರುವ ನಿಖಿಲ್, 'ನನ್ನ ಪತ್ನಿ ನನಗಿಂತಲೂ ನೂರು ಪಾಲು ಮಾನವೀಯತೆ ಉಳ್ಳವರು. ಅವರನ್ನು ಪತ್ನಿಯಾಗಿ ಪಡೆಯಲು ನಾನು ಬಹುವಾಗಿ ಪುಣ್ಯ ಮಾಡಿದ್ದೇನೆ' ಎಂದಿದ್ದಾರೆ. ಪತ್ನಿ ಸಗುಣಗಳ ಬಗ್ಗೆ ನಿಖಿಲ್ ಮಾತು ಇಷ್ಟಕ್ಕೇ ನಿಂತಿಲ್ಲ.

  ರೇವತಿ ಬಹಳ ಮೃದು ಹೃದಯಿ: ನಿಖಿಲ್

  ರೇವತಿ ಬಹಳ ಮೃದು ಹೃದಯಿ: ನಿಖಿಲ್

  ನನ್ನ ತಂದೆ-ತಾಯಿಯೊಂದಿಗೆ ಚೆನ್ನಾಗಿ ಹೊಂದಿಕೆಯಾಗುವ ಪತ್ನಿ ಸಿಕ್ಕರೆ ಸಾಕು ಎಂದುಕೊಂಡಿದ್ದೆ. ಆದರೆ ಅದಕ್ಕಿಂತಲೂ ಮಿಗಿಲಾದವರು ಸಿಕ್ಕಿದ್ದಾರೆ. ರೇವತಿ ಬಹಳ ಮೃದು ಹೃದಯಿ, ಅಕಾರಣವಾಗಿಯೂ ಅವರಿಗೆ ಅಳುಬಂದುಬಿಡುತ್ತದೆ. ಕಾವೇರಿಯನ್ನು ಕಣ್ಣಲ್ಲೇ ತುಂಬಿಕೊಂಡಿದ್ದಾರೆ ಎಂದಿದ್ದಾರೆ ನಿಖಿಲ್.

  ಹೊಸ ಮನೆ ಕಟ್ಟಿಸಲು ಭೂಮಿ ಪೂಜೆ ಮಾಡಿದ ನಿಖಿಲ್ ಕುಮಾರಸ್ವಾಮಿ ದಂಪತಿಹೊಸ ಮನೆ ಕಟ್ಟಿಸಲು ಭೂಮಿ ಪೂಜೆ ಮಾಡಿದ ನಿಖಿಲ್ ಕುಮಾರಸ್ವಾಮಿ ದಂಪತಿ

  ಸ್ವಚ್ಛತೆಯ ಗೀಳಿದೆ ರೇವತಿಗೆ: ನಿಖಿಲ್

  ಸ್ವಚ್ಛತೆಯ ಗೀಳಿದೆ ರೇವತಿಗೆ: ನಿಖಿಲ್

  ನನ್ನ ಪತ್ನಿಗೆ ಒಸಿಡಿ ಇದೆ ಅದೂ ಸ್ವಚ್ಛತೆಯ ಒಸಿಡಿ (ಸ್ವಚ್ಛತೆಯ ಗೀಳು), ಎಲ್ಲವೂ ಸ್ವಚ್ಛವಾಗಿರಬೇಕು ಎಂದುಕೊಳ್ಳುತ್ತಾರೆ. ಮದುವೆಗೆ ಮುಂಚೆ ನನ್ನ ರೂಂ ಅನ್ನು ವರ್ಷಕ್ಕೆ ಒಮ್ಮೆ ಮಾತ್ರ ಕ್ಲೀನ್ ಮಾಡುತ್ತಿದ್ದೆ, ಆದರೆ ಈಗ ಹಾಗಾಗುವುದಿಲ್ಲ. ಸಾಕಷ್ಟು ಬದಲಾಗಿದ್ದೀನಿ, ಆದರೆ ಇನ್ನೂ ಸಾಲದಂತೆ ಅವರಿಗೆ ಎಂದು ನಕ್ಕರು ನಿಖಿಲ್.

  ಅಡುಗೆ ಕಡೆಗೆ ಹೊರಳಿದ ಮಾತು

  ಅಡುಗೆ ಕಡೆಗೆ ಹೊರಳಿದ ಮಾತು

  ಮಾತು ಹಾಗೆಯೇ ಅಡುಗೆ ಕಡೆಗೆ ಹೊರಳಿತು. ತಮಾಷೆಯಾಗಿ ಪತ್ನಿಯ ಕಾಲೆಳೆದ ನಿಖಿಲ್, 'ಅವರು ಅಡುಗೆ ಮಾಡುತ್ತಾರಂತೆ ನನಗೆ ಗೊತ್ತಿಲ್ಲ ಅದರ ಬಗ್ಗೆ, ಈ ವರೆಗೆ ಅಡುಗೆ ಮಾಡಿಲ್ಲ. ಒಮ್ಮೆ ಬಿರಿಯಾನಿ ಏನೋ ಮಾಡಿದ್ದರಂತೆ. ಆದರೆ ಆ ಬಗ್ಗೆಯೂ ನನಗೆ ಗೊತ್ತಿಲ್ಲ' ಎಂದು ಪತ್ನಿಯ ಅಡುಗೆ ಸಾಹಸವನ್ನು ವರ್ಣಿಸಿದ್ದಾರೆ ನಿಖಿಲ್.

  ಪತ್ನಿ Revathi ಕಾಲೆಳೆದ Nikhil Kumaraswamy | Oneindia Kannada
  ನನ್ನ ಪತ್ನಿ ನನ್ನ ಫ್ಯಾನ್ ಅಲ್ಲ: ನಿಖಿಲ್

  ನನ್ನ ಪತ್ನಿ ನನ್ನ ಫ್ಯಾನ್ ಅಲ್ಲ: ನಿಖಿಲ್

  ನನ್ನ ಪತ್ನಿ ನನ್ನ ಫ್ಯಾನ್ ಅಲ್ಲ ಎಂಬ ಸೀಕ್ರೇಟ್ ಹೇಳಿದ ನಿಖಿಲ್, ನನ್ನ ಅತ್ತೆಯವರು ನನ್ನ ಫ್ಯಾನ್, ಅವರು ಸಿನಿಮಾಗಳನ್ನು ನೋಡಿದ್ದಾರೆ. ರೇವತಿ ಕೆಲವು ಸಿನಿಮಾಗಳನ್ನಷ್ಟೆ ನೋಡಿದ್ದಾರೆ. ಆದರೆ ಅವರು ನನ್ನ ಫ್ಯಾನ್ ಅಲ್ಲ. ಇನ್ನೂ ಸಮಯವಿದೆ, ಒಳ್ಳೆ ಸಿನಿಮಾಗಳನ್ನು ಮಾಡಿ, ಅವರನ್ನು ನನ್ನ ಫ್ಯಾನ್ ಅನ್ನಾಗಿ ಮಾಡಿಕೊಳ್ಳಬೇಕು ಎಂದಿದ್ದಾರೆ ನಿಖಿಲ್. ಸಂದರ್ಶನದಲ್ಲಿ ಹಲವು ವಿಷಯಗಳನ್ನು ಮಾತನಾಡಿದ್ದಾರೆ ನಿಖಿಲ್.

  ನಿಖಿಲ್ ಕುಮಾರ್ ದಂಪತಿಯ ಮೊದಲ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮನಿಖಿಲ್ ಕುಮಾರ್ ದಂಪತಿಯ ಮೊದಲ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

  English summary
  Actor , politician Nikhil Kumaraswamy talked about his wife Revathi. He said she has more humanity than him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X