For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಹಾಗೂ ರಾಜಕೀಯ: ಮಂಡ್ಯದಲ್ಲಿ ನಿಖಿಲ್ ಮಾತು

  |

  ನಿಖಿಲ್ ಕುಮಾರಸ್ವಾಮಿ, ರಾಜಕೀಯ ಹಾಗೂ ಸಿನಿಮಾ, ಎರಡರ ಪಯಣವನ್ನೂ ಒಟ್ಟೊಟ್ಟಿಗೆ ಮಾಡುತ್ತಿದ್ದಾರೆ.

  ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಳ್ಳುವ ನಡುವೆಯೂ ರಾಜಕೀಯ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಾ ಎರಡೂ ರಂಗಗಳನ್ನು ಬ್ಯಾಲೆನ್ಸ್ ಮಾಡುತ್ತಾ ಸಾಗುತ್ತಿದ್ದಾರೆ.

  ನಿಖಿಲ್ ಕುಮಾರ್ ಗೆ ದಿನಕರ್ ತೂಗುದೀಪ ನಿರ್ದೇಶನ: ಸ್ಪಷ್ಟನೆ ನೀಡಿದ ದಿನಕರ್ ನಿಖಿಲ್ ಕುಮಾರ್ ಗೆ ದಿನಕರ್ ತೂಗುದೀಪ ನಿರ್ದೇಶನ: ಸ್ಪಷ್ಟನೆ ನೀಡಿದ ದಿನಕರ್

  ರಾಜಕೀಯ ಕಾರಣಕ್ಕೆ ಮಂಡ್ಯಕ್ಕೆ ಭೇಟಿ ನೀಡಿರುವ ನಿಖಿಲ್ ಕುಮಾರ್, ಸಿನಿಮಾ ಹಾಗೂ ರಾಜಕೀಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  'ನನಗೆ ಸಿನಿಮಾ ಎಂಬುದು ಫ್ಯಾಷನ್ ಹಾಗಾಗಿ ಅದರ ಮೇಲೆ ಗಮನ ಹರಿಸಿದ್ದೆ. ಒಂದು ವೇಳೆ ನಾನು ಶಾಸಕನಾಗಬೇಕು ಎಂದುಕೊಂಡಿದ್ದರೆ, ಎಂದೋ ಶಾಸಕನಾಗಿರುತ್ತಿದ್ದೆ. ಅಪ್ಪನ ಹೆಸರು ಹೇಳಿಕೊಂಡು ಹಲವರು ಶಾಸಕರಾಗಿದ್ದಾರೆ, ನಾನು ಶಾಸಕನಾಗುವುದು ಕಷ್ಟವೇನಿರಲಿಲ್ಲ' ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.

  ಮಂಡ್ಯ ರಾಜಕೀಯದಲ್ಲಿ ತುಸು ಒಳಜಗಳ ಎದ್ದಿದ್ದು, ಅದರ ಬಗ್ಗೆಯೂ ಮಾತನಾಡಿದ ನಿಖಿಲ್, 'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸುರೇಶ್ ಗೌಡ ಅವರೇ ಕಣಕ್ಕೆ ಇಳಿಯಲಿದ್ದಾರೆ, ಈ ಬಗ್ಗೆ ಕಾರ್ಯಕರ್ತರಿಗೆ ಅನುಮಾನ ಬೇಡ' ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.

  ಲವರ್ ಬಾಯ್ ಲುಕ್ ನಲ್ಲಿ ಎಂಟ್ರಿ ಕೊಟ್ಟ 'ರೈಡರ್' ನಿಖಿಲ್ ಕುಮಾರ್ಲವರ್ ಬಾಯ್ ಲುಕ್ ನಲ್ಲಿ ಎಂಟ್ರಿ ಕೊಟ್ಟ 'ರೈಡರ್' ನಿಖಿಲ್ ಕುಮಾರ್

  ಶಿವರಾಮೇಗೌಡರು, ತಾವು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು, ಹಾಗಾಗಿ ಸುರೇಶ್ ಗೌಡ ಹಾಗೂ ಶಿವರಾಮೇಗೌಡರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಇದೀಗ ನಿಖಿಲ್ ಕುಮಾರಸ್ವಾಮಿ ಸುರೇಶ್ ಗೌಡ ಅವರೇ ಪಕ್ಷದ ಅಭ್ಯರ್ಥಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

  ನಿಖಿಲ್ ಕುಮಾರಸ್ವಾಮಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ, ಸುಮಲತಾ ಅಂಬರೀಶ್ ಎದುರು ಸೋಲು ಕಂಡಿದ್ದಾರೆ.

  English summary
  Actor and Politician Nikhil Kumaraswamy talked about movie and politics. He said movie is my passion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X