ತಂದೆಯಾಗುತ್ತಿರುವ ನಿಖಿಲ್ ಕುಮಾರಸ್ವಾಮಿ: ಸಂಭ್ರಮದಲ್ಲಿ ಕುಟುಂಬ
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ತಂದೆಯಾಗುತ್ತಿದ್ದಾರೆ. ಪತ್ನಿ ರೇವತಿ ಈಗ ಐದು ತಿಂಗಳ ಗರ್ಭಿಣಿ. ಇಂದು ರೇವತಿ ಹುಟ್ಟುಹಬ್ಬವಿದ್ದು ಇಂದೇ ಈ ಸಿಹಿ ಸುದ್ದಿ ಹೊರಬಿದ್ದಿದೆ.
Recommended Video
ತಂದೆ ಆಗ್ತಿದ್ದಾರೆ Nikhil Kumaraswamy | Filmibeat Kannada
ತಾವು ಅಜ್ಜ ಆಗುತ್ತಿರುವ ಸಂತಸದ ವಿಷಯವನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಮಾಧ್ಯಮವೊಂದಕ್ಕೆ ಖಾತ್ರಿ ಪಡಿಸಿದ್ದಾರೆ. ನಿಖಿಲ್ ಹಾಗೂ ರೇವತಿ ಕಳೆದ ವರ್ಷ ಏಪ್ರಿಲ್ 17 ರಂದು ವಿವಾಹವಾದರು.
ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಅವರ ಹುಟ್ಟುಹಬ್ಬ ಇಂದು. ಪತ್ನಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ನಿಖಿಲ್ ಇಬ್ಬರೂ ಒಟ್ಟಿಗಿರುವ ಹಳೆಯ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮದುವೆ ಆದ ಬಳಿಕ ಹಲವು ಹೊಸ ಕಾರ್ಯಗಳಲ್ಲಿ ನಿಖಿಲ್ ತಮ್ಮನ್ನು ತೊಡಗಿಸಿಕೊಂಡಿದ್ದು, ಸಿನಿಮಾ ಜೊತೆಗೆ ಕೃಷಿ ಸಹ ಮಾಡಲು ತೊಡಗಿದ್ದಾರೆ. ಈ ನಡುವೆ ಹೊಸ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಸಹ ಮಾಡಿದ್ದಾರೆ.
English summary
Nikhil Kumaraswamy is to be father soon. his wife Revathi is pregnant now. HD Kumaraswamy confirm news to a media house.


Click it and Unblock the Notifications