'ರೈಡರ್' ಸಿನಿಮಾಗಾಗಿ ಬೆಟ್ಟದ ತಾಯಿಗೆ ಶರಣೆಂದ ನಿಖಿಲ್ ಕುಮಾರಸ್ವಾಮಿ

By ಮೈಸೂರು ಪ್ರತಿನಿಧಿ

ತಮ್ಮ ಮುಂದಿನ ಸಿನಿಮಾ 'ರೈಡರ್‌' ಯಶಸ್ವಿಯಾಗಲೆಂದು ಆಶೀರ್ವಾದ ಪಡೆಯಲು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಇಂದು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಪುತ್ರ ಹರೀಶ್ ಗೌಡ ಅವರೊಟ್ಟಿಗೆ ಕಾಣಿಸಿಕೊಂಡರು.

ಈ ಸಂದರ್ಭ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ''ನನ್ನ ಹೊಸ ಚಿತ್ರದ ಅರ್ಶಿವಾದ ಪಡೆಯಲು ಬಂದಿದ್ದೇನೆ. ರಾಜ್ಯದ ಜನಕ್ಕೆ ಒಳಿತು ಮಾಡಲಿ ಅಂತಾ ಬೇಡಿಕೊಂಡಿದ್ದೇನೆ. ಯಾವುದೇ ರೀತಿಯ ರಾಜಕೀಯ ಮಾಡಲು ಬಂದಿಲ್ಲ'' ಎಂದರು.

ನಿಖಿಲ್ ಕುಮಾರಸ್ವಾಮಿ ಅವರ ಈ ಹಠಾತ್ ಮೈಸೂರು ಭೇಟಿ ಸಿನಿಮಾದ ಕಾರಣಕ್ಕಿಂತಲೂ ಹೆಚ್ಚಾಗಿ ರಾಜಕೀಯದ ಕಾರಣಕ್ಕೇ ಮಹತ್ವವಾಗಿದೆ. ಸಿನಿಮಾ ಕೇವಲ ನೆಪವಷ್ಟೆ ಎಂದು ಮೈಸೂರು ರಾಜಕಾರಣ ಗಮನಿಸಿದ ಯಾರಿಗಾದರೂ ಸುಲಭಕ್ಕೆ ಅರ್ಥವಾಗುತ್ತದೆ.

Nikhil Kumaraswamy Visited Chamundeshwari Temple To Seek Blessings For His New Movie Rider

ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾಗಿರುವ ಜಿ.ಟಿ‌.ದೇವೇಗೌಡ ಜೆಡಿಎಸ್‌ನಲ್ಲೇ ಉಳಿಯಲಿದ್ದಾರೆಂದು ಕೆ.ಟಿ.ಶ್ರೀಕಂಠೇಗೌಡ ಮೊನ್ನೆಯಷ್ಟೇ ಹೇಳಿಕೆ ನೀಡಿದ್ದರು. ಮೂರು ದಿನಗಳ ಹಿಂದೆಯಷ್ಟೇ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಜಿಟಿಡಿಯವರ ಪತ್ನಿ ಭೇಟಿ ಮಾಡಿದ್ದರು. ಇದಾದ ಬಳಿಕ ಈಗ ನಿಖಿಲ್ ಕುಮಾರಸ್ವಾಮಿ ಹಾಗೂ ಹರೀಶ್ ಗೌಡ ಭೇಟಿ ಮಾಡಿದ್ದಾರೆ.

''ನನ್ನ ಹಾಗೂ ಹರೀಶ್ ಗೌಡರ ಸ್ನೇಹ ದೊಡ್ಡದು. ರಾಜಕೀಯ ಹೊರತಾಗಿ ನಮ್ಮ ಸ್ನೇಹ ಇದೆ. ಸಂಘಟನೆ ವಿಚಾರದಲ್ಲಿ ಎಲ್ಲವೂ ಸರಿ ಹೋಗುತ್ತೆ. ಮುಂದಿನ ದಿನಗಳಲ್ಲಿ ಬದಲಾವಣೆಗಳು ಇವೆ ಎಲ್ಲ ಸಮಸ್ಯೆಗಳು ಸರಿ ಹೋಗುತ್ತೆ,'' ಎಂದು ನಿಖಿಲ್ ಹೇಳಿದರು.

ಅಪೆಕ್ಸ್ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಜಿ.ಡಿ.ಹರೀಶ್ ಗೌಡ ಮಾತನಾಡಿ, ''ಈ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ನಾನು ಮತ್ತು ನಿಖಿಲ್ ಒಳ್ಳೆಯ ಸ್ನೇಹಿತರಾಗಿದ್ದೇವೆ. ಮೈಸೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತೇನೆ. ಇದರಲ್ಲಿ ಯವುದೇ ರಾಜಕೀಯ ಇಲ್ಲ. ರಾಜಕೀಯ ಬೆಳವಣಿಗೆ ಗಳ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ'' ಎಂದಷ್ಟೇ ಹೇಳಿದರು.

ನಿಖಿಲ್, ಹರೀಶ್ ಗೌಡರ ಭೇಟಿ ಸಂದರ್ಭದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಪುತ್ರ ಶಿವರಾಜ್ ಸಾಥ್ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಭೇಟಿಗಳು ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

'ರೈಡರ್' ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಎಲ್ಲವೂ ಪೂರ್ಣವಾಗಿದ್ದು, ರೀರೆಕಾರ್ಡಿಂಗ್ ಕಾರ್ಯ ಚಾಲ್ತಿಯಲ್ಲಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಈಗಾಗಲೇ ಯೋಚನೆ ಮಾಡಿಟ್ಟುಕೊಂಡಿದ್ದೇವೆ. ಸೂಕ್ತ ಸಮಯದಲ್ಲಿ ಅಧಿಕೃತಗೊಳಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಇದೇ ಸಮಯದಲ್ಲಿ ಹೇಳಿದ್ದಾರೆ.

'ರೈಡರ್' ಸಿನಿಮಾವನ್ನು ತೆಲುಗಿನ ವಿಜಯ್ ಕುಮಾರ್ ಕೊಂಡ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕಾಶ್ಮೀರ ಪರದೇಶಿ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಅನುಶಾ ರೈ, ಅಚ್ಯುತ್ ಕುಮಾರ್, ದತ್ತಣ್ಣ, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ರಾಜೇಶ್ ನಟರಂಗ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಸಿ ಮನೋಹರನ್ ಬಂಡವಾಳ ಹೂಡಿದ್ದಾರೆ. ಸಂಗೀತ ಅರ್ಜುನ್ ಜನ್ಯ ಅವರದ್ದು.

More from Filmibeat

English summary
Nikhil Kumaraswamy today visited Mysore Chamundeshwari Temple to seek blessings for his new movie Rider.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X