2 ದಿನದಲ್ಲಿ ಕುರುಕ್ಷೇತ್ರದ 'ಅಭಿಮನ್ಯು'ಗೆ ಫಿದಾ ಆದವರೆಷ್ಟು ಜನ?

By Pavithra

ಸ್ಯಾಂಡಲ್ ವುಡ್ ನ 'ಅಭಿಮನ್ಯು' ಅಂದರೆ ಈಗ ಎಲ್ಲರೂ ನಟ ನಿಖಿಲ್ ಕುಮಾರ್ ನತ್ತ ಬೆರಳು ಮಾಡಿ ತೋರಿಸುತ್ತಾರೆ. ಹೌದು, ಸದ್ಯಕ್ಕೆ ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರವನ್ನ ನಿರ್ವಹಿಸಿರುವ ಹಿನ್ನೆಲೆಯಲ್ಲಿ ನಿಖಿಲ್ ಕುಮಾರ್ ಕನ್ನಡ ಸಿನಿಮಾರಂಗದ ಅಭಿಮನ್ಯು ಎಂದೇ ಕರೆಸಿಕೊಳ್ಳುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ವಿಶೇಷವಾಗಿ ಕುರುಕ್ಷೇತ್ರ ಸಿನಿಮಾದ ಅಭಿಮನ್ಯು ಟೀಸರ್ ಬಿಡುಗಡೆಯಾಗಿತ್ತು. ಟೀಸರ್ ನೋಡಿದ ಸಾಕಷ್ಟು ಅಭಿಮಾನಿಗಳು ಒಳ್ಳೆ ಪ್ರತಿಕ್ರಿಯೆಯನ್ನೂ ನೀಡಿದ್ದರು.

Nikhil Kumars Abhimanyu teaser trending in youtube

ನಿಖಿಲ್ ಕುಮಾರ್ ಅಭಿನಯದ ಮೊದಲ ಪೌರಾಣಿಕ ಚಿತ್ರ ಇದಾಗಿದ್ದು ಪಾತ್ರಕ್ಕಾಗಿ ನಿಖಿಲ್ ಸಾಕಷ್ಟು ತಯಾರಿ ಮಾಡಿಕೊಂಡಿರುವುದು ಸ್ಕ್ರೀನ್ ಮೇಲೆ ಕಾಣುತ್ತಿದೆ. ಟೀಸರ್ ಬಿಡುಗಡೆಯಾದ 2 ದಿನಕ್ಕೆ 6 ಲಕ್ಷ ಜನರು ವೀಕ್ಷಣೆ ಮಾಡಿದ್ದು, ಅಭಿಮನ್ಯು ಪಾತ್ರದಲ್ಲಿ 'ಜಾಗ್ವರ್' ನಟನನ್ನ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.

ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವ ವೀಕ್ಷಕರು ಗ್ರಾಫಿಕ್ಸ್ ನಲ್ಲಿ ಇನ್ನೂ ಗುಣಮಟ್ಟ ಇದ್ದಿದ್ದರೇ ತುಂಬಾ ಚೆನ್ನಾಗಿರುತ್ತೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾ ನಿಧಾನವಾದರೂ ಪರವಾಗಿಲ್ಲ ಒಳ್ಳೆ ಕಂಟೆಂಟ್ ಮತ್ತು ಕ್ವಾಲಿಟಿ ಸಿನಿಮಾ ಕೊಡಿ ಎನ್ನುವ ಮನವಿಯನ್ನೂ ಮಾಡಿದ್ದಾರೆ.

Nikhil Kumars Abhimanyu teaser trending in youtube

ಸದ್ಯ ಅಭಿಮನ್ಯು ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಅಂಬರೀಶ್ ಅವರ ಎದುರು ನಿಂತು ಅಭಿನಯಿಸಿರೋದಕ್ಕಾಗಿ ನಿಖಿಲ್ ಸಂತಸ ವ್ಯಕ್ತ ಪಡಿಸಿದ್ದಾರೆ. ಚೊಚ್ಚಲ ಸಿನಿಮಾ 'ಜಾಗ್ವರ್' ಸಿನಿಮಾಗಿಂತಲೂ ಹೆಚ್ಚಿನ ತಯಾರಿ 'ಕುರುಕ್ಷೇತ್ರ' ಚಿತ್ರಕ್ಕಾಗಿ ಮಾಡಿಕೊಂಡಿದ್ದರು. ಸಿನಿಮಾದಲ್ಲಿ ನಿಖಿಲ್ ಅವರಿಗೆ ಒಂದು ಹಾಡು ಕೂಡ ಇದ್ದು ಸದ್ಯಕ್ಕೆ ತಮ್ಮ ಭಾಗದ ಚಿತ್ರೀಕರಣ ಕಂಪ್ಲಿಟ್ ಮಾಡಿದ್ದಾರೆ ಸ್ಯಾಂಡಲ್ ವುಡ್ ನ ಅಭಿಮನ್ಯು.

More from Filmibeat

English summary
Kurukshetra movie Nikhil Kumar's Abhimanyu character teaser goes on trending in youtube. in two days six lakh people watched Abhimanyu Teaser .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X