»   » 'ಹಸಿರು ರಿಬ್ಬನ್' ಚಿತ್ರದಲ್ಲಿ ನಿಖಿಲ್ ಮಂಜೂ ಪಾತ್ರವೇನು.?

'ಹಸಿರು ರಿಬ್ಬನ್' ಚಿತ್ರದಲ್ಲಿ ನಿಖಿಲ್ ಮಂಜೂ ಪಾತ್ರವೇನು.?

Posted By:
Subscribe to Filmibeat Kannada

'ಹಜ್' ಹಾಗೂ 'ರಿಸರ್ವೇಶನ್' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಪ್ರತಿಷ್ಟಿತ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಸ್ವೀಕರಿಸಿರುವ ನಿಖಿಲ್ ಮಂಜೂ ಇದೀಗ ಖ್ಯಾತ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾ 'ಹಸಿರು ರಿಬ್ಬನ್'ನಲ್ಲಿ ಅಭಿನಯಿಸುತ್ತಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡ ಸಿನಿಮಾ 'ರಿಸರ್ವೇಶನ್' ಬಗ್ಗೆ ನಿಮಗೆಷ್ಟು ಗೊತ್ತು.?

ಇಲ್ಲಿಯವರೆಗೂ ಹಲವು ಸಿನಿಮಾಗಳಲ್ಲಿ ನಟಿಸಿರುವ ನಿಖಿಲ್ ಮಂಜೂ 'ಹಸಿರು ರಿಬ್ಬನ್' ಚಿತ್ರದಲ್ಲಿ ಪ್ರಪ್ರಥಮ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Nikhil Manju speaks about his role in HS Venkatesh Murthy directorial 'Hasiru Ribbon'

ಕವಿ ಹೇಳದ್ದನ್ನು ಕ್ಯಾಮೆರಾ ಹೇಳುವುದರಿಂದ 'ಹಸಿರು ರಿಬ್ಬನ್' ನಿರ್ದೇಶನ: ಎಚ್ಚೆಸ್ವಿ

'ಹಸಿರು ರಿಬ್ಬನ್' ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ನಿಖಿಲ್ ಮಂಜೂ ಹೇಳಿದಿಷ್ಟು - ''ಎಚ್.ಎಸ್.ವಿ ಅವರ ಜೊತೆ ಅನೇಕ ಸಿನಿಮಾಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಈಗ ಅವರ ನೇತೃತ್ವದಲ್ಲಿ 'ಹಸಿರು ರಿಬ್ಬನ್' ಎಂಬ ಸಿನಿಮಾ ಆಗುತ್ತಿದೆ. ಒಂದು ಕುಟುಂಬ ಯಾವ್ಯಾವ್ದೋ ಕಾರಣಗಳಿಗೆ ಹೇಗೆ ಬಲಿ ಆಗುತ್ತದೆ... ಇವತ್ತು ಸಮಾಜದಲ್ಲಿ ಏನು ನಡೆಯುತ್ತಿದೆ, ಅದನ್ನ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಸಿನಿಮಾದಲ್ಲಿದೆ''

''ನಾನು ಇಲ್ಲಿಯವರೆಗೂ ಪಾಸಿಟೀವ್ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದೇನೆ. ಆದರೆ, ಮೇಷ್ಟ್ರು ಮೇಲೆ ಇರುವ ಪ್ರೀತಿ, ಭಕ್ತಿಯಿಂದ ನಾನು 'ಹಸಿರು ರಿಬ್ಬನ್' ಚಿತ್ರದ ಮೂಲಕ ಮೊದಲ ಬಾರಿಗೆ ಇಷ್ಟ ಪಟ್ಟು ನೆಗೆಟಿವ್ ಪಾತ್ರ ಮಾಡುತ್ತಿದ್ದೇನೆ. ನನ್ನ ಅದೃಷ್ಟ ಆ ಪಾತ್ರ ನನಗೆ ಸಿಕ್ಕಿದ್ದು''

''ಮೇಷ್ಟ್ರು ಮುಂದೆ ಎಲ್ಲರೂ ವಿದ್ಯಾರ್ಥಿಗಳೇ. ನಾನು ಪ್ರಶಸ್ತಿ ವಿಜೇತ ನಿರ್ದೇಶಕ ಆಗಿದ್ದರೂ ಕೂಡ ಅವರ ನಿರ್ದೇಶನದಲ್ಲಿ ಕೇವಲ ನಟನಾಗಿ ಮಾತ್ರ ಇರುತ್ತೇನೆ'' ಎನ್ನುತ್ತಾರೆ ನಿಖಿಲ್ ಮಂಜೂ.

ಅಂದ್ಹಾಗೆ, 'ಹಸಿರು ರಿಬ್ಬನ್' ಚಿತ್ರದಲ್ಲಿ ನಿಖಿಲ್ ಮಂಜೂ, ಗಿರಿಜಾ ಲೋಕೇಶ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಆಗಸ್ಟ್ 6 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ 'ಹಸಿರು ರಿಬ್ಬನ್' ಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿತ್ತು.

English summary
Nikhil Manju speaks about his role in HS Venkatesh Murthy directorial 'Hasiru Ribbon'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada