For Quick Alerts
  ALLOW NOTIFICATIONS  
  For Daily Alerts

  ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕುರಿತು ಬರಲಿದೆ ಸಿನಿಮಾ

  By Suneel
  |

  ನಿರ್ದೇಶಕ ನಿಖಿಲ್ ಮಂಜು ರವರು ರಾಜ್ಯದ ಜನಪ್ರಿಯ ಹಿರಿಯ ಐಎಎಸ್ ಅಧಿಕಾರಿ ಡಾ.ಶಾಲಿನಿ ರಜನೀಶ್ ಕುರಿತು ಚಿತ್ರ ನಿರ್ದೇಶನ ಮಾಡಲಿದ್ದಾರೆ.[ತಂದೆಯ ಮೃತದೇಹ ದಾನ ಮಾಡಿದ ಶಾಲಿನಿ ರಜನೀಶ್]

  ಹೌದು, ಇತ್ತೀಚೆಗಷ್ಟೆ 'ರಿಸರ್ವೇಶನ್' ಚಿತ್ರಕ್ಕಾಗಿ ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗದಲ್ಲಿ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ನಿರ್ದೇಶಕ ನಿಖಿಲ್ ಮಂಜು ಐಎಎಸ್ ಅಧಿಕಾರಿ ಡಾ. ಶಾಲಿನಿ ರಜನೀಶ್ ಕುರಿತು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈಗಾಗಲೇ ಚಿತ್ರಕ್ಕೆ 'ಶಾಲಿನಿ ಐಎಎಸ್' ಎಂದು ಟೈಟಲ್ ಸಹ ನೀಡಲಾಗಿದ್ದು, ಭಾನುವಾರ ಬೆಳಿಗ್ಗೆ ಬೆಂಗಳೂರಿನ ಗಾಂಧಿ ಭವನ್ ನಲ್ಲಿ ಚಿತ್ರ ಲಾಂಚ್ ಮಾಡಲು ಸಿದ್ಧತೆ ನಡೆಸಲಾಗಿದೆ.

  ಅಂದಹಾಗೆ ಚಿತ್ರ ಶಾಲಿನಿ ರಜನೀಶ್ ರವರ ಕುರಿತೇ ಸಂಪೂರ್ಣವಾಗಿ ಮೂಡಿಬರಲಿರುವ ಬಗ್ಗೆ ಸ್ಪಷ್ಟನೆ ಇಲ್ಲ. ಕಾರಣ ಶಾಲಿನಿ ಮತ್ತು ರಜನೀಶ್ ರವರು ಬರೆದಿರುವ 'ಡ್ರೀಮ್ಸ್ ಆಫ್ ಐಎಎಸ್ ಕಪಲ್' ಎಂಬ ಪುಸ್ತಕ ಆಧರಿತವಾಗಿ ಚಿತ್ರ ಮೂಡಿಬರಲಿದೆ ಎನ್ನಲಾಗಿದೆ. ನಿರ್ದೇಶಕ ನಿಖಿಲ್ ಮಂಜು ಈಗಾಗಲೇ ಚಿತ್ರಕ್ಕೆ ಸ್ಕ್ರೀನ್‌ಪ್ಲೇ ಮತ್ತು ಸಂಭಾಷಣೆ ಬರೆದಿದ್ದಾರೆ.

  'ಶಾಲಿನಿ ಐಎಎಸ್' ಚಿತ್ರದಲ್ಲಿ ಶಾಲಿನಿ ರವರ ಪಾತ್ರವನ್ನು 'ವೈಷ್ಣವಿ' ಚಿತ್ರದಲ್ಲಿ ಅಭಿನಯಿಸಿದ್ದ Yana Raj ನಿರ್ವಹಿಸಲಿದ್ದಾರೆ ಎಂದು ತಿಳಿದಿದೆ. ಚಿತ್ರಕ್ಕೆ ಶಮೀರ್ ಕುಲಕರ್ಣಿ ಸಂಗೀತ ಸಂಯೋಜನೆ, ವಿ ಮನೋಹರ್ ರವರ ಸಾಹಿತ್ಯ ಇರಲಿದೆ.

  ಅಂದಹಾಗೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ರವರು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.['ಸಕಾಲ' ಖ್ಯಾತಿಯ ಶಾಲಿನಿ ರಜನೀಶ್ ವರ್ಗಾವಣೆ]

  English summary
  Director Nikhil Manju who recently got a National award for his film 'Reservation' is all set to direct a film on senior IAS officer Shalini Rajneesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X