'ಕಿರಿಕ್ ಪಾರ್ಟಿ' ತೆಲುಗು ರಿಮೇಕ್ ಸಿನಿಮಾಗೆ ನಾಯಕ ಸಿಕ್ಕಾಯ್ತು!
ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ತೆಲುಗು ಭಾಷೆಗೆ ರಿಮೇಕ್ ಆಗುತ್ತಿದೆ. ಆದರೆ ತೆಲುಗಿನಲ್ಲಿ ಬರುತ್ತಿರುವ ಈ ಚಿತ್ರದಲ್ಲಿ ಯಾರು ನಟಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಟಾಲಿವುಡ್ 'ಕಿರಿಕ್ ಪಾರ್ಟಿ'ಗೆ ನಾಯಕ ಸಿಕ್ಕಾಗಿದೆ.
ಈ ಹಿಂದೆ 'ಹ್ಯಾಪಿ ಡೇಸ್' ಸಿನಿಮಾದಲ್ಲಿ ನಟಿಸಿದ್ದ ನಟ ನಿಖಿಲ್ ಈ ಚಿತ್ರದಲ್ಲಿ ನಾಯಕನಾಗಿದ್ದಾರೆ. ರಕ್ಷಿತ್ ಶೆಟ್ಟಿ ಪಾತ್ರದಲ್ಲಿ ನಿಖಿಲ್ ಮಿಂಚುವುದಕ್ಕೆ ಸಜ್ಜಾಗಿದ್ದಾರೆ. ಕಾಲೇಜ್ ದಿನಗಳ ಕಥೆಯ 'ಹ್ಯಾಪಿ ಡೇಸ್' ಚಿತ್ರದಲ್ಲಿ ನಟಿಸಿದ್ದ ನಿಖಿಲ್ 'ಕಿರಿಕ್ ಪಾರ್ಟಿ' ಚಿತ್ರದ ಕಥೆಗೆ ಚೆನ್ನಾಗಿ ಸೂಟ್ ಆಗುತ್ತಾರೆ ಎಂದು ಚಿತ್ರತಂಡ ಅವರನ್ನು ಆಯ್ಕೆ ಮಾಡಿದೆಯಂತೆ.

ಅಂದಹಾಗೆ, ಟಾಲಿವುಡ್ 'ಕಿರಿಕ್ ಪಾರ್ಟಿ' ಸಿನಿಮಾವನ್ನು ಶರಣ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಸಪ್ಟೆಂಬರ್ 10 ರಿಂದ ತೆಲುಗಿನ 'ಕಿರಿಕ್ ಪಾರ್ಟಿ' ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ಹೈದರಾಬಾದ್ ನಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ.
More from Filmibeat
English summary
Telugu actor Nikhil Siddharth will play lead role in 'Kirik Party' telugu remake movie.
kirik party remake rakshith shetty rashmika mandanna sandalwood tollywood ಕಿರಿಕ್ ಪಾರ್ಟಿ ರಿಮೇಕ್ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್


Click it and Unblock the Notifications











