For Quick Alerts
  ALLOW NOTIFICATIONS  
  For Daily Alerts

  ಮಂಡ್ಯದಲ್ಲಿ ಮತ್ತೆ ಸದ್ದು ಮಾಡಿದ 'ನಿಖಿಲ್ ಎಲ್ಲಿದ್ದೀಯಪ್ಪ'

  |
  ನಿಖಿಲ್ ಎಲ್ಲಿದ್ದೀಯಪ್ಪಾ ಟೈಟಲ್ ಯಾರಿಗೂ ಕೊಡಲ್ಲ ಎಂದ ನಿಖಿಲ್ | Oneindia Kannada

  ನಿಖಿಲ್ ಎಲ್ಲಿದ್ದೀಯಪ್ಪ....ಈ ಪದ ಎಷ್ಟರ ಮಟ್ಟಿಗೆ ಫೇಮಸ್ ಆಯ್ತು ಅಂದ್ರೆ ಬರಿ ಕರ್ನಾಟಕದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ, ವಿದೇಶಿಗರು ಈ ಡೈಲಾಗ್ ಹೊಡೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೌಡ್ ಮಾಡಿದ್ರು. ಇದರಿಂದ ನಿಖಿಲ್ ಕುಮಾರ್ ಜಗತ್ತಿನಾದ್ಯಂತ ಫೇಮಸ್ ಆದ್ರು ಅಂದ್ರೆ ನಂಬಲೇಬೇಕು.

  ಅಂತೂ ಇಂತೂ ಮಂಡ್ಯ ಎಲೆಕ್ಷನ್ ಮುಗಿತು. ಈಗ ಫಲಿತಾಂಶಕ್ಕಾಗಿ ಇಬ್ಬರು ಅಭ್ಯರ್ಥಿಗಳು ಕಾದು ಕುಂತಿದ್ದಾರೆ. ಚುನಾವಣೆ ಮುಗಿದ ಮೇಲೆ ಮಂಡ್ಯದಲ್ಲಿ ಕಾಣಿಸಿಕೊಳ್ಳದ ನಿಖಿಲ್ ಇಂದು ಮಂಡ್ಯಕ್ಕೆ ಎಂಟ್ರಿ ಕೊಟ್ಟಿದ್ದರು.

  ಮಂಡ್ಯದ ಕೆಆರ್ ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ 'ನಿಖಿಲ್ ಎಲ್ಲಿದ್ದೀಯಪ್ಪ' ಸಿನಿಮಾ ಬಗ್ಗೆಯೂ ಪ್ರಸ್ತಾಪ ಆಯಿತು.

  ಮಂಡ್ಯದಲ್ಲಿ ಸುಮಲತಾ ಗೆದ್ದರೇ ಜೋಡೆತ್ತುಗಳಿಗಾಗುವ ಅನುಕೂಲವೇನು?

  ''ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಟೈಟಲ್ ಗಾಗಿ ಫಿಲಂ ಚೇಂಬರ್ ನಲ್ಲಿ ಮುಗಿಬಿದ್ದಿದ್ದಾರಂತೆ. ನಿಖಿಲ್ ಯಾರೂ ಅಂತ ಗೊತ್ತಿರಲಿಲ್ಲ. ನಮ್ಮ ವಿರೋಧಿಗಳು ಈಗ ವರ್ಲ್ಡ್ ಫೇಮಸ್ ಮಾಡಿದ್ದಾರೆ. ಸಿನಿಮಾ ಟೈಟಲ್ ಯಾರಿಗೂ ಕೊಡಲ್ಲ. ನಾವೇ ಮಾಡ್ತೀವಿ'' ಎಂದು ನಿಖಿಲ್ ಹೇಳಿಕೊಂಡರು.

  ಇದೇ ವೇಳೆ ನಿಖಿಲ್ ಮಾತಿಗೆ ಮಾತು ಜೋಡಿಸಿದ ಸಚಿವ ಪುಟ್ಟರಾಜು ''ನಾನೇ ಸಿನಿಮಾ ನಿರ್ಮಾಣ ಮಾಡ್ತೀನಿ, ನಿಖಿಲ್ ಹೀರೋ'' ಎಂದು ಹೇಳಿದ್ರು. ಹೀಗಂತ ಗಂಭೀರವಾಗಿ ಹೇಳಿಲ್ಲ ಅಂದ್ರೂ ನಿಖಿಲ್ ಎಲ್ಲಿದ್ದೀಯಪ್ಪಗೆ ಹುಟ್ಟಿಕೊಂಡಿರುವ ಬೇಡಿಕೆಯಿಂದ ಯಾರಾದರೂ ಸಿನಿಮಾ ಮಾಡಬಹುದು ಎಂದು ಹೇಳಲಾಗ್ತಿದೆ.

  ಸದ್ಯಕ್ಕೆ ಎಲ್ಲರ ಚಿತ್ರ ಮಂಡ್ಯದತ್ತ ಬೀರಿದೆ. ಫಲಿತಾಂಶದ ಬಳಿಕ ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ಗೆ ಜೀವ ಬರುತ್ತಾ, ಸಿನಿಮಾ ಆಗುತ್ತಾ ಕಾದುನೋಡೋಣ.

  English summary
  Mandya jds mp candidate nikhil kumar has visit to kr pete and spoke about nikhil ellidiyappa title.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X