For Quick Alerts
  ALLOW NOTIFICATIONS  
  For Daily Alerts

  30X40 ಸೈಟು ಇದ್ದಿದ್ದರೆ...ಕುಣಿದಾಡಿದ ನಿಖಿತಾ

  By Rajendra
  |

  ತಾರೆ ನಿಖಿತಾ ತುಕ್ರಲ್ ಒಂಚೂರು ಗಡುಸಾಗಿಯೇ ಉತ್ತರಿಸುತ್ತಿದ್ದಾರೆ. 'ಸ್ನೇಹಿತರು' ಸಿನಿಮಾದಲ್ಲಿ ಒಂದು ಐಟಂ ಹಾಡಿನಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಆದರೆ ಇದನ್ನು ಐಟಂ ಸಾಂಗ್ ಎಂದರೆ ನಿಖಿತಾ ಸಹನೆಯ ಕಟ್ಟೆ ಹೊಡೆಯುತ್ತದೆ.

  'ಸ್ನೇಹಿತರು' ಚಿತ್ರದ ನಿರ್ದೇಶಕ ರಾಮ್ ನಾರಾಯಣ್ ಕೂಡ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅವರೂ ನಿಖಿತಾ ಮಾತಿಗೆ ಸೊಪ್ಪು ಹಾಕುತ್ತಿದ್ದಾರೆ. ಇದು ಸಂದರ್ಭಕ್ಕೆ ತಕ್ಕಂತೆ ಬರುವ ಹಾಡು ಎನ್ನುತ್ತಿದ್ದಾರೆ. ಈ ಹಾಡು ಪ್ರಮುಖವಾಗಿ ನಿಲ್ಲುತ್ತದೆಯಂತೆ. ಈ ಹಾಡಿಗಾಗಿ ಬೆಂಗಳೂರಿನ ಹೊರವಲಯದ ನೈಸ್ ರಸ್ತೆಯಲ್ಲಿ 20 ಟ್ರಾಕ್ಟರ್‌ ಟ್ರೇಲರ್‌ಗಳನ್ನು ಬಳಸಿಕೊಂಡು ಚಿತ್ರಿಸಲಾಗಿದೆ.

  ವಿಶೇಷ ಎಂದರೆ ಒಂದೇ ಇಂಜಿನ್ ಮೂಲಕ 20 ಟ್ರಾಕ್ಟರ್‌ ಟ್ರೇಲರ್‌ಗಳನ್ನು ಜೋಡಿಸಿ, ಅವುಗಳಿಗೆ ಸುಣ್ಣಬಣ್ಣದೊಂದಿಗೆ ಸಿಂಗರಿಸಿ ಚಿತ್ರೀಕರಿಸಲಾಗಿದೆ. ಗಿರಿಜನರ ವಸ್ತ್ರಗಳಲ್ಲಿ ಜೂನಿಯರ್ ಕಲಾವಿದರು ಪಾಲ್ಗೊಂಡಿದ್ದರು.

  ಅದೇ ರೀತಿಯ ವಸ್ತ್ರಗಳನ್ನು ಧರಿಸಿದ್ದ ನಿಖಿತಾ "30X40 ಸೈಟು ಇದ್ದರೆ..." ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡು ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತದೆ ಎನ್ನುತ್ತಾರೆ ನಿರ್ದೇಶಕರು. ನಿಖಿತಾರ ಹಾವ ಭಾವ, ಅವರ ವಸ್ತ್ರ ವೈವಿಧ್ಯ ಎಲ್ಲವೂ ನೋಡಿದರೆ ಯಾರಿಗೇ ಆಗಲಿ ಇದೊಂದು ಐಟಂ ಹಾಡು ಎಂಬ ಸಂದೇಹ ಬಂದೇ ಬರುತ್ತದೆ.

  ಈ ಹಾಡಿನ ಬಗ್ಗೆಯೂ ಹೆಚ್ಚಿನ ಡೀಟೇಲ್ಸ್ ಇಲ್ಲ. ಅವೆಲ್ಲ ವಿವರಗಳು ಗೊತ್ತಾಗಬೇಕಾದರೆ ಚಿತ್ರ ಬಿಡುಗಡೆಯವರೆಗೂ ಕಾಯಬೇಕು. ಇದಿಷ್ಟೇ ಅಲ್ಲದೆ ಚಿತ್ರದ ಸನ್ನಿವೇಶವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕಾಣಿಸಲಿದ್ದಾರೆ. ಈ ಚಿತ್ರದಲ್ಲಿ ಅತಿಥಿ ಪಾತ್ರ ಅವರದು. ಅದು ಏನು ಎತ್ತ ಎಂದು ಗೊತ್ತಾಗಬೇಕಾದರೆ ಚಿತ್ರ ನೋಡಲೇಬೇಕು ಎನ್ನುತ್ತಿದೆ ಚಿತ್ರತಂಡ.

  ಸ್ನೇಹಿತರು ಬಹುತಾರಾಗಣದ ಚಿತ್ರ. ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ತರುಣ್ ಹಾಗೂ ರವಿಶಂಕರ್ ಚಿತ್ರದ ನಾಲ್ವರು ನಾಯಕರು. ಈ ನಾಲ್ಕು ಮಂದಿ ನಾಯರ ಜೊತೆ ನಿಖಿತಾ ಐಟಂ ಹಾಡಿರುತ್ತದೆ. "ನಾಯಕಿಯರು ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದರೆ ತಪ್ಪೇನಿಲ್ಲ" ಎಂದಿದ್ದರು ಒಮ್ಮೆ ನಿಖಿತಾ. ಆದರೆ ಈಗ ಇದು ಐಟಂ ಹಾಡು ಅಲ್ಲವೇ ಅಲ್ಲ ಎನ್ನುತ್ತಿದ್ದಾರೆ.

  ಈ ಚಿತ್ರದಲ್ಲಿ ಪ್ರಣೀತಾ ನಾಯಕಿ. ವಿ ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ನಿಖಿತಾರ ಐಟಂ ಹಾಡು ಕ್ಲೈಮ್ಯಾಕ್ಸ್‌ಗೂ ಮುನ್ನ ಬರುತ್ತದಂತೆ. ಈ ಹಾಡನ್ನು ವಿಶೇಷವಾಗಿ ಚಿತ್ರೀಕರಿಸಲಾಗಿದೆ ಎಂದಿದ್ದಾರೆ ಚಿತ್ರದ ನಿರ್ದೇಶಕ ರಾಮ್ ನಾರಾಯಣ್. (ಒನ್‌ಇಂಡಿಯಾ ಕನ್ನಡ)

  English summary
  Actress Nikita Thukral clarifies that, she is not doing item song in Kannada film Snehitaru. Earlier it is said that the actress is doing item song in this film. Challenging star Darshan was roped in to play a special role in the new movie Snehitaru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X