»   » ನಟಿ ನಿಖಿತಾ ತುಕ್ರಾಲ್ ಅವರ ಮುದ್ದಾದ ಹೆಣ್ಣು ಮಗು ನೋಡಿ

ನಟಿ ನಿಖಿತಾ ತುಕ್ರಾಲ್ ಅವರ ಮುದ್ದಾದ ಹೆಣ್ಣು ಮಗು ನೋಡಿ

Posted By:
Subscribe to Filmibeat Kannada
ನಿಕಿತಾ ಟುಕ್ರಾಲ್‌‌‌‌‌ ಈಗ ಏನ್ ಮಾಡ್ತಿದ್ದಾರೆ | Filmibeat Kannada

ಕನ್ನಡದ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಿದ್ದ ನಾಯಕಿ ನಿಖಿತಾ ತುಕ್ರಾಲ್ ಇತ್ತೀಚಿಗಷ್ಟೆ 'ರಾಜಸಿಂಹ' ಸಿನಿಮಾವನ್ನು ಮಾಡಿದ್ದರು. ಅಂದಹಾಗೆ, ಈಗ ನಿಖಿತಾ ತಮ್ಮ ಅಭಿಮಾನಿಗಳ ಜೊತೆಗೆ ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಿಖಿತಾ ತಾಯಿ ಆಗಿದ್ದಾರೆ. ತಮ್ಮ ಮುದ್ದಾದ ಮಗುವನ್ನು ಅಭಿಮಾನಿಗಳಿಗೆ ಪರಿಚಯ ಮಾಡಿದ್ದಾರೆ.

ಮುಂಬೈ ಮೂಲದ ಉದ್ಯಮಿ ಗಗನ್ ದೀಪ್ ಸಿಂಗ್ ಜೊತೆಗೆ ನಟಿ ನಿಖಿತಾ ಅವರ ವಿವಾಹ ಅಕ್ಟೋಬರ್ 16, 2016 ರಂದು ನಡೆದಿತ್ತು. ಆರು ತಿಂಗಳ ಹಿಂದೆ ನಿಖಿತಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಈ ವಿಷಯ ಅನೇಕರಿಗೆ ತಿಳಿದಿರಲಿಲ್ಲ. ಆದರೆ ಈಗ ಸ್ವತಃ ನಿಖಿತಾ ತಾಯಿ ಆಗಿರುವ ಸಂತಸವನ್ನು ಅವರ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಮಗು ಹೆಸರು ಜಸ್ಮಿರಾ

ನಟಿ ನಿಖಿತಾ ಮತ್ತು ಗಗನ್ ದೀಪ್ ಸಿಂಗ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ನಿಖಿತಾ ತಮ್ಮ ಮಗುವಿಗೆ ಜಸ್ಮಿರಾ ಎಂದು ಹೆಸರಿಟ್ಟಿದ್ದಾರೆ. ಜಸ್ಮಿರಾಗೆ ಸದ್ಯ ಆರು ತಿಂಗಳು ತುಂಬಿದ್ದು ಮಗು ತುಂಬ ಮುದ್ದು ಮುದ್ದಾಗಿದೆ.

ಯಾರಿಗೂ ತಿಳಿದಿರಲಿಲ್ಲ

ನಿಖಿತಾ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಮಗುವಿನ ಫೋಟೋ ಹಾಕಿದ್ದು, '' ನನ್ನ ಮಗುವಿಗೆ ಈಗ ಆರು ತಿಂಗಳು ತುಂಬಿದೆ. ಇಷ್ಟು ದಿನ ನಾನು ಹೊರಗೆ ಹೋಗುವಾಗ ಜಸ್ಮಿರಾಳನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದೆ. ಆದ್ದರಿಂದ ನನಗೆ ಮಗು ಆಗಿರುವುದು ಅನೇಕರಿಗೆ ತಿಳಿದಿರಲಿಲ್ಲ. ಆದರೆ ಎಲ್ಲರಿಗೂ ಪರಿಚಯಿಸಲು ಇದು ಸೂಕ್ತ ಸಮಯ ಆದ್ದರಿಂದ ಅವಳ ಫೊಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದೇನೆ'' ಎಂದು ನಿಖಿತಾ ತಿಳಿಸಿದ್ದಾರೆ.

ಗರ್ಬಿಣಿ ಇರುವಾಗಲು ಚಿತ್ರೀಕರಣದಲ್ಲಿ ಭಾಗಿ

ನಿಖಿತಾ 'ರಾಜಸಿಂಹ' ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಅವರು 7 ತಿಂಗಳ ಗರ್ಬಿಣಿ ಆಗಿದ್ದರಂತೆ. ಆದರೂ ಸಹ ಸಿನಿಮಾಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದಂತೆ. ಈ ವೇಳೆ 'ರಾಜಸಿಂಹ' ಚಿತ್ರತಂಡ ನನಗೆ ತುಂಬ ಸಹಾಯ ಮಾಡಿದೆ ಎಂದು ಅವರಿಗೆ ಧನ್ಯವಾದ ಹೇಳಿದ್ದರೆ.

ಸ್ಟಾರ್ ಸಿನಿಮಾದಲ್ಲಿ ನಟಿದಿದ್ದ ನಿಖಿತಾ

ನಿಖಿತಾ ಕನ್ನಡದ ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್, ಉಪೇಂದ್ರ, ದರ್ಶನ್ ಅವರ ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ಬಿಗ್ ಬಾಸ್ ಕನ್ನಡ ಸೀಸನ್ 1 ಕಾರ್ಯಕ್ರಮದ ಸ್ಪರ್ಧಿ ಆಗಿದ್ದರು.

ಚಿತ್ರಗಳು: ಸಿಂಗ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ನಿಖಿತಾ ತುಕ್ರಾಲ್

English summary
actress Nikita Thukral shares her daughter Jasmyrra photos in her twitter account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada