For Quick Alerts
  ALLOW NOTIFICATIONS  
  For Daily Alerts

  ನಿಂಬೆಹುಳಿ ಚಿತ್ರಕ್ಕೆ ಬೆಟ್ಟಿಂಗ್ ಹಗರಣವೇ ಸ್ಪೂರ್ತಿ

  By ಜೇಮ್ಸ್ ಮಾರ್ಟಿನ್
  |

  ಹೇಮಂತ್ ಹೆಗಡೆ ನಿರ್ದೇಶನದ 'ನಿಂಬೆಹುಳಿ' ಚಿತ್ರ ಕೊನೆಗೂ ಬಿಡುಗಡೆ ಸಿದ್ಧವಾಗಿದೆ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತೀಯ ಸಿನಿಮಾವೊಂದರ ನಿರ್ಮಾಣಕ್ಕೆ ಕೈಹಾಕಿರುವ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ಅವರಿಗೆ ಅಂತೂ ಇಂತೂ ಕನ್ನಡ ಸಿನಿಮಾ ನಿರ್ಮಿಸಿ ಬಿಡುಗಡೆ ಮಾಡುವ ವೇದನೆಯ ಅನುಭವವಾಗಿದೆ. ಈ ನಡುವೆ ನಿಂಬೆಹುಳಿ ಚಿತ್ರಕಥೆ ಬಗ್ಗೆ ಇದ್ದ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಈ ಚಿತ್ರಕ್ಕೆ ಕ್ರಿಕೆಟ್ ಬೆಟ್ಟಿಂಗ್ ಹಗರಣವೇ ಸ್ಪೂರ್ತಿ ಎಂಬ ವಿಷಯ ಬಹಿರಂಗಗೊಂಡಿದೆ.

  ನಿಂಬೆಹುಳಿ ಚಿತ್ರಕ್ಕೆ ಅಡ್ಡಗಾಲು ಹಾಕಿದ್ದ ದ್ರಾವಿಡ್ ಮುನೇತ್ರ ಕಳಗಂ (ಡಿಎಂಕೆ) ಪಕ್ಷಕ್ಕೆ ಮುಖಭಂಗವಾಗಿದೆ. ನಿಂಬೆಹುಳಿ ಚಿತ್ರದಲ್ಲಿರುವ ಒಂದು ಪಾತ್ರ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷ ಎಂ. ಕರುಣಾನಿಧಿ ಅವರನ್ನು ಹೋಲುತ್ತದೆ ಇದರಿಂದ ನಮಗೆ ಭಾರಿ ಅಪಮಾನವಾಗಿದೆ. ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಬಾರದು ಎಂದು ಮದ್ರಾಸ್ ಹೈಕೋರ್ಟಿನಲ್ಲಿ ಡಿಎಂಕೆ ಅರ್ಜಿ ಸಲ್ಲಿಸಿತ್ತು.

  ಆದರೆ, ಡಿಎಂಕೆ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ್ದು, ನಿಂಬೆಹುಳಿ ಚಿತ್ರ ಬಿಡುಗಡೆಗೆ ಇರುವ ಅಡ್ಡಿ ಆತಂಕ ನಿವಾರಣೆಗೊಂಡಿದೆ. ಈ ವಿಷಯವನ್ನು ಸ್ವತಃ ಚಿತ್ರದ ನಾಯಕ, ನಿರ್ದೇಶಕ ಹೇಮಂತ್ ಹೆಗಡೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಹಿರಂಗಗೊಳಿಸಿದ್ದು, ಆಕ್ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವವರಿಗೆ ತಕ್ಕ ಪಾಠ. ನನಗೆ ಸಕತ್ ಖುಷಿಯಾಗಿದೆ ಎಂದಿದ್ದಾರೆ. ಚಿತ್ರದ ಕಥೆ ಬಗ್ಗೆ ಹೇಮಂತ್ ಮತ್ತೇನು ಹೇಳಿದ್ದಾರೆ ಮುಂದೆ ಓದಿ...

  ನಿಂಬೆಹುಳಿ ಬೆಟ್ಟಿಂಗ್ ಕಥೆ ಹುಟ್ಟಿದ್ದು ಹೇಗೆ?

  ನಿಂಬೆಹುಳಿ ಬೆಟ್ಟಿಂಗ್ ಕಥೆ ಹುಟ್ಟಿದ್ದು ಹೇಗೆ?

  ನನ್ನ ಫೇವರೀಟ್ ಕ್ರಿಕೆಟರ್ ಅಜಯ್ ಜಡೇಜ ಹೆಸರು ಕ್ರಿಕೆಟ್ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ನಲ್ಲಿ ಕೇಳಿಬಂದಿದ್ದು ನನಗೆ ತುಂಬಾ ಆಘಾತಕಾರಿಯಾಯಿತು. ಅಂದಿನಿಂದ ಬೆಟ್ಟಿಂಗ್ ದಂಧೆ ಬಗ್ಗೆ ಅಧ್ಯಯನ ಶುರು ಮಾಡಿದೆ. ಈ ಚಿತ್ರದ ಆರಂಭದಲ್ಲಿ ಬೆಟ್ಟಿಂಗ್ ನ ಹಲವು ಮಜಲುಗಳನ್ನು ತೋರಿಸಲಾಗುತ್ತದೆ ಎಂದು ನಿರ್ದೇಶಕ ಹೇಮಂತ್ ಹೆಗದೆ ಹೇಳಿದ್ದಾರೆ.

  ನಿಂಬೆಹುಳಿ ಬೆಟ್ಟಿಂಗ್ ಕಥೆಯಷ್ಟೆ ಅಲ್ಲವಂತೆ

  ನಿಂಬೆಹುಳಿ ಬೆಟ್ಟಿಂಗ್ ಕಥೆಯಷ್ಟೆ ಅಲ್ಲವಂತೆ

  ಹೇಗೆ ಕ್ರಿಕೆಟ್ ಬೆಟ್ಟಿಂಗ್ ಜಾಲ ಬೇರೆ ಕ್ಷೇತ್ರಗಳಿಗೂ ಹಬ್ಬುತ್ತದೆ ಜನ ಸಾಮಾನ್ಯರಿಗೆ ಹೇಗೆ ಇದರ ಪರಿಣಾಮವಾಗಲಿದೆ ಎಂಬುದನ್ನು ಸೂಚ್ಯವಾಗಿ ಹೇಳಲಾಗಿದೆ. ರಿಯಲ್ ಎಸ್ಟೇಟ್ ಸಂಸ್ಥೆಗಳು ಹೇಗೆ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡಿವೆ ಎಂಬುದನ್ನು ತೋರಿಸಲಾಗಿದೆ.

  ನಿಂಬೆಹುಳಿ ರಾಮ ರಾಮಾ ಹಾಡು

  ನಿಂಬೆಹುಳಿ ರಾಮ ರಾಮಾ ಹಾಡು

  'ನಿಂಬೆಹುಳಿ' ಚಿತ್ರದ ಹಾಡು "ರಾಮ ರಾಮಾ ಶ್ರೀರಾಮ... ಫಸ್ಟ್ ನೈಟೇ ಟ್ರಾಫಿಕ್ ಜಾಮಾ..." ಎಂಬ ಹಾಡು 'ಯೂಟ್ಯೂಬ್' ನಲ್ಲಿ ಹೊಸ ಹವಾ ಎಬ್ಬಿಸಿದೆ. ಜನಪ್ರಿಯ ಹನಿಗವಿ ಎಚ್ ದುಂಡಿರಾಜ್ ಬರೆದು ವೀರ್ ಸಮರ್ಥ್ ಸಂಗೀತ ಸಂಯೋಜಿಸಿರುವ ಈ ಹಾಡು ಚಿತ್ರಕ್ಕೆ ಒಳ್ಳೆ ಮೈಲೇಜ್ ಕೊಟ್ಟಿತ್ತು ಜತೆಗೆ ರಾಮ ಭಕ್ತರ ಕೋಪಕ್ಕೂ ತುತ್ತಾಗಿತ್ತು.

  ವಿಶ್ವಮಟ್ಟದಲ್ಲಿ ನಿಂಬೆಹುಳಿ ಕಾಮಿಡಿ ಪೋಸ್ಟರ್

  ವಿಶ್ವಮಟ್ಟದಲ್ಲಿ ನಿಂಬೆಹುಳಿ ಕಾಮಿಡಿ ಪೋಸ್ಟರ್

  ವಿಶ್ವದ ಟಾಪ್ 25 ಕಾಮಿಡಿ ಚಿತ್ರ ಪೋಸ್ಟರ್ ಗಳ ಪಟ್ಟಿಯಲ್ಲಿ 'ನಿಂಬೆಹುಳಿ' ಚಿತ್ರದ ಪೋಸ್ಟರ್ ಕೂಡಾ ಸ್ಥಾನ ಪಡೆದಿತ್ತು. ವಿಶ್ವದ ಅಗ್ರಗಣ್ಯ ಕಾಮಿಡಿ ಚಿತ್ರಗಳ ಸಾಲಿನಲ್ಲಿ ಕನ್ನಡದ ಏಕೈಕ ಎಂಟ್ರಿಯಾಗಿ ನಿಂಬೆಹುಳಿ ಕಾಣಿಸಿಕೊಂಡಿತ್ತು. ಉಳಿದಂತೆ ಹಿಂದಿ ಚಿತ್ರ 3 ಈಡಿಯಟ್ಸ್ ಪೋಸ್ಟರ್ ಕೂಡಾ ಸ್ಥಾನ ಪಡೆದಿತ್ತು. [ವಿವರ: ಚಾಪ್ಲಿನ್ ಚಿತ್ರಗಳ ಸಾಲಿನಲ್ಲಿನಿಂಬೆಹುಳಿ]

  ತಮಿಳಿನಲ್ಲಿ ರಿಮೇಕ್ ಗಾಗಿ ಭಾರಿ ಬೇಡಿಕೆ

  ತಮಿಳಿನಲ್ಲಿ ರಿಮೇಕ್ ಗಾಗಿ ಭಾರಿ ಬೇಡಿಕೆ

  ಹೇಮಂತ್ ಹೆಗ್ಡೆ ಅವರ ನಿಂಬೆಹುಳಿ ಚಿತ್ರ ಬಿಡುಗಡೆಗೆ ಮುನ್ನವೇ ಭಾರಿ ಕುತೂಹಲ ಕೆರಳಿಸಿದ್ದು, ತಮಿಳಿನಲ್ಲಿ ಚಿತ್ರವನ್ನು ರಿಮೇಕ್ ಮಾಡಿ ಸೂರ್ಯ ತಮ್ಮ ಕಾರ್ತಿ ಶಿವಕುಮಾರ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ತಮಿಳು ನಿರ್ಮಾಪಕರು ಮುಂದಾಗಿದ್ದರು. ಖ್ಯಾತ ನಿರ್ದೇಶಕ ಶಂಕರ್ ಅವರ ಸಹಾಯಕ ಕೆ ಮಾದೇಶ್ ಅವರು ಈ ಚಿತ್ರದ ಹಕ್ಕು ಪಡೆಯಲು ಯತ್ನಿಸಿದ್ದರು.

  ತಮಿಳುನಾಡಿನ ಡಿಎಂಕೆ ವಿರೋಧ ಏಕೆ?

  ತಮಿಳುನಾಡಿನ ಡಿಎಂಕೆ ವಿರೋಧ ಏಕೆ?

  ಚಿತ್ರದಲ್ಲಿ 'ಕರುಣಾ ರಂಗ' ಎಂಬ ಪಾತ್ರವಿದೆ. ಇದನ್ನು ಬುಲೆಟ್ ಪ್ರಕಾಶ್ ಮಾಡಿದ್ದಾರೆ. ಪಾತ್ರದ ವೇಷ ಭೂಷಣ ಆ ಕಪ್ಪು ಕನ್ನಡಕ ಎಲ್ಲವೂ ಥೇಟ್ ಕರುಣಾನಿಧಿ ಅವರನ್ನು ಹೋಲುತ್ತದೆ ಎನ್ನಲಾಗಿದೆ. ಈ ವಿಷಯ ತಿಳಿದ ಡಿಎಂಕೆ ಮುಖಂಡರು ಚಿತ್ರ ಬಿಡುಗಡೆಗೆ ತಡೆಯೊಡ್ಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಈಗ ತಮಿಳುನಾಡಿನ ಹೈಕೋರ್ಟ್ ಈ ಚಿತ್ರಕ್ಕೆ ತಡೆ ತೆರವುಗೊಳಿಸಿದೆ.

  English summary
  Sandalwood's forthcoming movie Nimbehuli, which is facing various hurdles for its release from many months is in the limelight again. As rumours mills were doing rounds about the movie that it is based on infamous Indian cricket betting scandal, which took place in 2002.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X