ಯುಗಾದಿ ಹಬ್ಬದಂದು ನಿಮ್ಮೆಲ್ಲರ ಮುಂದೆ ಬಂದ 'ಅಯೋಗ್ಯ' ಟೀಸರ್
Recommended Video

ಯುಗಾದಿ ಹಬ್ಬದ ಪ್ರಯುಕ್ತ ಕನ್ನಡಿಗರಿಗೆ 'ಅಯೋಗ್ಯ' ಚಿತ್ರತಂಡ ಉಡುಗೊರೆ ನೀಡಿದೆ. ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ 'ಅಯೋಗ್ಯ' ಚಿತ್ರದ ಟೀಸರ್ ಇವತ್ತು ಅಂದ್ರೆ ಯುಗಾದಿ ಹಬ್ಬದ ಶುಭ ಸಂದರ್ಭದಂದು ಬಿಡುಗಡೆ ಆಗಿದೆ.
''ಗುಂಪಲ್ಲಿದ್ರೂ ಗುರುತು ಹಿಡಿಯೋ ಹೈಟು, ಕಬ್ಬಿಣದ ಮೈಕಟ್ಟು, ಹುರಿ ಮೀಸೆ, ಹದ್ದಿನ ಕಣ್ಣು, ಸೊಗಡು ತುಂಬಿರೋ ರಗಡ್ ಬಾಡಿ'' ಎಂಬ ಪಂಚಿಂಗ್ ಡೈಲಾಗ್ಸ್ ಮೂಲಕ ಹೀರೋ 'ಅಯೋಗ್ಯ' ಅಲಿಯಾಸ್ 'ಸಿದ್ಧ'ನ ಪರಿಚಯ ಟೀಸರ್ ನಲ್ಲಿ ಮಾಡಿಕೊಡಲಾಗಿದೆ.
ಡೈಲಾಗ್ ಗಳಿಗೆ ತಕ್ಕಂತೆ 'ಅಯೋಗ್ಯ' ಚಿತ್ರಕ್ಕಾಗಿ ನಟ ಸತೀಶ್ ನೀನಾಸಂ ಬಾಡಿ ಬಿಲ್ಡ್ ಮಾಡಿದ್ದಾರೆ. ಹೆಸರಿಗೆ 'ಅಯೋಗ್ಯ'ನಾಗಿದ್ದರೂ, ಹೀರೋ ಸತೀಶ್ ಮಾತ್ರ ರಫ್ ಅಂಡ್ ಟಫ್ ಆಗಿ ಕಾಣ್ತಾರೆ.

ಅಂದ್ಹಾಗೆ, 'ಅಯೋಗ್ಯ' ಚಿತ್ರದಲ್ಲಿ ಸತೀಶ್ ನೀನಾಸಂ ಗ್ರಾಮ ಪಂಚಾಯತಿ ಸದಸ್ಯ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದರೂ, ಟೀಸರ್ ನಲ್ಲಿ ಸಿದ್ದ ಇನ್ನೊಬ್ಬರ ಮೈಮೂಳೆ ಮುರಿಯುವುದು ಯಾಕೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ.
'ಅಯೋಗ್ಯ'ನಿಗೆ ನಾಯಕಿ ಆಗಿರುವುದು ಡಿಂಪಲ್ ಕ್ವೀನ್ ರಚಿತಾ ರಾಮ್. ಇದೀಗಷ್ಟೇ ಬಿಡುಗಡೆ ಆಗಿರುವ 'ಅಯೋಗ್ಯ' ಟೀಸರ್ ನಲ್ಲಿ ಸಿದ್ದ ಪಾತ್ರದ ಬಗ್ಗೆ ಮಾತ್ರ ಇಂಟ್ರೋಡಕ್ಷನ್ ನೀಡಲಾಗಿದೆ. ಹೀಗಾಗಿ, ರಚಿತಾ ರಾಮ್ ನಿಮ್ಮ ಕಣ್ಣಿಗೆ ಬೀಳುವುದಿಲ್ಲ.
'ಅಯೋಗ್ಯ' ಚಿತ್ರಕ್ಕೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಟೀಸರ್ ನಿಂದ ಸೌಂಡ್ ಮಾಡುತ್ತಿರುವ 'ಅಯೋಗ್ಯ' ತೆರೆಗೆ ಬರಲು ಇನ್ನೂ ಟೈಮ್ ಇದೆ.


Click it and Unblock the Notifications











