For Quick Alerts
  ALLOW NOTIFICATIONS  
  For Daily Alerts

  4 ದಿನದ ಕಲೆಕ್ಷನ್: ದಾಖಲೆ ಬರೆದ 'ನಿನ್ನ ಸನಿಹಕೆ'

  |

  ಡಾ ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಹಾಗೂ ಸೂರಜ್ ಗೌಡ ನಟಿಸಿರುವ 'ನಿನ್ನ ಸನಿಹಕೆ' ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಥಿಯೇಟರ್‌ಗೆ 100% ಅನುಮತಿ ಸಿಕ್ಕ ನಂತರ ತೆರೆಕಂಡಿರುವ ಈ ಚಿತ್ರ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣ್ತಿದೆ. ವಿಶೇಷವಾಗಿ ಮಲ್ಟಿಫ್ಲೆಕ್ಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

  ಫಿಲ್ಮಿಬೀಟ್ ಕನ್ನಡಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ನಿನ್ನ ಸನಿಹಕೆ ಚಿತ್ರ ಮೊದಲ ನಾಲ್ಕು ದಿನದಲ್ಲಿ 95.22 ಲಕ್ಷ ಗಳಿಸಿ ದಾಖಲೆ ಬರೆದಿದೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ, ಚಿತ್ರಮಂದಿರಗಳಿಗೆ 100% ನೀಡಿದ ಮೇಲೆ ಕನ್ನಡ ಸಿನಿಮಾವೊಂದು ಈ ಮಟ್ಟದ ಗಳಿಕೆ ಕಂಡಿರುವುದಕ್ಕೆ ಗಾಂಧಿನಗರ ಸಂತಸ ವ್ಯಕ್ತಪಡಿಸಿದೆ.

  ರಾಜ್ ಮೊಮ್ಮಗಳ 'ನಿನ್ನ ಸನಿಹಕೆ' ಚಿತ್ರಕ್ಕೆ ಮೊದಲ ದಿನವೇ ವಿಘ್ನರಾಜ್ ಮೊಮ್ಮಗಳ 'ನಿನ್ನ ಸನಿಹಕೆ' ಚಿತ್ರಕ್ಕೆ ಮೊದಲ ದಿನವೇ ವಿಘ್ನ

  ವಾರಾಂತ್ಯದಲ್ಲಿ ನಿನ್ನ ಸನಿಹಕೆ ಚಿತ್ರಕ್ಕೆ ಒಳ್ಳೆಯ ರೆಸ್‌ಪಾನ್ಸ್ ಸಿಕ್ಕಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ದಿನದಿಂದ ದಿನಕ್ಕೆ ಕಲೆಕ್ಷನ್ಸ್ ಹೆಚ್ಚಾಗ್ತಿದ್ದು, ಸಿಂಗಲ್ ಸ್ಕ್ರೀನ್ ಗಳಲ್ಲೂ ಸೌಂಡು ಜೋರಾಗಿದೆ.

  ಪ್ರೇಕ್ಷಕ ಪ್ರಭುವೇ ಕಾಪಾಡಬೇಕು

  ಈ ವಾರ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ನಿನ್ನ ಸನಿಹಕೆ ಚಿತ್ರಕ್ಕೆ ತೊಂದರೆಯಾಗುವ ಆತಂಕ ಎದುರಾಗಿದೆ. ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಹಾಗೂ ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ಚಿತ್ರಗಳು ಅಕ್ಟೋಬರ್ 14ಕ್ಕೆ ಒಟ್ಟಿಗೆ ತೆರೆಗೆ ಬರ್ತಿದೆ. ಈ ಸಿನಿಮಾಗಳ ಎಂಟ್ರಿ ಹಿನ್ನೆಲೆ ನಿನ್ನ ಸನಿಹಕೆ ಪ್ರದರ್ಶನ ಕಾಣ್ತಿರುವ ಚಿತ್ರಮಂದಿರಗಳು ಸಿನಿಮಾ ಎತ್ತಂಗಡಿ ಮಾಡುವ ಸಾಧ್ಯತೆ ಇದೆ. ಇದು ಸೂರಜ್ ಚಿತ್ರಕ್ಕೆ ತಲೆ ನೋವು ತರಿಸಿದೆ.

  ಮೊದಲ ದಿನ ವಿಘ್ನ

  ಅಕ್ಟೋಬರ್ 8 ರಂದು ನಿನ್ನ ಸನಿಹಕೆ ಚಿತ್ರ ಬಿಡುಗಡೆಯಾಗಿತ್ತು. ಮೊದಲ ದಿನ ಮೊದಲ ಶೋಗೆ ವಿಘ್ನ ಉಂಟಾಗಿತ್ತು. ತಾಂತ್ರಿಕ ದೋಷದಿಂದ ಕೆಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ 'ನಿನ್ನ ಸನಿಹಕೆ'‌ ಚಿತ್ರದ ಶೋ‌ ಸ್ಥಗಿತವಾಗಿತ್ತು. ಇದರಿಂದ ಚಿತ್ರತಂಡ ತೀವ್ರ ಬೇಸರ ವ್ಯಕ್ತಪಡಿಸಿತ್ತು.

  ಪ್ರೀಮಿಯರ್ ಪ್ರದರ್ಶನದಲ್ಲಿ ರಾಜ್ ಕುಟುಂಬ

  ಗುರುವಾರ ರಾತ್ರಿ ಬೆಂಗಳೂರಿನ ಒರೆಯಾನ್ ಮಾಲ್‌ನಲ್ಲಿ ನಿನ್ನ ಸನಿಹಕೆ ಚಿತ್ರದ ಪ್ರೀಮಿಯರ್ ಪ್ರದರ್ಶನ ಆಯೋಜಿಸಲಾಗಿತ್ತು. ಈ ಶೋಗೆ ಇಡೀ ರಾಜ್ ಕುಟುಂಬ ಭಾಗಿಯಾಗಿತ್ತು. ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸಿನಿಮಾ ನೋಡಿ ಧನ್ಯಾ ಹಾಗೂ ಸೂರಜ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

  ಧನ್ಯಾ ನಾಯಕಿಯಾಗಿ ನಟಿಸಿರುವ 'ನಿನ್ನ ಸನಿಹಕೆ' ಚಿತ್ರದಲ್ಲಿ ಸೂರಜ್ ಗೌಡ ನಾಯಕನಾಗಿ ನಟಿಸಿ ಸ್ವತಃ ಅವರೇ ನಿರ್ದೇಶಿಸಿದ್ದಾರೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ರಘು ದೀಕ್ಷಿತ್ ಸಂಗೀತ ಒದಗಿಸಿದ್ದಾರೆ.

  English summary
  Suraj gowda and dhanya ramkumar starrer Ninna Sanihakke Box Office Collections: movie collected Rs 95.22 Lakhs in 4 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X