twitter
    For Quick Alerts
    ALLOW NOTIFICATIONS  
    For Daily Alerts

    ಹೊಂಬಾಳೆ ನಿರ್ಮಿಸಿದ 7 ಸಿನಿಮಾಗಳ ಕಲೆಕ್ಷನ್ ₹2000 ಕೋಟಿ: ಯಾವ್ಯಾವ ಸಿನಿಮಾ ಗಳಿಕೆ ಎಷ್ಟೆಷ್ಟು?

    |

    ಹೊಂಬಾಳೆ ಫಿಲ್ಮ್ಸ್ ಸಿನಿಮಾ ನಿರ್ಮಾಣಕ್ಕೆ ಇಳಿದು ಹೆಚ್ಚು ಕಡಿಮೆ 9 ವರ್ಷಗಳಾಗಿವೆ. 2014ರಲ್ಲಿ 'ನಿನ್ನಿಂದಲೇ' ಸಿನಿಮಾದಿಂದ ನಿರ್ಮಾಣಕ್ಕೆ ಮುಂದಾಗಿದ್ದ ಹೊಂಬಾಳೆ ಫಿಲ್ಮ್ಸ್ 'ಕಾಂತಾರ'ವರೆಗೂ ಬಂದು ನಿಂತಿದೆ.

    ಕಳೆದ 9 ವರ್ಷಗಳಲ್ಲಿ ಹೊಂಬಾಳೆ ಸಾಧನೆ ಕಮ್ಮಿಯೇನು ಇಲ್ಲ. ಕನ್ನಡದ ನಿರ್ಮಾಣ ಸಂಸ್ಥೆಯೊಂದು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 'ಕೆಜಿಎಫ್', 'ಕಾಂತಾರ' ಅಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲಾಭ ತಂದುಕೊಟ್ಟಿದೆ.

    ಮಿಸ್ಟರ್ 360 ಎಬಿ ಡಿವಿಲಿಯರ್ಸ್‌ಗೂ 'ಕಾಂತಾರ' ಹುಚ್ಚು ಹಿಡಿಸಿದ ರಿಷಬ್ ಶೆಟ್ಟಿ!ಮಿಸ್ಟರ್ 360 ಎಬಿ ಡಿವಿಲಿಯರ್ಸ್‌ಗೂ 'ಕಾಂತಾರ' ಹುಚ್ಚು ಹಿಡಿಸಿದ ರಿಷಬ್ ಶೆಟ್ಟಿ!

    2022 ಹೊಂಬಾಳೆ ಫಿಲ್ಮ್ಸ್‌ಗೆ ಮರೆಯಲಾರದ ವರ್ಷ. ಹಿಂದೆಂದಿಗಿಂತಲೂ ಹೆಚ್ಚು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೋಡಿದೆ. ಅಲ್ಲದೆ ಸುಮಾರು 9 ವರ್ಷಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಅಕೌಂಟ್‌ಗೆ ಸುಮಾರು 2 ಸಾವಿರ ಕೋಟಿ ರೂಪಾಯಿ ಸೇರಿದೆ. ಅಷ್ಟಕ್ಕೂ ಹೊಂಬಾಳೆ ಈ ಒಂಬತ್ತು ವರ್ಷಗಳಲ್ಲಿ ನಿರ್ಮಿಸಿದ ಏಳು ಸಿನಿಮಾಗಳಲ್ಲಿ ಯಾವ್ಯಾವ ಸಿನಿಮಾ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

    ಮೊದಲ ಸಿನಿಮಾ 'ನಿನ್ನಿಂದಲೇ' ಸೋಲು

    ಮೊದಲ ಸಿನಿಮಾ 'ನಿನ್ನಿಂದಲೇ' ಸೋಲು

    ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಈಗ ಇಡೀ ದೇಶಕ್ಕೆ ಗೊತ್ತಿದೆ. 'ಕೆಜಿಎಫ್', 'ಕಾಂತಾರ' ಬಳಿಕ ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ಮಾಣ ಸಂಸ್ಥೆ ಎನಿಸಿಕೊಂಡಿದೆ. ಆದರೆ, ಈ ಸಿನಿಮಾ ನಿರ್ಮಿಸಿದ ಮೊದಲ 'ನಿನ್ನಿಂದಲೇ' ಹೀನಾಯವಾಗಿ ಸೋಲುಂಡಿತ್ತು. ಪುನೀತ್ ರಾಜ್‌ಕುಮಾರ್ ನಟಿಸಿದ್ದ ಈ ಸಿನಿಮಾವನ್ನು ಜಯಂತ್ ಸಿ ಪಾರಂಜೆ ನಿರ್ದೇಶಿಸಿದ್ದರು. ಆದರೆ, 'ನಿನ್ನಿಂದಲೇ' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಎರಡನೇ ಸಿನಿಮಾ 'ಮಾಸ್ಟರ್ ಪೀಸ್' ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆ ಮಾಡಿದಷ್ಟು ಗಳಿಕೆ ಮಾಡಲಿಲ್ಲ. ಮೊದಲ ಎರಡು ಸಿನಿಮಾ ನಿರ್ಮಾಣ ಸಂಸ್ಥೆ ಲಾಭದಾಯಕವಾಗಿರಲಿಲ್ಲ.

    3ನೇ ಸಿನಿಮಾ 'ರಾಜಕುಮಾರ' ಹೊಸ ದಾಖಲೆ

    3ನೇ ಸಿನಿಮಾ 'ರಾಜಕುಮಾರ' ಹೊಸ ದಾಖಲೆ

    ಪುನೀತ್ ರಾಜ್‌ಕುಮಾರ್ ನಟಿಸಿದ 'ರಾಜಕುಮಾರ' ಹೊಂಬಾಳೆ ನಿರ್ಮಸಿದ ಮೂರನೇ ಸಿನಿಮಾ. ಪುನೀತ್ ರಾಜ್‌ಕುಮಾರ್ ಹಾಗೂ ಸಂತೋ‍ಷ್ ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ ನಿರ್ಮಾಣ ಆಗಿದ್ದ 'ರಾಜಕುಮಾರ' ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತ್ತು. 2017ರಲ್ಲಿ ತೆರೆಕಂಡಿದ್ದ ಈ ಸಿನಿಮಾ, ಅಲ್ಲಿವರೆಗಿನ ಎಲ್ಲಾ ದಾಖಲೆಗಳನ್ನೂ ಉಡೀಸ್ ಮಾಡಿತ್ತು. ಮೂಲಗಳ ಪ್ರಕಾರ, 'ರಾಜಕುಮಾರ' ಬಾಕ್ಸಾಫೀಸ್‌ನಲ್ಲಿ 76 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇಲ್ಲಿಂದ ಹೊಂಬಾಳೆ ಫಿಲ್ಮ್ಸ್ ಸೋಲನ್ನೇ ಕಂಡಿಲ್ಲ.

    ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್'

    ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್'

    'ಕೆಜಿಎಫ್ ಚಾಪ್ಟರ್ 1' ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಾಗಿತ್ತು. ಸ್ಯಾಂಡಲ್‌ವುಡ್‌ನ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. 'ಕೆಜಿಎಫ್ 1' ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ 250 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಹಾಗೇ 'ಕೆಜಿಎಫ್ 2'ಗೂ ಮುನ್ನ ಪುನೀತ್ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ 'ಯುವರತ್ನ' ರಿಲೀಸ್ ಆಗಿತ್ತು. ಮೊದಲ ವಾರದಲ್ಲಿ ಸಿನಿಮಾ ಸುಮಾರು 30 ಕೋಟಿ ರೂ. ಗಳಿಸಿತ್ತು. ಆದರೆ, ಕೋವಿಡ್ ಎರಡನೇ ಅಲೆ ಹೆಚ್ಚಾಗಿದ್ದರಿಂದ ಥಿಯೇಟರ್‌ನಿಂದ ಓಟಿಟಿಗೆ ಶಿಫ್ಟ್ ಆಗಿತ್ತು. ಆಗ ಬಳಿಕ ತೆರೆಕಂಡ 'ಕೆಜಿಎಫ್ ಚಾಪ್ಟರ್ 2' 1250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.

    ವಿಶ್ವ ಮಟ್ಟದಲ್ಲಿ ಸದ್ದು ಮಾಡ್ತಿದೆ 'ಕಾಂತಾರ'

    ವಿಶ್ವ ಮಟ್ಟದಲ್ಲಿ ಸದ್ದು ಮಾಡ್ತಿದೆ 'ಕಾಂತಾರ'

    15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ 'ಕಾಂತಾರ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. 'ಕೆಜಿಎಫ್', 'ಬಾಹುಬಲಿ'ಯಂತಹ ದೈತ್ಯ ಸಿನಿಮಾಗಳ ದಾಖಲೆಯನ್ನೇ ಹಿಂದಿಕ್ಕಿ ಮುನ್ನುಗ್ಗುತ್ತಿದೆ. 'ಕಾಂತಾರ' ವಿಶ್ವದಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡು ಮುನ್ನುಗ್ಗುತ್ತಿದೆ.

    7 ಸಿನಿಮಾ.. 2000 ಕೋಟಿ ರೂ. ಕಲೆಕ್ಷನ್

    7 ಸಿನಿಮಾ.. 2000 ಕೋಟಿ ರೂ. ಕಲೆಕ್ಷನ್

    ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 7 ಸಿನಿಮಾಗಳು ಈಗಾಗಲೇ ರಿಲೀಸ್ ಆಗಿದೆ. ಒಂದು ಕಾಲದಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಲು ಪರದಾಡುತ್ತಿದ್ದ ಕನ್ನಡ ಸಿನಿಮಾ ಈಗ ಆರಾಮಾಗಿ 100 ಕೋಟಿ ರೂ. ಕಲೆಕ್ಷನ್ ಮಾಡುತ್ತಿದೆ. ಈ 7 ಸಿನಿಮಾಗಳ ಕಲೆಕ್ಷನ್ ಹೀಗಿದೆ.

    ನಿನ್ನಿಂದಲೇ 22 ಕೋಟಿ ರೂ.
    ಮಾಸ್ಟರ್ ಪೀಸ್ 43 ಕೋಟಿ ರೂ.
    ರಾಜಕುಮಾರ 76 ಕೋಟಿ ರೂ.
    ಕೆಜಿಎಫ್ 1 250 ಕೋಟಿ ರೂ.
    ಯುವರತ್ನ 42 ಕೋಟಿ ರೂ.
    ಕೆಜಿಎಫ್ 2 1250 ಕೋಟಿ ರೂ.
    ಕಾಂತಾರ 305 ಕೋಟಿ ರೂ. (350 ಕೋಟಿ ರೂ. ನಿರೀಕ್ಷೆ)
    ಒಟ್ಟು 1988 ಕೋಟಿ ರೂ. ( 2000 ಕೋಟಿ ರೂ. ನಿರೀಕ್ಷೆ)

    ಕೆಜಿಎಫ್ 2, ಕಾಂತಾರ ಮೂಲಕ ಬಾಕ್ಸ್ಆಫೀಸ್ ಕಿಂಗ್ ಆಗಿರುವ ಹೊಂಬಾಳೆ ಫಿಲ್ಮ್ಸ್‌ನ ಮುಂದಿನ 7 ನಾಯಕರಿವರುಕೆಜಿಎಫ್ 2, ಕಾಂತಾರ ಮೂಲಕ ಬಾಕ್ಸ್ಆಫೀಸ್ ಕಿಂಗ್ ಆಗಿರುವ ಹೊಂಬಾಳೆ ಫಿಲ್ಮ್ಸ್‌ನ ಮುಂದಿನ 7 ನಾಯಕರಿವರು

    English summary
    Ninnindale to KGF to Kantara Hombale Films Gain 2000Crore In Just 7 Films, Know More.
    Friday, November 4, 2022, 15:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X