'ಯಶಸ್ವಿ'ಯಾಗಿ ನೆರವೇರಿದ 'ಬಿಗ್ ಬಾಸ್' ನಿರಂಜನ್ ದೇಶಪಾಂಡೆ ಮದುವೆ

By Harshitha

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಮೂಲಕ ಕರುನಾಡ ಮನೆಮನದಲ್ಲಿಯೂ ಜನಪ್ರಿಯತೆ ಗಳಿಸಿದ ಆರ್.ಜೆ ನಿರಂಜನ್ ದೇಶಪಾಂಡೆ ಸದ್ದು-ಸುದ್ದಿ ಮಾಡದೇ ಇಂದು ಸಪ್ತಪದಿ ತುಳಿದಿದ್ದಾರೆ.

ಒಂದ್ಕಡೆ ನಟಿ ಅಮೂಲ್ಯ ವಿವಾಹ ಮಹೋತ್ಸವ ಇಂದು ಅದ್ಧೂರಿಯಾಗಿ ಜರುಗಿದ್ರೆ, ಇನ್ನೊಂದ್ಕಡೆ ನಿರಂಜನ್ ದೇಶಪಾಂಡೆ ಕೂಡ ಇವತ್ತು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

ಹೊಸ ಬಾಳಿಗೆ ಅಡಿಯಿಟ್ಟ ನಿರಂಜನ್ ದೇಶಪಾಂಡೆ

ಹೊಸ ಬಾಳಿಗೆ ಅಡಿಯಿಟ್ಟ ನಿರಂಜನ್ ದೇಶಪಾಂಡೆ

ಯಶಸ್ವಿನಿ ಜೊತೆ ನಿರಂಜನ್ ದೇಶಪಾಂಡೆ ಇಂದು ನವ ಬಾಳಿಗೆ ಕಾಲಿಟ್ಟಿದ್ದಾರೆ.

ಜಗ್ಗೇಶ್ ಶುಭಾಶಯ

ಜಗ್ಗೇಶ್ ಶುಭಾಶಯ

ನಿರಂಜನ್-ಯಶಸ್ವಿನಿ ವಿವಾಹ ಮಹೋತ್ಸವಕ್ಕೆ ತೆರಳಿ ನವರಸ ನಾಯಕ ಜಗ್ಗೇಶ್ ಶುಭ ಹಾರೈಸಿದ್ದಾರೆ.

ವಿಶ್ ಮಾಡಿದ 'ಕಿರಿಕ್' ಕೀರ್ತಿ

ವಿಶ್ ಮಾಡಿದ 'ಕಿರಿಕ್' ಕೀರ್ತಿ

'ಕಿರಿಕ್' ಕೀರ್ತಿ ಹಾಗೂ ನಿರಂಜನ್ ದೇಶಪಾಂಡೆ ಎಷ್ಟು ಕ್ಲೋಸ್ ಫ್ರೆಂಡ್ಸ್ ಎಂಬುದನ್ನ ನೀವೆಲ್ಲ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನೋಡಿದ್ದೀರಾ. ಇಂದು ಆಪ್ತಮಿತ್ರನ ಮದುವೆಗೆ ತೆರಳಿ ನವ ಜೋಡಿಗೆ 'ಕಿರಿಕ್' ಕೀರ್ತಿ ವಿಶ್ ಮಾಡಿದ್ದಾರೆ.

ಕಳೆದ ವರ್ಷವೇ ಮದುವೆ ಆಗಬೇಕಿತ್ತು

ಕಳೆದ ವರ್ಷವೇ ಮದುವೆ ಆಗಬೇಕಿತ್ತು

ಹಾಗ್ನೋಡಿದ್ರೆ, ನಿರಂಜನ್-ಯಶಸ್ವಿನಿ ಮದುವೆ ಕಳೆದ ವರ್ಷವೇ ಆಗಬೇಕಿತ್ತು. ಆದ್ರೆ, ಅಷ್ಟರಲ್ಲಿ ನಿರಂಜನ್ ಗೆ 'ಬಿಗ್ ಬಾಸ್' ಆಫರ್ ಸಿಕ್ತು. ಹೀಗಾಗಿ, ಮದುವೆ ದಿನಾಂಕವನ್ನ ಮುಂದಕ್ಕೆ ತಳ್ಳಿ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನಿರಂಜನ್ ಭಾಗವಹಿಸಿದ್ರು.

ಈಗ 'ಮದುವೆ' ಭಾಗ್ಯ

ಈಗ 'ಮದುವೆ' ಭಾಗ್ಯ

ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಿರಂಜನ್-ಯಶಸ್ವಿನಿ ಇಂದು ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ದಂಪತಿಗಳಿಗೆ ನಮ್ಮ ಕಡೆಯಿಂದ 'ಹ್ಯಾಪಿ ಮ್ಯಾರೀಡ್ ಲೈಫ್'.

More from Filmibeat

English summary
Niranjan Deshpande of 'Bigg Boss Kannada 4' fame got married to Yashaswini today May 12th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X