»   » ಜಾಲಿಡೇಸ್ ಹುಡುಗನ 'ಕರೋನಾ' ಪ್ಯಾರ್ ಹೈ

ಜಾಲಿಡೇಸ್ ಹುಡುಗನ 'ಕರೋನಾ' ಪ್ಯಾರ್ ಹೈ

By: ಜೀವನರಸಿಕ
Subscribe to Filmibeat Kannada

ಕನ್ನಡದಲ್ಲಿ ಹೊಸಬರ ಸಿನಿಮಾಗಳು ಶುರುವಾಗ್ತಾನೇ ಇರ್ತವೆ. ಆದ್ರೆ ಪ್ರತೀ ಸಿನಿಮಾನೂ ಏನಾದ್ರೂ ಒಂದು ವಿಭಿನ್ನತೆಯನ್ನ ಇಟ್ಕೊಂಡು ಶುರುವಾಗುತ್ತೆ. ಈಗ ಕನ್ನಡದಲ್ಲಿ ಅಂತಹದ್ದೇ ಒಂದು ಸಿನಿಮಾ ಶುರುವಾಗ್ತಿದೆ. ಸಿನಿಮಾದ ಹೆಸ್ರು 'ಕರೋನಾ'.

ಹೆಸರೇ ವಿಚಿತ್ರವಾಗಿದೆಯಲ್ಲ ಅನ್ನಿಸುತ್ತೆ. ಇದು ಹಿಂದಿಯ ಕರೋನಾ ಅಲ್ಲ. ಗ್ರೀಕ್ ಬಾಷೆಯಲ್ಲೇನೋ 'ಕರೋನಾ' ಅಂದ್ರೆ ಡ್ರಾಪ್ ಕೊಡಿ ಅನ್ನೋ ಅರ್ಥ ಇದೆಯಂತೆ. ಗಮನ ಸೆಳೆಯೋ ಹೆಸರನ್ನ ಇಟ್ಟುಕೊಂಡು ಕ್ಯೂರಿಯಾಸಿಟಿ ಹುಟ್ಟಿಸೋದು ಕೂಡ ಇತ್ತೀಚೆಗಿನ ಟ್ರೆಂಡ್. ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಅಂದ್ರೆ ಕಳೆದ ವರ್ಷ ಬಂದ ಯಶಸ್ವಿ ಸಿನಿಮಾ 'ಲೂಸಿಯಾ'. ['ಲೂಸಿಯಾ' ಚಿತ್ರ ವಿಮರ್ಶೆ]

Actor Niranjan Shetty

ಇನ್ನು ಈ ಸಿನಿಮಾವನ್ನ ಡೈರೆಕ್ಟ್ ಮಾಡ್ತಿರೋದು ನಿರ್ದೇಶಕ ಚಿತ್ರಸಾಹಿತಿ ವಿ.ನಾಗೇಂದ್ರಪ್ರಸಾದ್ ಸಹೋದರ ಆನಂದ್ ಪ್ರಿಯ. ತಾರಾಗಣದಲ್ಲಿ ಇರೋದು 'ಕೇಸ್ ನಂ 18/9' ಚಿತ್ರ ಮಾಡಿ ಈಗ ಪೈಪೋಟಿ ಮಾಡ್ತಾ ಇರೋ ನಿರಂಜನ್ ಶೆಟ್ಟಿ. ನಿರಂಜನ್ ಶೆಟ್ಟಿಗೆ ಸಾಥ್ ಕೊಡ್ತಿರೋದು ರಂಗಾಯಣ ರಘು.

ಕರೋನಾ ಅನ್ನೋ ಹೆಸರೇ ಒಂದು ತರಹ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡುತ್ತೆ. ಒಳ್ಳೆಯ ಕಥೆಯನ್ನ ಮಾಡಿರೋ ಚಿತ್ರತಂಡ ಸದ್ಯದಲ್ಲೇ ಸಿನಿಮಾದ ಮುಹೂರ್ತ ಮಾಡಿಕೊಳ್ಳಲಿದೆ. ಟೈಟಲ್ ಏನೋ ಭಿನ್ನವಾಗಿದೆ. ಸಿನಿಮಾನೂ ಅಷ್ಟೇ ಭಿನ್ನವಾಗಿದ್ರೆ ಸೂಪರ್.

English summary
Recent trend in Sandalwood movies is giving different and catchy titles. One of the Kannada movie now titled as 'Karona', it is not a Hindi word, it's a Greek work which means "give a drop" says the movie team. The movie directed by Anand Priya. 
Please Wait while comments are loading...