15 ಅವತಾರಗಳಲ್ಲಿ ಮಿಂಚಿದ 'ಕಿಲಾಡಿ' ನಿರಂಜನ್

ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ಎರಡ್ಮೂರು ಗೆಟಪ್ ಹಾಕೋದೇ ಕಷ್ಟ. ಇಲ್ಲೊಬ್ಬ 'ಜಗತ್ ಕಿಲಾಡಿ' 15 ಅವತಾರದಲ್ಲಿ ಕಾಣಿಸಿಕೊಂಡು ಸದ್ದು ಮಾಡುತ್ತಿದ್ದಾನೆ. ಕನ್ನಡದಲ್ಲಿ ನ್ಯಾಚುರಲ್ ಸ್ಟಾರ್ ಅಂತಲೇ ಗುರುತಿಸಿಕೊಂಡಿರುವ ನಟ ನಿರಂಜನ್ ಶೆಟ್ಟಿ 'ಜಗತ್ ಕಿಲಾಡಿ' ಸಿನಿಮಾ ನವೆಂಬರ್ 9 ರಂದು ಪ್ರೇಕ್ಷರೆದುರು ಬರ್ತಿದ್ದಾರೆ.

ನಟಿಸಿದ್ದು ಐದಾರು ಸಿನಿಮಾಗಳಾದ್ರೂ, ಉತ್ತಮ ಕಥೆಯ ಚಿತ್ರಗಳಿಗೆ ಹೆಚ್ಚು ಮನ್ನಣೆ ನೀಡ್ತಾರೆ ನಿರಂಜನ್​ ಶೆಟ್ಟಿ. ಇದೀಗ ಮತ್ತೊಂದು ಸ್ಪೆಷಲ್​ ಕತೆಯೊಂದಿಗೆ, ಯೂನಿವರ್ಸಲ್​ ಸಬ್ಜೆಕ್ಟ್ ನೊಂದಿಗೆ ನಿರಂಜನ್​ ಬಂದಿದ್ದಾರೆ.

ನಿರಂಜನ್ ಅವರದ್ದು ಈ ಸಿನಿಮಾದಲ್ಲಿ ನೆಗಿಟೀವ್ ಶೇಡ್ ಪಾತ್ರ. ಸುಮಾರು 15 ವಿಭಿನ್ನ ಗೆಟಪ್​ ಗಳಲ್ಲಿ ಮಿಂಚಿದ್ದಾರಂತೆ. ಜಗತ್​ ಕಿಲಾಡಿ ತಮಿಳಿನ 'ಸದುರಂಗ ವೇಟೈ' ಸಿನಿಮಾದ ರಿಮೇಕ್ ಆಗಿದ್ದು, 'ಹಣ ಎಂಬುದು ಮನುಷ್ಯನ ಮೇಜರ್​ ವೇಕ್ ​ನೆಸ್​. ಹಣಕ್ಕಾಗಿ ಮನುಷ್ಯ ಏನು​ ಬೇಕಾದರೂ ಮಾಡಲು ಹಿಂದೇಟು ಹಾಕಲ್ಲ. ಅದ್ರಲ್ಲೂ ಕೆಲವರು ಜನರ ಮುಗ್ಧತೆ ಬಳಸಿಕೊಂಡು ಹೇಗೆ ಹಣ ಮಾಡ್ತಾರೆ ಅನ್ನೋದೆ ಸಿನಿಮಾದ ಕಥೆ.

niranjan shettys jagat khiladi releasing on november 9th

ನಿರಂಜನ್​ ಜೊತೆಗೆ ದೊಡ್ಡ ತಾರಾಗಣವೇ ಚಿತ್ರತಂಡದಲ್ಲಿದೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್​, ಮೈಕೊ ನಾಗರಾಜ್​, ರವಿ ಚೇತನ್​ ಕೂಡ ನಟಿಸಿದ್ದಾರೆ. ಲಯನ್ ರಮೇಶ್‌ ಬಾಬು ಕೆ.ಆರ್‌ ಪುರಂ ನಿರ್ಮಾಣದ ಈ ಸಿನಿಮಾ ಶಂಕರ್​ನಾಗ್​ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗ್ತಿರೋದು ಮತ್ತೊಂದು ವಿಶೇಷ .

ಚಿತ್ರದ ಟೆಕ್ನಿಕಲ್ ತಂಡ
ಅರವ್.ಬಿ.ಧೀರೇಂದ್ರ ಆಕ್ಷನ್ ಕಟ್‌ ಹೇಳಿದ್ದು, ಈ ಚಿತ್ರವನ್ನ ಲಯನ್ ಆರ್‌. ರಮೇಶ್‌ ಬಾಬು ಕೆ.ಆರ್‌ ಪುರಂ ಅವರು ನಿರ್ಮಾಣ ಮಾಡಿದ್ದಾರೆ. ಗಿರಿಧರ್ ದಿವಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ಮಜಾ ಟಾಕೀಸ್ ಖ್ಯಾತಿಯ​​ ಪವನ್​​, ರಂಗಾಯಣ ರಘು, ಸುಚೇಂದ್ರ ಪ್ರಸಾದ್​, ಜೈ ಜಗದೀಶ್, ರವಿ ಚೇತನ್​, ಕಡ್ಡಿ ವಿಶ್ವ ಹೀಗೆ ಇನ್ನು ಹಲವು ಕಲಾವಿದರ ದಂಡೇ ಇದೆ

More from Filmibeat

English summary
Kannada actor niranjan shetty starrer jagat khiladi movie releasing on november 9th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X