For Quick Alerts
  ALLOW NOTIFICATIONS  
  For Daily Alerts

  ಹಣ ವಂಚನೆ ಆರೋಪ: 'ಸೂಪರ್ ಸ್ಟಾರ್‌' ಸಿನಿಮಾ ನಿರ್ದೇಶಕನ ವಿರುದ್ಧ ನಿರ್ಮಾಪಕರಿಂದ ದೂರು

  |

  ರಿಯಲ್ ಸ್ಟಾರ್ ಉಪೇಂದ್ರ ಸಹೋದರನ ಪುತ್ರ ನಿರಂಜನ್ ನಟನೆಯ 'ಸೂಪರ್ ಸ್ಟಾರ್‌' ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಇದರ ಬೆನ್ನಲ್ಲೇ ಚಿತ್ರದ ನಿರ್ದೇಶಕ ಆರ್‌. ವೆಂಕಟೇಶ್ ಬಾಬು ತಮಗೆ 1 ಕೋಟಿ 10 ಲಕ್ಷ ರೂ. ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ನಿರ್ಮಾಪಕ ಮೈಲಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

  2 ವರ್ಷಗಳ ಹಿಂದೆ ಬಹಳ ಅದ್ಧೂರಿಯಾಗಿ 'ಸೂಪರ್ ಸ್ಟಾರ್‌' ಸಿನಿಮಾ ಮುಹೂರ್ತ ನೆರವೇರಿತ್ತು. ಸಿನಿಮಾ ಸೂಪರ್ ಹಿಟ್ ಆಗುತ್ತದೆ. ಬಹಳ ಹಣ ಬರುತ್ತದೆ ಎಂದು ಹೇಳಿ ನಿರ್ಮಾಪಕರಿಂದ ನಿರ್ದೇಶಕ ಆರ್‌. ವೆಂಕಟೇಶ್ ಬಾಬು 1 ಕೋಟಿ 10 ಲಕ್ಷ ರೂ. ಹಣ ಪಡೆದಿದ್ದರಂತೆ. ಆದರೆ ಆ ಹಣವನ್ನು ಚಿತ್ರಕ್ಕೆ ಖರ್ಚು ಮಾಡಲೇ ನಿರ್ದೇಶಕ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ತಮಗೆ ಗೊತ್ತಿಲ್ಲದೇ ಹೊಸ ನಿರ್ಮಾಪಕರಾದ ಸತ್ಯನಾರಾಯಣ ಹಾಗೂ ರಮಾದೇವಿ ಅವರಿಗೆ ಚಿತ್ರವನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಮೂವರ ವಿರುದ್ಧ ನಿರ್ಮಾಪಕ ಮೈಲಾರಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ಉಪ್ಪಿಗೂ 'ಕಾಂತಾರ'ದಂತಹ ಸಿನಿಮಾ ಮಾಡೋ ಆಸೆ: ಶೀಘ್ರದಲ್ಲೇ ರಿಷಬ್ ಜೊತೆ ಚರ್ಚೆ!ಉಪ್ಪಿಗೂ 'ಕಾಂತಾರ'ದಂತಹ ಸಿನಿಮಾ ಮಾಡೋ ಆಸೆ: ಶೀಘ್ರದಲ್ಲೇ ರಿಷಬ್ ಜೊತೆ ಚರ್ಚೆ!

  ಕೊರೋನಾ ಹಾವಳಿ ಸಮಯದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಹಿನ್ನೆಡೆ ಉಂಟಾಗಿತ್ತು. ಈ ಸಮಯದಲ್ಲಿ ಸತ್ಯನಾರಾಯಣ ಎಂಬುವವರ ಜೊತೆ ಸೇರಿ ಆರ್‌. ವೆಂಕಟೇಶ್ ಬಾಬು ಚಿತ್ರದ ಮಾಲೀಕತ್ವವನ್ನೇ ಬದಲಿಸಿದ್ದರು. ಹೊಸ ನಿರ್ಮಾಪಕರಿಂದ ಹಣ ಪಡೆದು ಸಿನಿಮಾ ಶೂಟಿಂಗ್ ಮುಂದುವರೆಸಿದ್ದಾರೆ. ನನ್ನ ಹಣ ಕೇಳು ಹೋದರೆ ಧಮ್ಕಿ ಹಾಕಿ, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ಮಾಪಕ ಮೈಲಾರಿ ದೂರಿನಲ್ಲಿ ತಿಳಿಸಿದ್ದಾರೆ.

  ಸೂಪರ್ ಹಿಟ್ ಟೈಟಲ್‌ನಲ್ಲಿ ಸಿನಿಮಾ

  ಸೂಪರ್ ಹಿಟ್ ಟೈಟಲ್‌ನಲ್ಲಿ ಸಿನಿಮಾ

  ರಿಯಲ್ ಸ್ಟಾರ್ ಉಪೇಂದ್ರ 'ಸೂಪರ್ ಸ್ಟಾರ್' ಎನ್ನುವ ಸಿನಿಮಾದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಅದೇ ಟೈಟಲ್‌ನಲ್ಲಿ ಅವರ ಸಹೋದರನ ಮಗ ನಿರಂಜನ್ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ಚಿತ್ರದಲ್ಲಿ ನಿರಂಜನ್ ಡ್ಯಾನ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆತ ಹೇಗೆ ಡ್ಯಾನ್ಸಿಂಗ್ 'ಸೂಪರ್ ಸ್ಟಾರ್' ಆಗುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ನಡೀತಿದೆ. ಹಾಗಾಗಿ ಚಿತ್ರಕ್ಕೆ ಈ ಟೈಟಲ್ ಫಿಕ್ಸ್ ಆಗಿದೆ.

  ಡ್ಯಾನ್ಸ್ ಕುರಿತಾದ ಸಿನಿಮಾ

  ಡ್ಯಾನ್ಸ್ ಕುರಿತಾದ ಸಿನಿಮಾ

  'ಸೂಪರ್ ಸ್ಟಾರ್' ಡ್ಯಾನ್ಸರ್‌ ಒಬ್ಬನ ಸುತ್ತಾ ಸುತ್ತುವ ಕಥೆ. ಹಾಗಾಗಿ ಚಿತ್ರದಲ್ಲಿ ಖ್ಯಾತ ಕೊರಿಯೋಗ್ರಫರ್ ಹಾಗೂ ಪ್ರಭುದೇವಾ ತಂದೆ ಮೂಗುರು ಸುಂದರ್ ಕೂಡ ನಟಿಸುತ್ತಿದ್ದಾರೆ. ಕಥೆಗೆ ತಕ್ಕಂತೆ ಅವರಿಗಾಗಿ ಒಂದು ವಿಶೇಷ ಪಾತ್ರ ಚಿತ್ರದಲ್ಲಿ ಇದೆಯಂತೆ. ಜಾರಾ ಯಸ್ಮಿನ್ ಚಿತ್ರದಲ್ಲಿ ನಿರಂಜನ್ ಜೋಡಿಯಾಗಿ ಮಿಂಚಿದ್ದಾರೆ. ಸಾಕಷ್ಟು ಜಾಹೀರಾತು, ಮ್ಯೂಸಿಕ್ ವಿಡಿಯೋಗಳಲ್ಲಿ ಮಿಂಚಿರುವ ಜಾರಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

  ಎಲ್ಲಾ ಸಿದ್ಧತೆ ನಡೆಸಿ ನಿರಂಜನ್ ಎಂಟ್ರಿ

  ಎಲ್ಲಾ ಸಿದ್ಧತೆ ನಡೆಸಿ ನಿರಂಜನ್ ಎಂಟ್ರಿ

  ಚಿಕ್ಕಮ್ಮ ಪ್ರಿಯಾಂಕ ಉಪೇಂದ್ರ ನಟನೆಯ 'ಸೆಕೆಂಡ್ ಹಾಫ್' ಚಿತ್ರದಲ್ಲಿ ನಟಿಸಿದ್ದ ನಿರಂಜನ್ ಹೀರೊ ಆಗಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಎತ್ತರದ ನಿಲುವು, ಕಟ್ಟಮಸ್ತು ದೇಹದ ನಿರಂಜನ್ ಡ್ಯಾನ್ಸ್, ಫೈಟ್ ಎಲ್ಲಾ ಕಲಿತು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆಲ ದಿನಗಳ ಹಿಂದೆ ನಿರಂಜನ್ ಹೀರೊ ಆಗಿ ನಟಿಸಿರುವ 'ನಮ್‌ ಹುಡುಗ್ರು' ಸಿನಿಮಾ ತೆರೆಗೆ ಬಂದಿತ್ತು. ಆದರೆ ಆ ಸಿನಿಮಾ ಅಷ್ಟಾಗಿ ಸೌಂಡ್ ಮಾಡಲಿಲ್ಲ.

  3 ಸಿನಿಮಾಗಳಲ್ಲಿ ನಿರಂಜನ್ ಬ್ಯುಸಿ

  3 ಸಿನಿಮಾಗಳಲ್ಲಿ ನಿರಂಜನ್ ಬ್ಯುಸಿ

  ಹೀರೊ ಆಗಿ ಮೊದಲ ಸಿನಿಮಾ ಬಿಡುಗಡೆಗೂ ಮೊದಲೇ ನಿರಂಜನ್ 3 ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. 'ಸೂಪರ್ ಸ್ಟಾರ್' ಜೊತೆಗೆ ನಾಗಶೇಖರ್ ನಿರ್ದೇಶನದ 'ಕ್ಯೂ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. 'ಹಂಟರ್' ಎನ್ನುವ ಮತ್ತೊಂದು ಚಿತ್ರದಲ್ಲೂ ನಟಿಸಲು ಒಪ್ಪಿಕೊಂಡಿದ್ದರು. ಆದರೆ ನಿರಂಜನ್ ನಟನೆಯ 'ಸೂಪರ್ ಸ್ಟಾರ್' ಇದೀಗ ಸಂಕಷ್ಟಕ್ಕೆ ಸಿಲುಕಿದೆ.

  ಈ ವರ್ಷ ಕಬ್ಜ ಬಿಡುಗಡೆಯಾಗುತ್ತಾ? ಆರ್ ಚಂದ್ರು ಕೊಟ್ಟ ಉತ್ತರಕ್ಕೆ ಪಕ್ಕದಲ್ಲೇ ಇದ್ದ ಉಪ್ಪಿ ಶಾಕ್!ಈ ವರ್ಷ ಕಬ್ಜ ಬಿಡುಗಡೆಯಾಗುತ್ತಾ? ಆರ್ ಚಂದ್ರು ಕೊಟ್ಟ ಉತ್ತರಕ್ಕೆ ಪಕ್ಕದಲ್ಲೇ ಇದ್ದ ಉಪ್ಪಿ ಶಾಕ್!

  English summary
  Niranjan Starrer Super Star Film producer Mylari lodges cheating complaint against director R venkatesh babu. Know more.
  Monday, November 14, 2022, 15:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X