'ರಂಗಿತರಂಗ' ಸಹೋದರರ 'ರಾಜರಥ' ಚಿತ್ರದ ಶೂಟಿಂಗ್ ನಲ್ಲಿ ಅವಘಡ
ಅನೂಪ್ ಭಂಡಾರಿ ನಿರ್ದೇಶನದ 'ರಾಜರಥ' ಸಿನಿಮಾದ ಶೂಟಿಂಗ್ ನಲ್ಲಿ ಅವಘಡ ನಡೆದಿದೆ. ಚಿತ್ರದ ಚಿತ್ರೀಕರಣದ ವೇಳೆ ನಟ ನಿರೂಪ್ ಭಂಡಾರಿ ಬಲಗೈಗೆ ಪೆಟ್ಟು ಬಿದ್ದಿದೆ.
'ರಾಜರಥ' ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತಿದ್ದು, ಚಿತ್ರದ ಸಾಹಸ ದೃಶ್ಯದಲ್ಲಿ ನಟ ನಿರೂಪ್ ಭಂಡಾರಿ ಭಾಗಿಯಾಗಿದ್ದರು. ಸ್ಟಂಟ್ ಮಾಡುವ ವೇಳೆ ನಿರೂಪ್ ಆಕಸ್ಮಿಕವಾಗಿ ಕೆಳಗೆ ಬಿದ್ದ ಕಾರಣ ಅವರ ಬಲಗೈಗೆ ಗಾಯವಾಗಿದೆ.

ಸದ್ಯ ನಿರೂಪ್ ಭಂಡಾರಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು 2 ತಿಂಗಳು ವಿಶ್ರಾಂತಿ ಪಡೆಯುವುದಕ್ಕೆ ಸೂಚಿಸಿದ್ದಾರಂತೆ. ಆದರೆ, ವೃತ್ತಿಪರತೆ ಮೆರೆದ ನಿರೂಪ್, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಅಂದಹಾಗೆ, 'ರಂಗಿತರಂಗ' ಸಿನಿಮಾದ ನಂತರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಭಂಡಾರಿ ಸಹೋದರರು ಈಗ 'ರಾಜರಥ' ಚಿತ್ರವನ್ನು ಮಾಡುತ್ತಿದ್ದಾರೆ.
English summary
Kannada Actor Nirup Bhandari has been injured during 'Rajaratha' film shooting.


Click it and Unblock the Notifications